90
ಸಾಗರ : ತಾಲ್ಲೂಕಿನ ಉಪ ಕಾರಾಗೃಹ ಸಾರ್ವಜನಿಕ ಸೇವೆ ಲಭ್ಯವಾಗುತ್ತಿಲ್ಲ ಸುಮಾರು ಒಂದೂವರೇ ಕೋಟಿ ವೆಚ್ಚದಲ್ಲಿ ಜೈಲ್ ಕಾಮಗಾರಿ ದುರಸ್ತಿ ಮಾಡಿ ವರ್ಷಗಳೇ ಉರುಳಿದರೂ ಇನ್ನೂ ಆರಂಭವಾಗಿಲ್ಲ ತಾಲ್ಲೂಕು ಉಪ ಕಾರಾಗೃಹ ಕಾರಣವೇನು..?!

ಸಾಗರ :- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿರುವ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯ ತಾಲ್ಲೂಕು ಉಪ ಕಾರಾಗೃಹವೂ 1971 ನೇ ಇಸವಿಯಲ್ಲಿ ಆರಂಭಗೊಂಡಿದ್ದು, ಇತ್ತೀಚಿಗೆ ಜೈಲ್ ಗೋಡೆ ಕುಸಿದು ಬಿದ್ದಿದ್ದು ಕರ್ನಾಟಕ ರಾಜ್ಯ ಸರ್ಕಾರ ಸುಮಾರು ಒಂದೂವರೇ ಕೋಟಿ ವೆಚ್ಚದಲ್ಲಿ ದುರಸ್ಥಿ ಕಾಮಗಾರಿಯನ್ನು ಕೈಗೆತ್ತಿಕೊಂಡಿತ್ತು ಆ ಕಾಮಗಾರಿಯ ನಿರ್ವಹಣೆ ಜವಾಬ್ದಾರಿಯನ್ನು ಕರ್ನಾಟಕ ಲೋಕೋಪಯೋಗಿ ಇಲಾಖೆಯೂ ಸುಮಾರು 08 ತಿಂಗಳ ಹಿಂದೇ ಸಂಬಂಧ ಪಟ್ಟ ಇಲಾಖೆಗೆ ಕಾಮಗಾರಿ ಪೂರ್ಣಗೊಳಿಸಿ ನೀಡಿದ್ದು ಕಾಮಗಾರಿ ಪೂರ್ಣಗೊಂಡಿದೆ . ಆದರೆ ಇನ್ನು ಸಾರ್ವಜನಿಕರಿಗೆ ಸೇವೆಗೆ ನಿಲುಕದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ.
