ಸಾಗರ ಜೈಲ್ ಪ್ರಾರಂಭವಾಗುವುದು ಯಾವಾಗ ..?! ಕೋಟಿ ಹಣ ನೀರಲ್ಲಿ ಮುಳುಗಿ ಹೋಯಿತೇ..?!

by EDITOR NEWS WARRIORS

ಸಾಗರ :  ತಾಲ್ಲೂಕಿನ ಉಪ ಕಾರಾಗೃಹ ಸಾರ್ವಜನಿಕ ಸೇವೆ ಲಭ್ಯವಾಗುತ್ತಿಲ್ಲ   ಸುಮಾರು ಒಂದೂವರೇ ಕೋಟಿ ವೆಚ್ಚದಲ್ಲಿ ಜೈಲ್ ಕಾಮಗಾರಿ  ದುರಸ್ತಿ ಮಾಡಿ ವರ್ಷಗಳೇ  ಉರುಳಿದರೂ ಇನ್ನೂ ಆರಂಭವಾಗಿಲ್ಲ ತಾಲ್ಲೂಕು ಉಪ ಕಾರಾಗೃಹ ಕಾರಣವೇನು..?!

ಸಾಗರ :- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿರುವ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯ ತಾಲ್ಲೂಕು ಉಪ ಕಾರಾಗೃಹವೂ 1971 ನೇ ಇಸವಿಯಲ್ಲಿ ಆರಂಭಗೊಂಡಿದ್ದು, ಇತ್ತೀಚಿಗೆ ಜೈಲ್ ಗೋಡೆ ಕುಸಿದು ಬಿದ್ದಿದ್ದು  ಕರ್ನಾಟಕ ರಾಜ್ಯ ಸರ್ಕಾರ ಸುಮಾರು ಒಂದೂವರೇ ಕೋಟಿ ವೆಚ್ಚದಲ್ಲಿ ದುರಸ್ಥಿ ಕಾಮಗಾರಿಯನ್ನು  ಕೈಗೆತ್ತಿಕೊಂಡಿತ್ತು  ಆ ಕಾಮಗಾರಿಯ ನಿರ್ವಹಣೆ ಜವಾಬ್ದಾರಿಯನ್ನು  ಕರ್ನಾಟಕ ಲೋಕೋಪಯೋಗಿ ಇಲಾಖೆಯೂ ಸುಮಾರು 08 ತಿಂಗಳ ಹಿಂದೇ ಸಂಬಂಧ ಪಟ್ಟ ಇಲಾಖೆಗೆ ಕಾಮಗಾರಿ ಪೂರ್ಣಗೊಳಿಸಿ ನೀಡಿದ್ದು  ಕಾಮಗಾರಿ  ಪೂರ್ಣಗೊಂಡಿದೆ . ಆದರೆ  ಇನ್ನು  ಸಾರ್ವಜನಿಕರಿಗೆ ಸೇವೆಗೆ ನಿಲುಕದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ.

ಅರಣ್ಯ ಹಾಗೂ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರು ‌ ಹಾಗೂ ‎ಕ್ಷೇತ್ರದ ಶಾಸಕರಾದ ಗೋಪಾಲ ಕೃಷ್ಣ ಬೇಳೂರು ರವರು ಸಾಗರದ ತಾಲ್ಲೂಕು ಉಪ ಕಾರಾಗೃಹ ಸಾರ್ವಜನಿಕರಿಗೆ ಸೇವೆಗೆ  ದೊರಕಲು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳಲ್ಲಿ ಚರ್ಚಿಸಿ ಪುನರ್ ಪ್ರಾರಂಭಕ್ಕೆ ಕ್ರಮ ಕೈಗೊಳ್ಳಲು ಸಾರ್ವಜನಿಕರು ಪತ್ರಿಕೆ ಮೂಲಕ ಒತ್ತಾಯಿಸಿದ್ದಾರೆ.

ಹಿಂದೆ ಕೂಡ ಬಂದ್ ಆಗಿದ್ದ ಕಾರಾಗೃಹ :

ಸುಮಾರು ನಾಲ್ಕು ವರ್ಷಗಳ ಹಿಂದೆ ಸಾಗರದ  ಉಪಕಾರಾಗೃಹ ಸಾರ್ವಜನಿಕ  ಸೇವೆಗೆ ಲಭ್ಯವಿರಲಿಲ್ಲ ಆಗ ಪತ್ರಿಕೆ ಅದನ್ನು ಸುದ್ದಿ ಮಾಡಿತ್ತು ಹಾಗೆ ಅಂದಿನ ಗೃಹ ಸಚಿವರಾಗಿದ್ದ ‌ ತೀರ್ಥಹಳ್ಳಿ ಕ್ಷೇತ್ರದ ಶಾಸಕರಾದ ಆರಗ ಜ್ಞಾನೇಂದ್ರ ಅವರ ಗಮನಕ್ಕೂ ತರಲಾಗಿತ್ತು ಕೂಡಲೇ ಸ್ಪಂದಿಸಿದ ಜ್ಞಾನೇಂದ್ರ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ ಕಾರಾಗೃಹ  ಪ್ರಾರಂಭಕ್ಕೆ ಚಾಲನೆ ನೀಡಿದ್ದರು.

Related Posts

Latest news
Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga : ದೊಡ್ಡಪೇಟೆ ಪೊಲೀಸರ ಮಹತ್ವದ ಕಾರ್ಯಾಚರಣೆ ನೇಪಾಳಿ ಮಂಜ ಅಂದರ್..! Railway shivamogga: ರೈಲ್ವೆ ಹಳಿಗೆ ಬಿದ್ದ ಮಹಿಳೆ ಯಾರು..?! Health department: ಆರೋಗ್ಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದ ಹರ್ಷ ಗುಪ್ತಾ ವರ್ಗಾವಣೆ..! 26 ವರ್ಷ ಸೇವೆ 30 ಸಲ ಎತ... North East police:ಯಲಹಂಕ ನ್ಯೂಟೌನ್ ಪೊಲೀಸರ ಮಹತ್ವದ ಕಾರ್ಯಾಚರಣೆ..! ವಿದೇಶಿ ಪ್ರಜೆಯಿಂದ ₹2 ಕೋಟಿ ಮೌಲ್ಯದ 2 ಕೆ.ಜ... ತೀರ್ಥಹಳ್ಳಿ : ನಾಬಳ ಶಚಿಂದ್ರ ಹೆಗ್ಡೆ ಪತ್ನಿ ಶ್ರೀಮತಿ ಅಚಲಾ ಶಚಿಂದ್ರ ಹೆಗ್ಡೆ ಇನ್ನಿಲ್ಲ...! ಏನಾಗಿತ್ತು ಇವರಿಗೆ..?!... ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ..! Shivamogga police : ಅಡಿಶನಲ್ ಎಸ್ ಪಿ ರಮೇಶ್ ಕುಮಾರ್ ಜೊತೆ ಕ್ರೈಂ ವಿಭಾಗದ ಇಬ್ಬರಿಗೆ ಮುಖ್ಯಮಂತ್ರಿ ಪದಕ..! ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ..!