Home ಶಿವಮೊಗ್ಗBig news: ಒಂದೇ ಮನೆಯಲ್ಲಿ ಐವರು ಆತ್ಮಹತ್ಯೆ..! ಏನು ಇದರ ಹಿಂದಿನ ಅಸಲಿ ಕಥೆ..?

Big news: ಒಂದೇ ಮನೆಯಲ್ಲಿ ಐವರು ಆತ್ಮಹತ್ಯೆ..! ಏನು ಇದರ ಹಿಂದಿನ ಅಸಲಿ ಕಥೆ..?

by EDITOR NEWS WARRIORS
ಶಿವಮೊಗ್ಗ:  ಆಶ್ವಥ್ ನಗರದ ಐದನೇ ತಿರುವಿನಲ್ಲಿರುವ ಹೊಮ್ಮರಡಿ ಕುಟುಂಬಕ್ಕೆ ಸೇರಿದ್ದ ಸಾನಿಧ್ಯ ಎಂಬ ಮನೆಯಲ್ಲಿ  ಡಾ.ಜಯಶ್ರೀ ಮತ್ತು‌ ಅವರ ಪುತ್ರ ಆಕಾಶ್ ನೇಣಿಗೆ ಶರಣಾಗಿದ್ದಾರೆ. ಡಾ. ಜಯಶ್ರೀ ಉಷಾ ನರ್ಸಿಂಗ್ ಎದುರಿನ ಹೊಮ್ಮರಡಿ ನರ್ಸಿಂಗ್ ಹೋಂ ನಡಿಸುತ್ತಿದ್ದರು ಆಕಾಶ್ ರಿಯಲ್ ಎಸ್ಟೇಟ್ ನಲ್ಲಿ ತೊಡಗಿಸಿಕೊಂಡಿದ್ದರು.
ಇದೇ ಮನೆಯಲ್ಲಿ ಐವರು ಆತ್ಮಹತ್ಯೆ..!
ಅಶ್ವಥ್ ನಗರದ ಐದನೇ ತಿರುವಿನಲ್ಲಿರುವ ಸಾನಿಧ್ಯ ಎನ್ನುವ ಮನೆ  ಐದು ಆತ್ಮಹತ್ಯೆಗಳಿಗೆ ಸಾಕ್ಷಿಯಾಗಿದೆ. ಹಿಂದೆ ಈ ಮನೆಯನ್ನು ತೆಗೆದುಕೊಂಡವರು  ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು. ನಂತರ ಆ ಮನೆಯನ್ನು ಡಾ. ನಾಗರಾಜ್ ಅವರು  ತೆಗೆದುಕೊಳ್ಳುತ್ತಾರೆ.ನಂತರ ಡಾ. ನಾಗರಾಜ್ ಅವರು ಕೂಡ ಆತ್ಮಹತ್ಯೆ ಹಾದಿ ಹಿಡಿಯುತ್ತಾರೆ. ಇದು ಆತ್ಮಹತ್ಯೆ ಅಲ್ಲ ಅವರ ಪತ್ನಿ ಕೊಲೆ ಮಾಡಿ ಆತ್ಮಹತ್ಯೆಯ ರೀತಿ ರೂಪಿಸಿದ್ದಾರೆ ಎನ್ನುವ ಮಾತುಗಳು ಅಂದು ಕೇಳಿಬಂದಿದ್ದವು ಆದರೆ ಅದಕ್ಕೆ ನಿಖರವಾದ ಸಾಕ್ಷಿಗಳು ಇಲ್ಲವಾದ್ದರಿಂದ ಅದು ಆತ್ಮಹತ್ಯೆ ಎಂದು ಸಾಬೀತಾಯಿತು . ನಂತರ ಅದೇ ಮನೆಯಲ್ಲಿ ಡಾಕ್ಟರ್ ನಾಗರಾಜ್ ನಿಧನದ ನಂತರ ಡಾಕ್ಟರ್ ಜಯಶ್ರೀ ಪುತ್ರ ಆಕಾಶ್ ಜೊತೆಗೆ ವಾಸವಾಗಿದ್ದರು ಎಲ್ಲವೂ ಸರಿಯಾಗಿತ್ತು ಪುತ್ರ ಆಕಾಶ್ ಗೆ ಮದುವೆ ಮಾಡಿಕೊಟ್ಟರು. ಸೊಸೆ ಕೂಡ  ಎಲ್ಲರೊಟ್ಟಿಗೂ ಬೆರೆತು ಚೆನ್ನಾಗಿ ಇದ್ದರು ಆದರೆ ಅದೊಂದು ದಿನ ತುಳಸಿ ಪೂಜೆ ಮುಗಿಸಿಕೊಂಡು ರಾತ್ರಿ ಮನೆಗೆ ಹೋದ ಸೊಸೆ ಬೆಳಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು ಇದು ಹಲವು ಅನುಮಾನಗಳನ್ನು ಸೃಷ್ಟಿ ಮಾಡಿದ್ದು ಆರಾಮಾಗಿ ಓಡಾಡಿಕೊಂಡು ಇದ್ದ ಸೊಸೆ ರಿಲ್ಸ್ ಗಳನ್ನು ಮಾಡಿ ಖುಷಿಯಿಂದ ಇದ್ದಳು ತನ್ನ ತವರು ಮನೆಗೂ ಕೂಡ ಮಾತನಾಡಿದ್ದಳು ಆದರೆ ಆಕೆ ಇದ್ದಕ್ಕಿದ್ದಂತೆ ನೇಣು ಬಿಗಿದುಕೊಂಡು ಸ್ಥಿತಿಯಲ್ಲಿ ಪತ್ತೆಯಾಗಿದ್ದು ಹಲವು ಅನುಮಾನಗಳನ್ನು ಹುಟ್ಟು ಹಾಕಿತ್ತು ಈ ಪ್ರಕರಣದಲ್ಲೂ ಕೂಡ ಅಮ್ಮ ಮಗನ ಮೇಲೆ ಆರೋಪಗಳು ಬಂದಿದ್ದವು ಇದರಲ್ಲೂ ಕೂಡ ಸರಿಯಾದ ಸಾಕ್ಷಿ ಸಿಗದೇ ಆತ್ಮಹತ್ಯೆ ಎಂದೇ ಸಾಬೀತಾಯಿತು.
‎
ಇದೀಗ ಅಮ್ಮ ಮಗನ ಸರದಿ :

ಸೊಸೆಯನ್ನು ಕಳೆದುಕೊಂಡ ಅತ್ತೆ ಹೆಂಡತಿಯನ್ನು ಕಳೆದುಕೊಂಡ ಮಗ ಅದೇ ಮನೆಯಲ್ಲಿ ವಾಸವಾಗಿದ್ದರು ಸಾಲದಕ್ಕೆ   ಐದು ತಿಂಗಳ ಹಿಂದೆ ನಿವ್ಯ ಎನ್ನುವ ಚಿತ್ರದುರ್ಗ ಮೂಲದ  ಯುವತಿಯನ್ನು ಆಕಾಶ್ ಮದುವೆಯಾಗಿದ್ದರು. ನಿವ್ಯ ಆಕಾಶ್ ದಂಪತಿಗಳು ಒಟ್ಟಿಗೆ ಇದೇ ಮನೆಯಲ್ಲಿ ಡಾ ಜಯಶ್ರೀ ಜೊತೆಗೆ ವಾಸವಾಗಿದ್ದರು.
ಆತ್ಮಹತ್ಯೆಯ ತೀರ್ಮಾನ ಏಕೆ ತೆಗೆದುಕೊಂಡರು ಅಮ್ಮ-ಮಗ..?!
ಎಲ್ಲವೂ ಸರಿ ಹೋಯಿತು ಮಗನಿಗೂ ಮದುವೆ ಆಯಿತು ಎಂದುಕೊಂಡು ಆಸ್ಪತ್ರೆಯಲ್ಲಿ  ತನ್ನ ಪಾಡಿಗೆ ತಾನು ರೋಗಿಗಳನ್ನು ನೋಡಿಕೊಂಡು ಇರುತ್ತಿದ್ದ  ಡಾಕ್ಟರ್ ಜಯಶ್ರಿಗೆ ಮೂಲಗಳ ಪ್ರಕಾರ ಮತ್ತೊಂದು ಸಮಸ್ಯೆ ಕಾಡಲು ಪ್ರಾರಂಭ ಮಾಡಿದ್ದು ಅದುವೇ ಮಗನ ಗಲಾಟೆ ಹಣಕ್ಕಾಗಿ ತಾಯಿಯನ್ನು ಪಿಡಿಸುತ್ತಿದ್ದ ಮಗ ರಿಯಲ್ ಎಸ್ಟೇಟ್ ನಲ್ಲಿ ತಾನು ಹಣ ತೊಡಿಸಬೇಕು ಅದಕ್ಕಾಗಿ ನನಗೆ ಹಣ ಬೇಕು ಎಂದು ಕೇಳುತ್ತಿದ್ದ ಎನ್ನಲಾಗುತ್ತಿದೆ ಇದಕ್ಕೋಸ್ಕರನೇ ತಾಯಿ ಮತ್ತು ಮಗನ ಮಧ್ಯೆ ಆಗಾಗ್ಗೆ ಜಗಳಗಳು ನಡೆಯುತ್ತಿದ್ದವು. ಇದು ಇತ್ತೀಚಿಗೆ ಮದುವೆಯಾಗಿ ಬಂದ ನವ್ಯ ಗೆ ಕೂಡ ಮಾಮೂಲಾಗಿತ್ತು ಆದರೆ ಈ ಜಗಳ ನಿನ್ನೆ ರಾತ್ರಿ ವಿಕೋಪಕ್ಕೆ ಹೋಗಿದ್ದು ಅದು ಈ ಆತ್ಮಹತ್ಯೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ ಈ ಪ್ರಕರಣದಲ್ಲಿ ಮೊದಲು ಡಾಕ್ಟರ್ ಜಯಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದು ಡೆತ್ ನೋಟ್ ಬರೆದಿಟ್ಟಿದ್ದಾರೆ ಇದನ್ನು ನೋಡಿದ ಮಗ ಆಕಾಶ್ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗುತ್ತಿದೆ ಆದರೆ ಮತ್ತೊಂದು ಮೂಲಗಳ ಪ್ರಕಾರ ಇಬ್ಬರಿಗೂ ಮೊದಲನೇ ಪತ್ನಿಯ ಸಾವಿನ ಭಯ, ಖಿನ್ನತೆ ಕಾಡುತ್ತಿತ್ತು ಎನ್ನಲಾಗುತ್ತಿದೆ ಮೂಲತಃ  ನ್ಯಾಮತಿಯ ನಿವಾಸಿಗಳಾದ ಹೊಮ್ಮರಡಿ ಕುಟುಂಬಕ್ಕೆ ಆಸ್ತಿಗೇನು ಕೊರತೆ ಇರಲಿಲ್ಲ 25 ಎಕರೆ ತೋಟ, ಇರಲು ಮನೆ, ಹೊಮ್ಮರಡಿ ಕಾಂಪ್ಲೆಕ್ಸ್ ಅದರ ಬಾಡಿಗೆ ಹಣ, ಹೊನ್ನಾಳಿಯಲ್ಲಿ ಸೈಟ್ಗಳು ಎಲ್ಲವೂ ಇದ್ದವು ಆದರೆ ಬಹು ಮುಖ್ಯವಾಗಿ ಬೇಕಾಗಿದ್ದ ಮಾನಸಿಕ ನೆಮ್ಮದಿ ಇರಲಿಲ್ಲ ಅದುವೇ ಈ ಆತ್ಮಹತ್ಯೆಗೆ ಕಾರಣವಾಗಿರಬಹುದು. ಪೊಲೀಸರು ಈ ಪ್ರಕರಣದಲ್ಲಿ ಡೆತ್ ನೋಟ್ ಹಾಗೂ ಮೂಲ ಎರಡನ್ನು ಇಟ್ಟುಕೊಂಡು ಸಮಗ್ರವಾಗಿ ತನಿಖೆ ನಡೆಸಿದರೆ ಎಲ್ಲಾ ಆತ್ಮಹತ್ಯೆಗಳ ಮೂಲಗಳು ಹೊರಬರುವ ಸಾಧ್ಯತೆ ಇದೆ..
ರಘುರಾಜ್ ಹೆಚ್‌ ಕೆ..9449553305

Related Posts

Latest news
Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga : ದೊಡ್ಡಪೇಟೆ ಪೊಲೀಸರ ಮಹತ್ವದ ಕಾರ್ಯಾಚರಣೆ ನೇಪಾಳಿ ಮಂಜ ಅಂದರ್..! Railway shivamogga: ರೈಲ್ವೆ ಹಳಿಗೆ ಬಿದ್ದ ಮಹಿಳೆ ಯಾರು..?! Health department: ಆರೋಗ್ಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದ ಹರ್ಷ ಗುಪ್ತಾ ವರ್ಗಾವಣೆ..! 26 ವರ್ಷ ಸೇವೆ 30 ಸಲ ಎತ... North East police:ಯಲಹಂಕ ನ್ಯೂಟೌನ್ ಪೊಲೀಸರ ಮಹತ್ವದ ಕಾರ್ಯಾಚರಣೆ..! ವಿದೇಶಿ ಪ್ರಜೆಯಿಂದ ₹2 ಕೋಟಿ ಮೌಲ್ಯದ 2 ಕೆ.ಜ... ತೀರ್ಥಹಳ್ಳಿ : ನಾಬಳ ಶಚಿಂದ್ರ ಹೆಗ್ಡೆ ಪತ್ನಿ ಶ್ರೀಮತಿ ಅಚಲಾ ಶಚಿಂದ್ರ ಹೆಗ್ಡೆ ಇನ್ನಿಲ್ಲ...! ಏನಾಗಿತ್ತು ಇವರಿಗೆ..?!... ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ..! Shivamogga police : ಅಡಿಶನಲ್ ಎಸ್ ಪಿ ರಮೇಶ್ ಕುಮಾರ್ ಜೊತೆ ಕ್ರೈಂ ವಿಭಾಗದ ಇಬ್ಬರಿಗೆ ಮುಖ್ಯಮಂತ್ರಿ ಪದಕ..! ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ..!