ಭದ್ರಾವತಿ : ನಗರದ ಓಲ್ಡ್ ಟೌನ್ ವ್ಯಾಪ್ತಿಯಲ್ಲಿ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದು ಒಬ್ಬ ಸ್ಥಳದಲ್ಲಿ ಸಾವನಪ್ಪಿದ್ದರೆ ಇನ್ನೊಬ್ಬ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಕೊನೆ ಉಸಿರು ಎಳೆದಿದ್ದಾನೆ.
ಪ್ರೀತಿಯ ವಿಚಾರಕ್ಕೆ ನಡೆಯಿತು ಡಬಲ್ ಮರ್ಡರ್…!
ಈ ಪ್ರಕರಣದಲ್ಲಿ ನಂದೀಶ್ ಮತ್ತು ಸೃಷ್ಟಿ ಪರಸ್ಪರ ಪ್ರೀತಿಸುತ್ತಿದ್ದು ಇವರಿಗೆ ಕಿರಣ್ ಮತ್ತು ಸುರೇಶ್ ಬೆಂಬಲ ನೀಡುತ್ತಿದ್ದರು ಆದರೆ ಎರಡು ದಿನಗಳ ಹಿಂದೆ ಇಬ್ಬರು ಓಡಿ ಹೋಗಿ ಹೈದ್ರಾಬಾದ್ ನಲ್ಲಿ ಇದ್ದು ವಾಪಸ್ ಬಂದಿದ್ದರು . ಆದರೆ ಇಂದು ಪೊಲೀಸ್ ಠಾಣೆಗೆ ಬಂದಾಗ ಹುಡುಗಿ ಹುಡುಗನೊಂದಿಗೆ ಹೋಗುವುದಾಗಿ ಹೇಳಿದ್ದಾಳೆ ಇದರಿಂದ ಕೆರಳಿದ ಹುಡುಗಿಯ ಸಹೋದರ ಮತ್ತು ಅವನ ಸ್ನೇಹಿತರು ನಂದೀಶನ ಸ್ನೇಹಿತರಾದ ಕಿರಣ್ ಮತ್ತು ಸುರೇಶ್ ಇವರಿಬ್ಬರಿಗೆ ಪ್ರೀತಿಸಲು ಸಹಾಯ ಮಾಡಿದ್ದು ಇವರೇ ಇವರನ್ನು ಬದುಕಲು ಬಿಡಬಾರದು ಎಂದು ಚಾಕುವಿನಿಂದ ಇಬ್ಬರನ್ನು ಇರಿದಿದ್ದಾರೆ.
ಈ ಪ್ರಕರಣ ಜೈ ಭೀಮ್ ನಗರದಲ್ಲಿ ನಡೆದಿದ್ದು ಮೃತ ವ್ಯಕ್ತಿ 25 ವರ್ಷದ ಕಿರಣ್ ಎಂದು ಗುರುತಿಸಲಾಗಿದೆ. ಇವರ ನಡುವೆ ಸುಮಾರು 65 ವರ್ಷದ ಮಂಜುನಾಥ್ ಜಗಳವನ್ನು ಬಿಡಿಸಲು ಹೋದಾಗ ಮೃತಪಟ್ಟಿದ್ದಾರೆ.
ಕಿರಣ್ ಸ್ಥಳದಲ್ಲಿ ಸಾವನ್ನಪ್ಪಿದ್ದರೆ ಇನ್ನೊಬ್ಬ ವ್ಯಕ್ತಿ ಸುರೇಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಪ್ರಸ್ತುತ ಪರಿಸ್ಥಿತಿ ಹತೋಟಿಯಲ್ಲಿ ದ್ದು ಕೃತ್ಯದಲ್ಲಿ ಭಾಗಿಯಾದ ಎಲ್ಲಾ ಐದು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.