67
ನವದೆಹಲಿ:* ಹಿಂದೆ ಜಿಹಾದಿ ಭಯೋತ್ಪಾದಕರು ಎಲ್ಲೆಂದರಲ್ಲಿ ಬಾಂಬ್ ಸ್ಫೋಟ ಮಾಡುತ್ತಿದ್ದರು, ಆದರೆ ಈಗ ಅವರಿಗೆ ಹಾಗೆ ಮಾಡುವ ಮೊದಲೇ ತಕ್ಕ ಉತ್ತರ ನೀಡಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಯೋತ್ಪಾದಕರು ಹತ್ಯೆಗೀಡಾಗುತ್ತಿದ್ದು, ಇದರಿಂದ ಜಾತ್ಯತೀತರೆಂದು ಕರೆಯಲ್ಪಡುವವರ ಹೊಟ್ಟೆಯಲ್ಲಿ ನೋವು ಶುರುವಾಗಿದೆ.
ಈ ನೋವು ಮುಂಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗಲಿದೆ. ಅವರು ದೆಹಲಿಯಲ್ಲಿ ಬಾಂಬ್ ಸ್ಫೋಟ ಮಾಡಿ ಜನರಲ್ಲಿ ಭಯ ಹುಟ್ಟಿಸಲು ಪ್ರಯತ್ನಿಸಿದರು, ಆದರೆ ನಮ್ಮಲ್ಲಿ ಭಯವನ್ನು ಸೃಷ್ಟಿಸಲು ಸಾಧ್ಯವಿಲ್ಲ. ಇದಕ್ಕೆ ವಿರುದ್ಧವಾಗಿ, ಎಷ್ಟು ಜಿಹಾದಿ ಭಯೋತ್ಪಾದಕರು ಹುಟ್ಟುತ್ತಾರೋ, ಅಷ್ಟು ಛತ್ರಪತಿ ಶಿವಾಜಿ ಮಹಾರಾಜರು ದೇಶದ ಪ್ರತಿ ಮನೆಯಲ್ಲಿಯೂ ಜನಿಸಲಿದ್ದಾರೆ ಎಂಬ ಸ್ಪಷ್ಟ ಸಂದೇಶವನ್ನು ದೆಹಲಿಯ ಸಾಂಸ್ಕೃತಿಕ ಕಾರ್ಯಮಂತ್ರಿ ಕಪಿಲ್ ಮಿಶ್ರಾ ಅವರು ನೀಡಿದರು.
ಅವರು ದೇಶದ ರಾಜಧಾನಿ ದೆಹಲಿಯ ‘ಭಾರತ್ ಮಂಡಪಮ್ ’ನಲ್ಲಿ ‘ಸೇವ್ ಕಲ್ಚರ್ ಸೇವ್ ಭಾರತ್ ಫೌಂಡೇಶನ್’ ವತಿಯಿಂದ ಪ್ರಸ್ತುತಪಡಿಸಿದ ಹಾಗೂ ‘ಸನಾತನ ಸಂಸ್ಥೆ’ಆಯೋಜಿಸಿದ ಭವ್ಯ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
