423
ಶಿವಮೊಗ್ಗ: ಇಂದು ನಡೆದ ರಸ್ತೆ ಅಪಘಾತದಲ್ಲಿ ಎಸಿ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರೇಮ್ ಕುಮಾರ್ ಸಾವನ್ನಪ್ಪಿದ್ದಾರೆ.

ಏನಿದು ಘಟನೆ :
ಮಧ್ಯಾಹ್ನ ಊಟಕ್ಕೆಂದು ಶಿವಮೊಗ್ಗದಿಂದ ಸಕ್ರೆ ಬೈಲ್ ಕಡೆಗೆ ಮನೋಜ್, ಪ್ರೇಮ್ ಕುಮಾರ್, ಗಿರೀಶ್, ಪವನ್ ನಾಲ್ವರು ಆಟೋದಲ್ಲಿ ತೆರಳುತ್ತಿದ್ದಾಗ ಎದುರಿಗೆ ಮದನಂತೇಶ್ವರ ಎನ್ನುವ ಹೆಸರಿನ ಖಾಸಗಿ ಬಸ್ ನಡುವೆ ಮುಖಾಮುಖಿ ಆಗಿ ದುರ್ಘಟನೆ ಸಂಭವಿಸಿದ್ದು ಗಾಯಗೊಂಡ ನಾಲ್ವರನ್ನು ಆಸ್ಪತ್ರೆಗೆ ಸೇರಿಸಿದ್ದು ಆಟೋ ಓಡಿಸುತ್ತಿದ್ದ ಶಿವಮೊಗ್ಗದ ಎಸಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬುದ್ಧ ನಗರ ನಿವಾಸಿ ಪ್ರೇಮ್ ಕುಮಾರ್ ಮೃತಪಟ್ಟಿದ್ದಾನೆ.
