Home ಶಿವಮೊಗ್ಗವಿದ್ಯೆ ಕೇವಲ ಹಣ ಗಳಿಕೆಯ ಮಾರ್ಗವಾಗಬಾರದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಟಿ ವಿ ಸತೀಶ ಅಭಿಮತ..!

ವಿದ್ಯೆ ಕೇವಲ ಹಣ ಗಳಿಕೆಯ ಮಾರ್ಗವಾಗಬಾರದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಟಿ ವಿ ಸತೀಶ ಅಭಿಮತ..!

by EDITOR NEWS WARRIORS

ಯುವಜನತೆಯಿಂದ ನಮ್ಮ ಸಮಾಜಕ್ಕೆ,,ನಮ್ಮ ದೇಶಕ್ಕೆ ದೊಡ್ಡ ನಿರೀಕ್ಷೆಯಿದೆ.ವಿದ್ಯೆ ಕೇವಲ ಹಣ ಗಳಿಕೆಗೆ ಮಾರ್ಗವಾಗಬಾರದು.ಪಡೆದ ವಿದ್ಯೆ,ದಕ್ಕಿದ ಸ್ಥಾನಮಾನಗಳು ಕೇವಲ ಸ್ವಾರ್ಥಕ್ಕಷ್ಟೇ ಸೀಮಿತವಾಗದೆ ಒಂದಿಷ್ಟು ಸಮಾಜಕ್ಕೂ ಉಪಯೋಗವಾಗುವಂತಿರಬೇಕು.ಈ ದಿಸೆಯಲ್ಲಿ ನಮ್ಮ ಯುವಜನತೆಯ ಚಿಂತನೆಗಳಿರಬೇಕು ಎಂದು ತಾಲ್ಲೂಕು ಸರ್ಕಾರಿ ನೌಕರರ ಸಂಘ ಹಾಗೂ ಆರೋಗ್ಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಟಿ ವಿ ಸತೀಶ ನುಡಿದರು.ಅವರು ಇಂಜಿನಿಯರಿಂಗ್ ಉನ್ನತ ವ್ಯಾಸಾಂಗಕ್ಕೆ ಇಂಗ್ಲೇಂಡಿಗೆ ತೆರಳುತ್ತಿರುವ ತಾಲ್ಲೂಕು ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು ಹಾಗೂ ಆರೋಗ್ಯ ನಿರೀಕ್ಷಣಾಧಿಕಾರಿಗಳ ಸಂಘದ ಖಜಾಂಚಿ ಉಷಾರವರ ಪುತ್ರ ಅಮೋಘರವರನ್ನು ತಾಲ್ಲೂಕು ಅರೋಗ್ಯ ಇಲಾಖಾ ನೌಕರರ ಸಂಘದ ವತಿಯಿಂದ ಅಭಿನಂದಿಸಿ, ಶುಭಹಾರೈಸಿ ಮಾತನಾಡಿದರು.


ಮುಂದುವರಿದು ಸಮಾಜಮುಖಿ ಕಾಳಜಿಗಳಿಲ್ಲದೆ ಕೇವಲ ತಾನು ತನ್ನ‌ ಕುಟುಂಬ ಎಂಬ ಸೀಮಿತ ಚೌಕಟ್ಟಿನೊಳಗಿರುವ ವ್ಯಕ್ತಿ ಎಷ್ಟೇ ಹಣ, ಆಸ್ತಿ ಪಾಸ್ತಿ, ಉನ್ನತ ಸ್ಥಾನಮಾನಗಳನ್ನು ಗಳಿಸಿದರೂ ಸಮಾಜ ಆತನನ್ನು ನಮ್ಮವನೆಂದು ಒಪ್ಪಿಕೊಳ್ಳುವುದಿಲ್ಲ. ಮಾತ್ರವಲ್ಲ ಅಂತಹ ಗಳಿಕೆ ಸ್ವತಃ ಆತನಿಗೇ ತೃಪ್ತಭಾವ ನೀಡುವುದಿಲ್ಲ. ಆದ್ದರಿಂದ ಬದುಕು ಒಂದಿಷ್ಟಾದರೂ ಸಾರ್ಥಕವೆನಿಸಲು ಒಂದಿಷ್ಟು ಸಮಾಜಮುಖಿ ಕಾಳಜಿ, ಬದ್ದತೆಗಳಿರಲೇಬೇಕು ಎಂದರು.


ತಾಲ್ಲೂಕು ಆರೋಗ್ಯ ಇಲಾಖಾ ನೌಕರರ ಸಂಘದ ಕಾರ್ಯಾಧ್ಯಕ್ಷೆ ಗೀತಾ ಎಲ್. ಪದಾಧಿಕಾರಿಗಳಾದ ಶಿವಶಂಕರ್ ಡಿ ಸಿ, ಅನುಸೂಯ ಬಿ ಆರ್, ನೀಲಮ್ಮ, ಈಶ್ವರಪ್ಪ, ತಾಲ್ಲೂಕು ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು ಹಾಗೂ ಆರೋಗ್ಯ ನಿರೀಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷೆ ಅನಿತ ಬಿ ಸಿ, ಕಾರ್ಯದರ್ಶಿ ಕೃಷ್ಣಮೂರ್ತಿ, ಜಂಟೀ ಕಾರ್ಯದರ್ಶಿ ಗುರುಪ್ರಸಾದ್ ಮತ್ತಿತರಿದ್ದರು.

#####################################

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…

Related Posts

Leave a Comment

Latest news
Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga : ದೊಡ್ಡಪೇಟೆ ಪೊಲೀಸರ ಮಹತ್ವದ ಕಾರ್ಯಾಚರಣೆ ನೇಪಾಳಿ ಮಂಜ ಅಂದರ್..! Railway shivamogga: ರೈಲ್ವೆ ಹಳಿಗೆ ಬಿದ್ದ ಮಹಿಳೆ ಯಾರು..?! Health department: ಆರೋಗ್ಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದ ಹರ್ಷ ಗುಪ್ತಾ ವರ್ಗಾವಣೆ..! 26 ವರ್ಷ ಸೇವೆ 30 ಸಲ ಎತ... North East police:ಯಲಹಂಕ ನ್ಯೂಟೌನ್ ಪೊಲೀಸರ ಮಹತ್ವದ ಕಾರ್ಯಾಚರಣೆ..! ವಿದೇಶಿ ಪ್ರಜೆಯಿಂದ ₹2 ಕೋಟಿ ಮೌಲ್ಯದ 2 ಕೆ.ಜ... ತೀರ್ಥಹಳ್ಳಿ : ನಾಬಳ ಶಚಿಂದ್ರ ಹೆಗ್ಡೆ ಪತ್ನಿ ಶ್ರೀಮತಿ ಅಚಲಾ ಶಚಿಂದ್ರ ಹೆಗ್ಡೆ ಇನ್ನಿಲ್ಲ...! ಏನಾಗಿತ್ತು ಇವರಿಗೆ..?!... ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ..! Shivamogga police : ಅಡಿಶನಲ್ ಎಸ್ ಪಿ ರಮೇಶ್ ಕುಮಾರ್ ಜೊತೆ ಕ್ರೈಂ ವಿಭಾಗದ ಇಬ್ಬರಿಗೆ ಮುಖ್ಯಮಂತ್ರಿ ಪದಕ..! ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ..!