Home ಅಂತಾರಾಷ್ಟ್ರೀಯ“ಮನೆ” ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆ..!

“ಮನೆ” ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆ..!

by EDITOR NEWS WARRIORS


ಬೆಂಗಳೂರು : ಬೆಂಗಳೂರು ಅಂತರರಾಷ್ಟ್ರೀಯ ೧೩ ನೇ ಚಲನಚಿತ್ರೋತ್ಸವದ ಪ್ರತಿಷ್ಠಿತ ಕನ್ನಡ ಸಿನಿಮಾ ಸ್ಪರ್ಧೆಗೆ ಸಂಯುಕ್ತ ಸ್ಟುಡಿಯೋಸ್ ಸಹಯೋಗದೊಂದಿಗೆ ಗಾಯತ್ರಿ ಕ್ರಿಯೇಷನ್ಸ್ ನಿರ್ಮಾಣದ ರಶ್ಮಿ ಎಸ್ ಮತ್ತು ಪೂರ್ಣಶ್ರೀ ಆರ್ ನಿರ್ದೇಶನದ ಕೌಟುಂಬಿಕ ಕಥಾ ಹಂದರ ಹೊಂದಿರುವ ‘ಮನೆ’ ಸಿನಿಮಾ ಆಯ್ಕೆಯಾಗಿದೆ.


೫೫ ರಾಷ್ಟ್ರಗಳ ೨೦೦ ಚಿತ್ರಗಳ ಪ್ರದರ್ಶನ ಮತ್ತು ಸ್ಪರ್ಧೆಯು ಮಾ. ೩ ರಿಂದ ಮಾ. ೧೦ ರವರೆಗೆ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಬೆಂಗಳೂರಿನ ಓರಾಯನ್ ಮಾಲ್, ಚಲನಚಿತ್ರ ಕಲಾವಿದರ ಸಂಘ, ಮತ್ತು ಸುಚಿತ್ರ ಫಿಲಂ ಇನ್ಸ್ಟಿಟ್ಯೂಟ್‌ಗಳಲ್ಲಿ ನಡೆಯಲಿದೆ. ಜಗತ್ತಿನಾದ್ಯಂತ ೬ ಸಾವಿರ ಚಲನಚಿತ್ರೋತ್ಸವ ನಡೆಯುತ್ತವೆ. ಈ ಪೈಕಿ ಬೆಂಗಳೂರು ಚಲನಚಿತ್ರೋತ್ಸವ ಮಾನ್ಯತೆ ಪಡೆದ ೪೩ ಚಿತ್ರೋತ್ಸವಗಳ ಸಾಲಿನಲ್ಲಿ ಸೇರಿದ್ದು, ಭಾರತೀಯ ಚಿತ್ರರಂಗದ ೬೦ ಸಿನಿಮಾದಲ್ಲಿ ೧೨ ಉತ್ತಮ ಸಿನಿಮಾ ಆಯ್ಕೆ ಮಾಡಲಾಗುತ್ತದೆ. ಅದರಂತೆ ‘ಮನೆ’ ಸಿನಿಮಾ ಉತ್ತಮ ಚಿತ್ರದಲ್ಲಿ ಮೊದಲನೇ ಟಾಪ್ ೧೪ ರಲ್ಲಿ ಸಮಿತಿಯಿಂದ ಆಯ್ಕೆ ಆಗಿದೆ. ಇದರಲ್ಲಿ ತಮಿಳು, ಕನ್ನಡ ಚಿತ್ರಗಳು ಆಯ್ಕೆಯಾಗಿದೆ.
ವಿಶೇಷವೆಂದರೆ ‘ಮನೆ’ ಚಲನಚಿತ್ರದಲ್ಲಿ ಪ್ರಮೀಳ ಸುಬ್ರಮಣ್ಯ ಅವರನ್ನು ಹೊರತು ಪಡಿಸಿ ಕಿತ್ತೂರ ಕರ್ನಾಟಕದ ಹುಬ್ಬಳ್ಳಿ, ಬೆಳಗಾವ್, ಗದಗ, ನಲವಡಿ ಮೊದಲಾದ ಈ ಭಾಗದ ಕಲಾವಿದರೇ ಅಭಿನಯಿಸಿದ್ದಾರೆ.

ಹುಬ್ಬಳ್ಳಿ, ಶಿರಗುಪ್ಪಿ, ನಲವಡಿ ಗ್ರಾಮಗಳ ಸುತ್ತಮುತ್ತ ಹತ್ತು ದಿನಗಳ ಕಾಲ ಸತತ ಚಿತ್ರೀಕರಣ ನಡೆಸಲಾದ ಚಿತ್ರದಲ್ಲಿ ರೇಣುಕುಮಾರ್ ಸಂಸ್ಥಾನ್ ಮಠ, ಪ್ರಮೀಳ ಸುಬ್ರಮಣ್ಯ, ಸಾಗರ್ ಕೆ ಹೆಚ್, ಅಕ್ಷತಾ ವಿಲಾಸ್, ಮಂಜುನಾಥ್ ಪಾಟೀಲ್, ಮುರಳೀಧರ್, ಡಾ ಪ್ರಭು ಗಂಜೀಹಾಳ, ವಿದ್ಯಾ ಗಂಜೀಹಾಳ ಮುಂತಾದವರು ಅಭಿನಯಿಸಿದ್ದಾರೆ. ಛಾಯಾಗ್ರಹಣ ಬಾಗಲಕೋಟೆಯ ವಿನಾಯಕ ರೇವಡಿ, ಸಾಹಿತ್ಯ ಸಂಭಾಷಣೆ , ಸಹನಿರ್ದೇಶನ ಹಾವೇರಿಯ ಸತೀಶ ಜೋಶಿ (ಭಾರತೀ ಶಂಕರ), ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಗಿ, ಸಂಗೀತ ವಿ. ಮನೋಹರ್, ಹಿನ್ನೆಲೆ ಸಂಗೀತ ಶಿವಸತ್ಯ, ಗಾಯಕರು ಅಜಯ್ ವಾರಿಯರ್, ಕಲರಿಸ್ಟ್ ನಿಖಿಲ್‌ಕಾರಿಯಪ್ಪ, ಚಿತ್ರಕಥೆ-ಸಂಕಲನ-ತಾಂತ್ರಿಕ ನಿರ್ದೇಶನ ಮುತ್ತುರಾಜು ಟಿ, ನಿರ್ದೇಶನವನ್ನು ಈ ಹಿಂದೆ ಶ್ರೀ ಕಬ್ಬಾಳಮ್ಮ ಮಹಿಮೆ ಪೌರಾಣಿಕ ಸಿನೇಮಾ ನಿರ್ದೇಶನ ಮಾಡಿದ್ದ ಜಂಟಿ ನಿರ್ದೇಶಕಿಯರಾದ ಪೂರ್ಣಶ್ರೀ ಆರ್, ಮತ್ತು ರಶ್ಮೀ ಎಸ್ ನಿರ್ದೇಶನ ಮಾಡಿದ್ದಾರೆ.

ಕಥೆ ಮತ್ತು ನಿರ್ಮಾಪಕರು ಕುಮಾರ್. ಓ. ಎಸ್ ಆಗಿದ್ದಾರೆ.
ತಮಿಳಿನಾಡಿನ ಉರುವಟ್ಟಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಡೆಹ್ರಾಡೂನ್ ನಲ್ಲಿ ನಡೆದ ೬ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಅಯೋಧ್ಯ, ಬಿಹಾದ ನವಾಡ, ಸಿಂಗಾಪೂರ್ ನಲ್ಲಿ ನಡೆದ ವರ್ಲ್ಡ್ ಫಿಲಂಕಾರ್ನಿವಲ್ ಸಿಂಗಾಪೂರ್, ಟೋಕಿಯೋ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಅಂಡಮಾನ್ ನಿಕೋಬಾರ್, ತಮಿಳುನಾಡಿನಲ್ಲಿ ಸತ್ಯಜಿತ್‌ರೇ ಅವರ ಹೆಸರಿನಲ್ಲಿ ನಡೆಯುವ ರೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಪಾಂಡಿಚೇರಿ, ರಾಮೇಶ್ವರಂ, ಪಶ್ಚಿಮ ಬಂಗಾಳದಲ್ಲಿ ನಡೆಯುವ ಟ್ಯಾಗೋರ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಕುಂಭಕೋಣಂ, ಮುಂಬೈ, ಮಹಾರಾಷ್ಟ್ರದಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಮನೆ’ ಚಿತ್ರವು ನಾನಾ ವಿಭಾಗದಲ್ಲಿ(ಉತ್ತಮ ನಟ, ನಟಿ, ಪೋಷಕನಟ, ಪೋಷಕ ನಟಿ, ಉತ್ತಮ ನಿರ್ದೇಶನ, ಉತ್ತಮ ಸಂಕಲನಕಾರ, ಉತ್ತಮ ಸಂಗೀತ ಇತ್ಯಾದಿ..)ಪ್ರಶಸ್ತಿಗಳನ್ನು ಗಳಿಸಿದೆ. ಇಲ್ಲಿಯವರೆಗೆ ಒಟ್ಟು ೧೩೭ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರಶಸ್ತಿಗೆ ಭಾಜನವಾಗಿದ್ದು ವಿಶೇಷವಾಗಿದೆ.
####################################
ವರದಿ-ಡಾ.ಪ್ರಭು ಗಂಜಿಹಾಳ
ಮೊ: ೯೪೪೮೭೭೫೩೪೬…

#####################################

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…

Related Posts

Leave a Comment

Latest news
Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga : ದೊಡ್ಡಪೇಟೆ ಪೊಲೀಸರ ಮಹತ್ವದ ಕಾರ್ಯಾಚರಣೆ ನೇಪಾಳಿ ಮಂಜ ಅಂದರ್..! Railway shivamogga: ರೈಲ್ವೆ ಹಳಿಗೆ ಬಿದ್ದ ಮಹಿಳೆ ಯಾರು..?! Health department: ಆರೋಗ್ಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದ ಹರ್ಷ ಗುಪ್ತಾ ವರ್ಗಾವಣೆ..! 26 ವರ್ಷ ಸೇವೆ 30 ಸಲ ಎತ... North East police:ಯಲಹಂಕ ನ್ಯೂಟೌನ್ ಪೊಲೀಸರ ಮಹತ್ವದ ಕಾರ್ಯಾಚರಣೆ..! ವಿದೇಶಿ ಪ್ರಜೆಯಿಂದ ₹2 ಕೋಟಿ ಮೌಲ್ಯದ 2 ಕೆ.ಜ... ತೀರ್ಥಹಳ್ಳಿ : ನಾಬಳ ಶಚಿಂದ್ರ ಹೆಗ್ಡೆ ಪತ್ನಿ ಶ್ರೀಮತಿ ಅಚಲಾ ಶಚಿಂದ್ರ ಹೆಗ್ಡೆ ಇನ್ನಿಲ್ಲ...! ಏನಾಗಿತ್ತು ಇವರಿಗೆ..?!... ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ..! Shivamogga police : ಅಡಿಶನಲ್ ಎಸ್ ಪಿ ರಮೇಶ್ ಕುಮಾರ್ ಜೊತೆ ಕ್ರೈಂ ವಿಭಾಗದ ಇಬ್ಬರಿಗೆ ಮುಖ್ಯಮಂತ್ರಿ ಪದಕ..! ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ..!