Home ಸಿನಿಮಾ“ವಿಜಯ ಪತಾಕೆ”ಚಲನಚಿತ್ರದ ಮುಹೂರ್ತ ಸಮಾರಂಭ..!!

“ವಿಜಯ ಪತಾಕೆ”ಚಲನಚಿತ್ರದ ಮುಹೂರ್ತ ಸಮಾರಂಭ..!!

by EDITOR NEWS WARRIORS

  • ಸಿದ್ಧನಕೊಳ್ಳ: ಬೊಮ್ಮಸಾಗರ ದುರ್ಗಾದೇವಿ ಪ್ರೊಡಕ್ಷನ್‌ರವರು ನಿರ್ಮಿಸುತ್ತಿರುವ ‘ವಿಜಯ ಪತಾಕೆ’ ಕನ್ನಡ ಚಲನಚಿತ್ರದ ಮುಹೂರ್ತ ಸಮಾರಂಭ ಬಾಗಲಕೋಟ ಜಿಲ್ಲೆಯ ಇಲಕಲ್ ತಾಲೂಕಿನ ಸಿದ್ಧನಕೊಳ್ಳದ ಕಲಾಪೋಷಕರ ಮಠ ಸಿದ್ದೇಶ್ವರ ಮಠದಲ್ಲಿ ಜರುಗಿತು.

  • ಡಾ. ಶಿವಕುಮಾರ ಮಹಾಸ್ವಾಮಿಗಳು ತಮ್ಮ ಅಮೃತ ಹಸ್ತದಿಂದ ಕ್ಯಾಮೆರಾದ ಗುಂಡಿ ಒತ್ತುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿ ಚಿತ್ರತಂಡಕ್ಕೆ ಶುಭ ಕೋರಿದರು. ಬಸಯ್ಯ ಹಿರೇಮಠ ಕ್ಲಾಪ್ ಮಾಡುವ ಮೂಲಕ ಮೊದಲ ದೃಶ್ಯಕ್ಕೆ ಚಾಲನೆ ಕೊಟ್ಟರು.
  • ಈ ಸಂದರ್ಭದಲ್ಲಿ ಲಡ್ಡುಮುತ್ಯಾ ಖ್ಯಾತಿಯ ನಟ ಉಮೇಶ ಪುರಾಣಿಕ, ಚಿತ್ರದ ನಟ, ನಿರ್ಮಾಪಕ, ನಿರ್ದೇಶಕ ಆರ್.ಶೈನ್ , ನಾಯಕಿ ನಟಿ ಪೂಜಾ ಕೊಟ್ಟೂರ, ಸುರೇಶ ಕರ್ಜಗಿ,ನಾಗರಾಜ ಬೀದರ,ಹರೀಶ ಪತ್ತಾರ, ಸಂಗನಗೌಡ ಕುರುಡಗಿ,ಆರ್. ರವಿವರ್ಮ, ಕಿರಣ ಭೂತಾನವರ,ಡಾ.ಪ್ರಭು ಗಂಜಿಹಾಳ,ರಾಜಕುಮಾರ ಪಾಟೀಲ , ರಂಗಸ್ವಾಮಿ ಜಿ,ಗಾಯತ್ರಿ ಹವಳೆ, ಕಲಾವಿದರು, ತಂತ್ರಜ್ಞರು ಹಾಜರಿದ್ದರು.
    ಗ್ರಾಮೀಣ ಕಥಾ ಸಾರದ ಹಿನ್ನಲೆ ಹೊಂದಿರುವ ಈ ಚಿತ್ರದ ಕಥೆ ವಿಭಿನ್ನವಾಗಿದ್ದು ಪ್ರೇಕ್ಷಕರು ಚಿತ್ರಮಂದಿರದಲ್ಲೇ ನೋಡಿ ಹರಸಲಿ. ಕುಟುಂಬದ ಎಲ್ಲರೂ ಕುಳಿತು ನೋಡಬಹುದಾದ ಚಿತ್ರ ಇದಾಗಿದೆ ಎಂದು ನಿರ್ದೇಶಕ ಆರ್.ಶೈನ್ ಹೇಳಿದರು.
  • ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕದ ಕಲಾವಿದರು, ತಂತ್ರಜ್ಞರೇ ಇದ್ದಾರೆ, ಗಜೇಂದ್ರಗಡ, ಬಾದಾಮಿ,ಸಿದ್ಧನಕೊಳ್ಳ, ಕೊಪ್ಪಳ ಸುತ್ತಮುತ್ತ ಹಾಗೂ ಮಲೆನಾಡು ಭಾಗದಲ್ಲಿ ಚಿತ್ರೀಕರಣವಾಗಲಿದೆ. ಛಾಯಾಗ್ರಹಣ ರಂಗಸ್ವಾಮಿ ಜಿ, ವರ್ಣಾಲಂಕಾರ ದೇವರಾಜ್, ಸಾಹಸ ಗಣೇಶ ಬಿ, ಸಾಹಿತ್ಯ ಸುಭಾಷ ಬೆಟಗೇರಿ, ಸಂಗೀತ ರಾಘವ ಸುಭಾಸ, ಸಂಕಲನ ಸಿದ್ದಾರ್ಥ ಜಾಲಿಹಾಳ, ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಗಿ, ಪ್ರೊಡಕ್ಷನ್ ಮ್ಯಾನೇಜರ್ ರವಿವರ್ಮ ಆನೆಹೊಸೂರ, ಕಥೆ, ಚಿತ್ರಕಥೆ, ಸಂಭಾಷಣೆ ಜೊತೆಗೆ ನಿರ್ದೇಶನವನ್ನು ಆರ್.ಶೈನ್ ಮಾಡುತ್ತಿದ್ದಾರೆ. ಷಣ್ಮುಖಪ್ಪ ಆರ್.ಎಲ್.ಚಿತ್ರ ನಿರ್ಮಿಸುತ್ತಿದ್ದಾರೆ.
    ***
    ವರದಿ-
    ಡಾ.ಪ್ರಭು.ಗಂಜಿಹಾಳ
    ಮೊ:೯೪೪೮೭೭೫೩೪೬
    ..

#####################################

ಸುದ್ದಿ ನೀಡಲು ಸಂಪರ್ಕಿಸಿ:9449553305…

Related Posts

1 comment

DanielZoret October 4, 2025 - 12:25 pm

Эта статья сочетает в себе как полезные, так и интересные сведения, которые обогатят ваше понимание насущных тем. Мы предлагаем практические советы и рекомендации, которые легко внедрить в повседневную жизнь. Узнайте, как улучшить свои навыки и обогатить свой опыт с помощью простых, но эффективных решений.
Подробнее – https://quick-vyvod-iz-zapoya-1.ru/

Reply

Leave a Comment

Latest news
Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga : ದೊಡ್ಡಪೇಟೆ ಪೊಲೀಸರ ಮಹತ್ವದ ಕಾರ್ಯಾಚರಣೆ ನೇಪಾಳಿ ಮಂಜ ಅಂದರ್..! Railway shivamogga: ರೈಲ್ವೆ ಹಳಿಗೆ ಬಿದ್ದ ಮಹಿಳೆ ಯಾರು..?! Health department: ಆರೋಗ್ಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದ ಹರ್ಷ ಗುಪ್ತಾ ವರ್ಗಾವಣೆ..! 26 ವರ್ಷ ಸೇವೆ 30 ಸಲ ಎತ... North East police:ಯಲಹಂಕ ನ್ಯೂಟೌನ್ ಪೊಲೀಸರ ಮಹತ್ವದ ಕಾರ್ಯಾಚರಣೆ..! ವಿದೇಶಿ ಪ್ರಜೆಯಿಂದ ₹2 ಕೋಟಿ ಮೌಲ್ಯದ 2 ಕೆ.ಜ... ತೀರ್ಥಹಳ್ಳಿ : ನಾಬಳ ಶಚಿಂದ್ರ ಹೆಗ್ಡೆ ಪತ್ನಿ ಶ್ರೀಮತಿ ಅಚಲಾ ಶಚಿಂದ್ರ ಹೆಗ್ಡೆ ಇನ್ನಿಲ್ಲ...! ಏನಾಗಿತ್ತು ಇವರಿಗೆ..?!... ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ..! Shivamogga police : ಅಡಿಶನಲ್ ಎಸ್ ಪಿ ರಮೇಶ್ ಕುಮಾರ್ ಜೊತೆ ಕ್ರೈಂ ವಿಭಾಗದ ಇಬ್ಬರಿಗೆ ಮುಖ್ಯಮಂತ್ರಿ ಪದಕ..! ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ..!