Home ಶಿವಮೊಗ್ಗಲೋಕಾಯುಕ್ತ ಪೊಲೀಸರು ತಾಲೂಕಿಗೆ ಬರುವ ಮುನ್ನವೇ ಒಂದು ಕೇಸ್ ರೆಡಿ..! ಖಾತೆ ಬದಲಾವಣೆ ಅರ್ಜಿ ಸಲ್ಲಿಸಿ 06 ತಿಂಗಳು ಕಳೆಯುತ್ತಾ ಬಂದರೂ ಗಂಡನ ಸ್ವತ್ತನ್ನು ಹೆಂಡತಿಯ ಹೆಸರಿಗೆ ಖಾತಾ ಬದಲಾವಣೆ ಮಾಡಲು ವಿಧವೆಗೆ ಗೋಳಾಡಿಸುತ್ತಿರುವ ಕಾರ್ಗಲ್ – ಜೋಗ ಪಟ್ಟಣ ಪಂಚಾಯಿತಿಯ ದುರಾಡಳಿತ – ಬೇಸತ್ತ ವಿಧವೆ ನಾಳೆ ಸಾಗರಕ್ಕೆ ಆಗಮಿಸುವ ಮಾನ್ಯ ಲೋಕಾಯುಕ್ತರಿಗೆ ಮುಖ್ಯಾಧಿಕಾರಿಗಳು ಹಾಗೂ ಅಧ್ಯಕ್ಷರು ಸೇರಿ ದೂರು ದಾಖಲಿಸಲು ತೀರ್ಮಾನ..!!

ಲೋಕಾಯುಕ್ತ ಪೊಲೀಸರು ತಾಲೂಕಿಗೆ ಬರುವ ಮುನ್ನವೇ ಒಂದು ಕೇಸ್ ರೆಡಿ..! ಖಾತೆ ಬದಲಾವಣೆ ಅರ್ಜಿ ಸಲ್ಲಿಸಿ 06 ತಿಂಗಳು ಕಳೆಯುತ್ತಾ ಬಂದರೂ ಗಂಡನ ಸ್ವತ್ತನ್ನು ಹೆಂಡತಿಯ ಹೆಸರಿಗೆ ಖಾತಾ ಬದಲಾವಣೆ ಮಾಡಲು ವಿಧವೆಗೆ ಗೋಳಾಡಿಸುತ್ತಿರುವ ಕಾರ್ಗಲ್ – ಜೋಗ ಪಟ್ಟಣ ಪಂಚಾಯಿತಿಯ ದುರಾಡಳಿತ – ಬೇಸತ್ತ ವಿಧವೆ ನಾಳೆ ಸಾಗರಕ್ಕೆ ಆಗಮಿಸುವ ಮಾನ್ಯ ಲೋಕಾಯುಕ್ತರಿಗೆ ಮುಖ್ಯಾಧಿಕಾರಿಗಳು ಹಾಗೂ ಅಧ್ಯಕ್ಷರು ಸೇರಿ ದೂರು ದಾಖಲಿಸಲು ತೀರ್ಮಾನ..!!

by EDITOR NEWS WARRIORS

ಕಾರ್ಗಲ್ – ಜೋಗ:- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಕಾರ್ಗಲ್ – ಜೋಗ ಪಟ್ಟಣ ಪಂಚಾಯಿತಿ ಸಾರ್ವಜನಿಕರ ಸೇವೆ ನೀಡುವಲ್ಲಿ ವಿಫಲತೆಯ ಆಡಳಿತಕ್ಕೆ ಸಂಬಂಧ ಪಟ್ಟಂತೆ ಒಂದಿಲ್ಲೊಂದು ಸುದ್ದಿ ಸದಾ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತದೆ.

ದಿನಾಂಕ 31/08/2021 ರಂದು ಕಾರ್ಗಲ್ – ಜೋಗ ಪಟ್ಟಣ ಪಂಚಾಯಿತಿಯ ಕಾರ್ಯಾಲಯಕ್ಕೆ ಖುದ್ದಾಗಿ ಸುಲೋಚನಾ ಕೋಂ ರಾಜು ದೊರೆಸ್ವಾಮಿ ತನ್ನ ಪತಿಯ ಮರಣ ನಂತರ ತನ್ನ ಪತಿಯ ಸ್ವತ್ತನ್ನೂ ತನ್ನ ಹೆಸರಿಗೆ ಪೌತಿ ಬದಲಾವಣೆ ಮಾಡಿಕೊಡುವಂತೆ ಕಾನೂನು ಪ್ರಕಾರ ಸಂಬಂಧ ಪಟ್ಟ ಪೂರಕ ದಾಖಲಾತಿಗಳನ್ನೂ ನೀಡಿ, 06 ಮಾಸಗಳೇ ಉರುಳುತ್ತಾ ಬಂದರೂ ಕಾರ್ಗಲ್ – ಜೋಗ ಪಟ್ಟಣ ಪಂಚಾಯಿತಿ ಆಡಳಿತಗಾರರು ” ಇಂದು ಭಾ, ನಾಳೆ ಭಾ ” ಎಂದು ಸತಾಯಿಸುತ್ತಿರುವ ಬಗ್ಗೆ ದಾಖಲಾತಿ ಸಮೇತ ಮಾಹಿತಿಯೊಂದಿಗೆ ನಿನ್ನೆ ದಿನ ನನ್ನ ಮನೆಗೆ ನ್ಯಾಯ ಕೊಡಿಸುವಂತೆ ಹಿರಿಯ ನಾಗರೀಕರಾದ ವಿಧವಾ ಮಹಿಳೆ ಶ್ರೀಮತಿ ಸುಲೋಚನಾ ಕೋಂ ರಾಜು ದೊರೆಸ್ವಾಮಿ ಅಳುತ್ತಾ ತಮ್ಮ ಆಳಲನ್ನೂ ತೋಡಿಕೊಂಡರು.

ಕಾರ್ಗಲ್ ಜೋಗ ಪಂಚಾಯಿತಿ ಆಡಳಿತಗಾರನಾದ ಮುಖ್ಯಾಧಿಕಾರಿಗಳು, ಅಧ್ಯಕ್ಷರು, ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ಧ ಸಮುಚಿತ ಮಾರ್ಗದಲ್ಲಿ ವಿಧವಾ ಹಿರಿಯ ನಾಗರೀಕರಾದ ಸುಲೋಚನಾ ಕೋಂ ರಾಜು ದೊರೆಸ್ವಾಮಿ ರವರ ಪೌತಿ ಖಾತಾ ಬದಲಾವಣೆಯ ಸರ್ಕಾರಿ ಸೇವೆಗೆ ಸತಾಯಿಸುವುದು, ಅನಗತ್ಯ ವಿಳಂಬ ಹಾಗೂ ಮಾನಸಿಕವಾಗಿ ಕಿರುಕುಳ ವಿರುದ್ಧ ಸೂಕ್ತ ನ್ಯಾಯಕ್ಕಾಗಿ ನಾಳೆ ದಿನ ಸಾಗರಕ್ಕೆ ಸಾರ್ವಜನಿಕರ ಕುಂದು – ಕೊರತೆ ಸಭೆಯಲ್ಲಿ ಕಾನೂನು ಪಾಲನೆಯೊಂದಿಗೆ ದೂರು ಸಲ್ಲಿಸಲಾಗುವುದು.

ಓಂಕಾರ ಎಸ್. ವಿ. ತಾಳಗುಪ್ಪ…

#####################################

ರಘುರಾಜ್ ಹೆಚ್.ಕೆ…9449553305….

Related Posts

Leave a Comment

Latest news
Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga : ದೊಡ್ಡಪೇಟೆ ಪೊಲೀಸರ ಮಹತ್ವದ ಕಾರ್ಯಾಚರಣೆ ನೇಪಾಳಿ ಮಂಜ ಅಂದರ್..! Railway shivamogga: ರೈಲ್ವೆ ಹಳಿಗೆ ಬಿದ್ದ ಮಹಿಳೆ ಯಾರು..?! Health department: ಆರೋಗ್ಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದ ಹರ್ಷ ಗುಪ್ತಾ ವರ್ಗಾವಣೆ..! 26 ವರ್ಷ ಸೇವೆ 30 ಸಲ ಎತ... North East police:ಯಲಹಂಕ ನ್ಯೂಟೌನ್ ಪೊಲೀಸರ ಮಹತ್ವದ ಕಾರ್ಯಾಚರಣೆ..! ವಿದೇಶಿ ಪ್ರಜೆಯಿಂದ ₹2 ಕೋಟಿ ಮೌಲ್ಯದ 2 ಕೆ.ಜ... ತೀರ್ಥಹಳ್ಳಿ : ನಾಬಳ ಶಚಿಂದ್ರ ಹೆಗ್ಡೆ ಪತ್ನಿ ಶ್ರೀಮತಿ ಅಚಲಾ ಶಚಿಂದ್ರ ಹೆಗ್ಡೆ ಇನ್ನಿಲ್ಲ...! ಏನಾಗಿತ್ತು ಇವರಿಗೆ..?!... ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ..! Shivamogga police : ಅಡಿಶನಲ್ ಎಸ್ ಪಿ ರಮೇಶ್ ಕುಮಾರ್ ಜೊತೆ ಕ್ರೈಂ ವಿಭಾಗದ ಇಬ್ಬರಿಗೆ ಮುಖ್ಯಮಂತ್ರಿ ಪದಕ..! ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ..!