Home ಶಿವಮೊಗ್ಗ“”ಹುಷಾರ್”” ಇನ್ನು ಮುಂದೆ ರೋಟರಿ ಚಿತ್ತಾಗಾರಕ್ಕೆ ಹೋಗುವ ಹಾಗಿಲ್ಲ..! ಬದುಕಿರುವವರಿಗೆ ಓಡಾಡಲು ಬಿಡುವುದಿಲ್ಲ..! ಸತ್ತವರನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗುವಂತಿಲ್ಲ..!ಇದು ಜಿಲ್ಲಾಧಿಕಾರಿಗಳ ಆದೇಶವಂತೆ..?! ರಸ್ತೆಗೆ ಬೀಳುತ್ತಂತೆ ಬೇಲಿ..! ವಿಡಿಯೋ ವೈರಲ್..!!!!!!!!!

“”ಹುಷಾರ್”” ಇನ್ನು ಮುಂದೆ ರೋಟರಿ ಚಿತ್ತಾಗಾರಕ್ಕೆ ಹೋಗುವ ಹಾಗಿಲ್ಲ..! ಬದುಕಿರುವವರಿಗೆ ಓಡಾಡಲು ಬಿಡುವುದಿಲ್ಲ..! ಸತ್ತವರನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗುವಂತಿಲ್ಲ..!ಇದು ಜಿಲ್ಲಾಧಿಕಾರಿಗಳ ಆದೇಶವಂತೆ..?! ರಸ್ತೆಗೆ ಬೀಳುತ್ತಂತೆ ಬೇಲಿ..! ವಿಡಿಯೋ ವೈರಲ್..!!!!!!!!!

by EDITOR NEWS WARRIORS

ಶಿವಮೊಗ್ಗ : ನಗರದ ವಿದ್ಯಾನಗರದ ವ್ಯಾಪ್ತಿಗೆ ಒಳಪಡುವ ಬಿ ,ಹೆಚ್ ರಸ್ತೆಯಲ್ಲಿರುವ ರೋಟರಿ ಚಿತಾಗರಕ್ಕೆ ಹೋಗುವ ದಾರಿಯನ್ನು ಗಣೇಶ ಆಲಿಯಾಸ್ ಮಂಜಪ್ಪ ಎನ್ನುವ ವ್ಯಕ್ತಿ ಆಕ್ರಮಿಸಿಕೊಂಡಿದ್ದು. ಜೊತೆಗೆ ಅಲ್ಲಿರುವ ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಒಳಪಡುವ ಜಾಗವನ್ನು ಆಕ್ರಮಿಸಿಕೊಂಡಿದ್ದು. ಸರ್ಕಾರಿ ಅಂಗನವಾಡಿಯ ಹೆಸರಿಗೆ ಈತ ಬಣ್ಣವನ್ನು ಬಳಿದಿದ್ದು ಬೇಲಿ ಹಾಕಿಕೊಂಡಿದ್ದಾನೆ. ಇಲ್ಲಿ ಓಡಾಡುವ ಜನರಿಗೆ ಧಮ್ಕಿ ಹಾಕುತ್ತಾನೆ. ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾನೆ.

ಸ್ಥಳೀಯ ಮಹಾನಗರ ಪಾಲಿಕೆಯ ಸದಸ್ಯರಿಗೂ ದಮ್ಕಿ ಹಾಕುತ್ತಾನೆ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾನೆ:

ಸ್ಥಳೀಯ ಮಹಾನಗರ ಪಾಲಿಕೆಯ ಸದಸ್ಯರು ಮಾಜಿ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರಾದ ಯಮುನಾ ರಂಗೇಗೌಡ ಅವರು ಜನರ ದೂರಿನ ಮೇರೆಗೆ ಈತನ ಬಳಿ ಹೀಗೆಲ್ಲ ಮಾಡುವುದು ಸರಿನಾ..? ತಪ್ಪಲ್ಲವೇ..? ಎಂದು ಪ್ರಶ್ನೆ ಮಾಡಿದ್ದಕ್ಕೆ. ಅವರ ವಿರುದ್ಧವೇ ತಿರುಗಿ ಬಿದ್ದು ಅವಾಚ್ಯ ಶಬ್ದಗಳಿಂದ ನಿಂದಿಸಿ ಬಯ್ಯುತ್ತಾನೆ…

ಸ್ಥಳೀಯವಾಗಿ ಓಡಾಡುವ ಜನರಿಗೂ ಬೈಯುತ್ತಾನೆ, ನಿಂದಿಸುತ್ತಾನೆ:

ಸ್ಥಳೀಯವಾಗಿ ಸಾರ್ವಜನಿಕರು ಸಾಮಾನ್ಯವಾಗಿ ಆ ರಸ್ತೆಯಲ್ಲಿ ಓಡಾಡುವಾಗ ಅವರಿಗೆ ಬೈಯುವುದು ನಿಂದಿಸುವುದು ಈ ರಸ್ತೆಯಲ್ಲಿ ಓಡಾಡಬೇಡಿ ಇದು ನನಗೆ ಸೇರಿದ್ದು ಎಂದು ಧಮ್ಕಿ ಹಾಕುತ್ತಾನೆ…

ಪತ್ರಕರ್ತರಿಗೆ ಅವಾಜ್ ಹಾಕುವ ಈತ ಜಿಲ್ಲಾಧಿಕಾರಿಗಳ ಆದೇಶ ಇದೆ ಎನ್ನುತ್ತಾನೆ:

ಸಾರ್ವಜನಿಕರ ಹಾಗೂ ಸ್ಥಳೀಯ ಮಹಾನಗರ ಪಾಲಿಕೆಯ ಸದಸ್ಯರ ದೂರಿನ ಮೇರೆಗೆ ಇಂದು ಸ್ಥಳಕ್ಕೆ ಭೇಟಿ ನೀಡಿದಾಗ ಮಾಧ್ಯಮದವರೆಂದು ಹೇಳಿದರು ಕೂಡ ಕೇಳಿಸಿಕೊಳ್ಳದೆ ನಮಗೆ ಧಮ್ಕಿ ಹಾಕಲು ಪ್ರಯತ್ನಿಸುತ್ತಾನೆ. ಕೇಳಿದ್ದಕ್ಕೆ ಜಿಲ್ಲಾಧಿಕಾರಿಗಳ ಆದೇಶವಿದೆ ಈ ರಸ್ತೆ ನನಗೆ ಸೇರಿದ್ದು ಇದಕ್ಕೆ ಬೇಲಿ ಹಾಕುತ್ತೇನೆ ಎಂದು ಹೇಳುತ್ತಾನೆ…

ಜಿಲ್ಲಾಧಿಕಾರಿಗಳೇ ಸರ್ಕಾರಿ ಜಾಗವನ್ನೇ ಆಕ್ರಮಿಸಿಕೊಂಡಿರುವ ಈತನ ಮೇಲೆ ಕ್ರಮ ತೆಗೆದುಕೊಳ್ಳಿ..! ಅಥವಾ ಈತ ಹೇಳುತ್ತಿರುವುದು ಸರಿ ಇದೆಯಾ ಪರೀಕ್ಷಿಸಿ..! ಸಾರ್ವಜನಿಕರಿಗೆ ನಮಗೆ ಇರುವ ಗೊಂದಲವನ್ನು ಬಗೆಹರಿಸಿ..!

ರಘುರಾಜ್ ಹೆಚ್.ಕೆ…9449553305….

Related Posts

1 comment

Enriquelow August 8, 2025 - 2:36 am

В этой статье-обзоре мы соберем актуальную информацию и интересные факты, которые освещают важные темы. Читатели смогут ознакомиться с различными мнениями и подходами, что позволит им расширить кругозор и глубже понять обсуждаемые вопросы.
Подробнее можно узнать тут – https://quick-vyvod-iz-zapoya-1.ru/

Reply

Leave a Comment

Latest news
Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga : ದೊಡ್ಡಪೇಟೆ ಪೊಲೀಸರ ಮಹತ್ವದ ಕಾರ್ಯಾಚರಣೆ ನೇಪಾಳಿ ಮಂಜ ಅಂದರ್..! Railway shivamogga: ರೈಲ್ವೆ ಹಳಿಗೆ ಬಿದ್ದ ಮಹಿಳೆ ಯಾರು..?! Health department: ಆರೋಗ್ಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದ ಹರ್ಷ ಗುಪ್ತಾ ವರ್ಗಾವಣೆ..! 26 ವರ್ಷ ಸೇವೆ 30 ಸಲ ಎತ... North East police:ಯಲಹಂಕ ನ್ಯೂಟೌನ್ ಪೊಲೀಸರ ಮಹತ್ವದ ಕಾರ್ಯಾಚರಣೆ..! ವಿದೇಶಿ ಪ್ರಜೆಯಿಂದ ₹2 ಕೋಟಿ ಮೌಲ್ಯದ 2 ಕೆ.ಜ... ತೀರ್ಥಹಳ್ಳಿ : ನಾಬಳ ಶಚಿಂದ್ರ ಹೆಗ್ಡೆ ಪತ್ನಿ ಶ್ರೀಮತಿ ಅಚಲಾ ಶಚಿಂದ್ರ ಹೆಗ್ಡೆ ಇನ್ನಿಲ್ಲ...! ಏನಾಗಿತ್ತು ಇವರಿಗೆ..?!... ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ..! Shivamogga police : ಅಡಿಶನಲ್ ಎಸ್ ಪಿ ರಮೇಶ್ ಕುಮಾರ್ ಜೊತೆ ಕ್ರೈಂ ವಿಭಾಗದ ಇಬ್ಬರಿಗೆ ಮುಖ್ಯಮಂತ್ರಿ ಪದಕ..! ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ..!