Home ಶಿವಮೊಗ್ಗಶಿವಮೊಗ್ಗದಲ್ಲಿ ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ (ರಿ) ಶಿವಮೊಗ್ಗ ಜಿಲ್ಲಾ ಸಮಿತಿಯಿಂದ ಬೃಹತ್‌ ಪ್ರತಿಭಟನೆ ..!!

ಶಿವಮೊಗ್ಗದಲ್ಲಿ ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ (ರಿ) ಶಿವಮೊಗ್ಗ ಜಿಲ್ಲಾ ಸಮಿತಿಯಿಂದ ಬೃಹತ್‌ ಪ್ರತಿಭಟನೆ ..!!

by EDITOR NEWS WARRIORS


“ಶಿವಮೊಗ್ಗ : ಅಸಂಘಟಿತ ಕಾರ್ಮಿಕ -ಸಾಮಾಜಿಕ ಭದ್ರತಾ ಮಂಡಳಿ ಮುಖೇನ ಟೈಲರ್ಸ್ ವೃತ್ತಿ ಬಾಂಧವರ ಬೇಡಿಕೆಗಳ ಈಡೇರಿಕೆಗಾಗಿ ಬೃಹತ್‌ ಪ್ರತಿಭಟನಾ ಮೆರವಣಿಗೆ” ಎಂಬ ಫಲಕದೊಂದಿಗೆ ಮೆರವಣಿಗೆ ಹೊರಟಿತು.


ನಗರದ ಗೋಪಿ ವೃತ್ತದಿಂದ ಬೃಹತ್‌ ಮೆರವಣಿಗೆಯಲ್ಲಿ ಸಾಗಿ ಜಿಲ್ಲಾಧಿಕಾರಿಗಳ ಕಛೇರಿಯ ಎದುರು ಜಮಾವಣೆಗೊಂಡು ಪ್ರತಿಭಟನೆ ಮಾಡಿದರು..


ಪ್ರತಿಭಟನೆಯಲ್ಲಿ ಶಿವಮೊಗ್ಗದ ಮಾಜಿ ಶಾಸಕರಾದ ಪ್ರಸನ್ನ ಕುಮಾರ್ ಮಾತನಾಡಿ

,”ಇಂದು ಟೈಲರ್ ಗಳು ಇಲ್ಲವೆಂದರೆ ನಾವ್ಯಾರೂ ಹೊರಗೆ ಬರುವಂತಿಲ್ಲ. ನಮ್ಮ ಮಾನಕ್ಕೆ ಇವರುಗಳೇ ಕಾರಣ ಇವರುಗಳಿಲ್ಲದೆ ನಾವಿಲ್ಲ. ರಸ್ತೆಯಲ್ಲಿ ಹೋಗುವವನಿಗೂ ಇವರು ಬೇಕು ಮನೆಯಲ್ಲಿ ಇರುವವರಿಗೂ ಇವರುಗಳು ಬೇಕೆ ಬೇಕು. ಇಂತಹ ಟೈಲರ್ ಗಳಿಗೆ ಬೆಲೆಯೇರಿಕೆಯ ಬಿಸಿಯೊಂದಿಗಿನ ಕಷ್ಟಕರ ಜೀವನದಲ್ಲಿ ಸರ್ಕಾರಗಳು ಇವರೊಂದಿಗೆ ನಿಲ್ಲಬೇಕಿದೆ”. ಎಂದು ಹೇಳುತ್ತಾ “ಪಕ್ಷ ಜಾತಿ ಜನಾಂಗವಿಲ್ಲದೆ ಎಲ್ಲರೂ ಇವರನ್ನು ಬೆಂಬಲಿಸಬೇಕು” ಎಂದು ತಮ್ಮ ಬೆಂಬಲವನ್ನು ಸೂಚಿಸಿದರು.


ಈ ಪ್ರತಿಭಟನೆಯ ಮೆರವಣಿಗೆಯ ನೈತ್ರತ್ವವಹಿಸಿದ ಶಿವಮೊಗ್ಗ ಜಿಲ್ಲಾ ಮುಖಂಡರಾದ ಜೆ.ಎಸ್.ಸುಬ್ರಹ್ಮಣ್ಯ ನಿಯೋಜಿತ ಅಧ್ಯಕ್ಷರು. ಪಿ.ರವೀಂದ್ರ ಪ್ರಧಾನ ಕಾರ್ಯದರ್ಶಿಗಳು. ಶ್ರೀಯುತ ಚಂದ್ರಶೇಖರ್ ಉಪಾಧ್ಯಕ್ಷರು. ಶ್ರೀಧರ್ ಉಪಾಧ್ಯಕ್ಷರು ಭಾಗವಹಿಸಿ ಹಲವು ಬೇಡಿಕೆಗಳ ಬಗ್ಗೆ ಮಾಹಿತಿಗಳನ್ನು ಇನ್ನು ಹದಿನೈದು ದಿನಗಳಲ್ಲಿ ಇದಕ್ಕೆ ಸೂಕ್ತ ನ್ಯಾಯವನ್ನು ಒದಗಿಸಿಕೊಡಬೇಕೆಂದು ಇಲ್ಲವಾದಲ್ಲಿ ಮುಂದಿನ ತಿಂಗಳ ಒಳಗೆ ರಾಜ್ಯಾದ್ಯಂತ ತೀವ್ರತರವಾದ ಹೋರಾಟವನ್ನು ಕೈಗೊಳ್ಳುವುದಾಗಿ ಆಗ್ರಹಿಸಿ ಎಚ್ಚರಿಕೆ ನೀಡಿದರು.

ನಂತರ ಜಿಲ್ಲಾಧಿಕಾರಿಗಳ ಪರವಾಗಿ ಸ್ಥಳಕ್ಕೆ ಆಗಮಿಸಿದ ತಹಶಿಲ್ದಾರರಿಗೆ ಮನವಿಯನ್ನು ಅರ್ಪಿಸಿದರು.


ಮಳೆಯ ಆರ್ಭಟದ ನಡುವೆಯೂ ಲೆಕ್ಕಿಸದೆ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಪ್ರತಿಭಟನಾಕಾರರಲ್ಲಿ ಮಹಿಳೆಯರು ಹೆಚ್ಚಿನ ಪಾಲು ವಹಿಸಿದ್ದರು..

ಮಾಹಿತಿ: ಎ.ಮೖಕಲ್ ಕೆನಿತ್….

ರಘುರಾಜ್ ಹೆಚ್.ಕೆ..9449553305….

Related Posts

Leave a Comment

Latest news
Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga : ದೊಡ್ಡಪೇಟೆ ಪೊಲೀಸರ ಮಹತ್ವದ ಕಾರ್ಯಾಚರಣೆ ನೇಪಾಳಿ ಮಂಜ ಅಂದರ್..! Railway shivamogga: ರೈಲ್ವೆ ಹಳಿಗೆ ಬಿದ್ದ ಮಹಿಳೆ ಯಾರು..?! Health department: ಆರೋಗ್ಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದ ಹರ್ಷ ಗುಪ್ತಾ ವರ್ಗಾವಣೆ..! 26 ವರ್ಷ ಸೇವೆ 30 ಸಲ ಎತ... North East police:ಯಲಹಂಕ ನ್ಯೂಟೌನ್ ಪೊಲೀಸರ ಮಹತ್ವದ ಕಾರ್ಯಾಚರಣೆ..! ವಿದೇಶಿ ಪ್ರಜೆಯಿಂದ ₹2 ಕೋಟಿ ಮೌಲ್ಯದ 2 ಕೆ.ಜ... ತೀರ್ಥಹಳ್ಳಿ : ನಾಬಳ ಶಚಿಂದ್ರ ಹೆಗ್ಡೆ ಪತ್ನಿ ಶ್ರೀಮತಿ ಅಚಲಾ ಶಚಿಂದ್ರ ಹೆಗ್ಡೆ ಇನ್ನಿಲ್ಲ...! ಏನಾಗಿತ್ತು ಇವರಿಗೆ..?!... ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ..! Shivamogga police : ಅಡಿಶನಲ್ ಎಸ್ ಪಿ ರಮೇಶ್ ಕುಮಾರ್ ಜೊತೆ ಕ್ರೈಂ ವಿಭಾಗದ ಇಬ್ಬರಿಗೆ ಮುಖ್ಯಮಂತ್ರಿ ಪದಕ..! ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ..!