Home ರಾಜ್ಯನ್ಯೂಸ್ ವಾರಿಯರ್ಸ್ ಪತ್ರಿಕೆ ವರದಿ ಬೆನ್ನಲ್ಲೇ ತೀರ್ಥಹಳ್ಳಿ ಬಂಡೆ ವ್ಯಾಪಾರಿಗಳಿಂದ ಗೃಹ ಸಚಿವರ ಭೇಟಿ..!!!! ಹರಾಜು ಪ್ರಕ್ರಿಯೆಯನ್ನು ತಡೆಗಟ್ಟಲು ಮನವಿ..!!! ಏನಿದು ಹೊಸ ತಂತ್ರ “”ಕುರುವಳ್ಳಿ ಬಂಡೆ ಹರಾಜಾಗಲು ಬಿಡುವುದಿಲ್ಲ ಅಕ್ರಮ ಗಣಿಗಾರಿಕೆ ನಿಲ್ಲುತಿಲ್ಲ”” ಕೋರ್ಟ್ ಆದೇಶಕ್ಕೆ ಕಿಮ್ಮತ್ತಿಲ್ಲ..?! ಹೀಗೆ ಮುಂದುವರೆದರೆ ಅಧಿಕಾರಿಗಳು ಜೈಲಿಗೆ ಹೋಗುವುದು ತಪ್ಪೋದಿಲ್ಲ..!!!!

ನ್ಯೂಸ್ ವಾರಿಯರ್ಸ್ ಪತ್ರಿಕೆ ವರದಿ ಬೆನ್ನಲ್ಲೇ ತೀರ್ಥಹಳ್ಳಿ ಬಂಡೆ ವ್ಯಾಪಾರಿಗಳಿಂದ ಗೃಹ ಸಚಿವರ ಭೇಟಿ..!!!! ಹರಾಜು ಪ್ರಕ್ರಿಯೆಯನ್ನು ತಡೆಗಟ್ಟಲು ಮನವಿ..!!! ಏನಿದು ಹೊಸ ತಂತ್ರ “”ಕುರುವಳ್ಳಿ ಬಂಡೆ ಹರಾಜಾಗಲು ಬಿಡುವುದಿಲ್ಲ ಅಕ್ರಮ ಗಣಿಗಾರಿಕೆ ನಿಲ್ಲುತಿಲ್ಲ”” ಕೋರ್ಟ್ ಆದೇಶಕ್ಕೆ ಕಿಮ್ಮತ್ತಿಲ್ಲ..?! ಹೀಗೆ ಮುಂದುವರೆದರೆ ಅಧಿಕಾರಿಗಳು ಜೈಲಿಗೆ ಹೋಗುವುದು ತಪ್ಪೋದಿಲ್ಲ..!!!!

by EDITOR NEWS WARRIORS

ತೀರ್ಥಹಳ್ಳಿ : ನ್ಯೂಸ್ ವಾರಿಯರ್ಸ್ ಪತ್ರಿಕೆ ಮೇಲಿನ ಕುರುವಳ್ಳಿ ಬಂಡೆಯ ಅಕ್ರಮ ಗಣಿಗಾರಿಕೆಯ ಬಗ್ಗೆ ಸಮಗ್ರವಾಗಿ ತನಿಖಾ ವರದಿ ಮಾಡಿದ್ದು. ಜಿಲ್ಲಾಧಿಕಾರಿಗಳ ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳ ಗಮನಕ್ಕೂ ತರಲಾಗಿತ್ತು. ಪತ್ರಿಕಾ ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿ ಆಕ್ರಮವಾಗಿ ಗಣಿಗಾರಿಕೆ ನಡೆಸುವ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಆದೇಶ ಮಾಡಿದ್ದರು.

ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಸ್ಥಳಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ಭೇಟಿ :

ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತೀರ್ಥಹಳ್ಳಿ ಮೇಲಿನ ಕುರುವಳ್ಳಿ ಬಂಡೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ಶ್ರೀಮತಿ ವಿಂದ್ಯ ಅವರು ತಮ್ಮ ತಂಡದೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ಮೂರು ಲಾರಿಗಳನ್ನು ವಶಪಡಿಸಿಕೊಂಡು ಪೊಲೀಸರ ವಶಕ್ಕೆ ಒಪ್ಪಿಸಿದರು. ಕೆಲವು ಕಲ್ಲು ಕಂಬಗಳನ್ನು ಒಡೆದು ಹಾಕಿಸಿದರು ಆದರೆ‌ ಮೂರು ಬಂಡೆಗಳಲ್ಲಿ ಒಂದೇ ಬಂಡೆಗೆ ಭೇಟಿ ನೀಡಿ 2 ಬಂಡೆಗಳಿಗೆ ಭೇಟಿ ನೀಡದೆ ಹಾಗೆ ಬಂದ ಉದ್ದೇಶವಾದರೂ ಏನು ಗೊತ್ತಿಲ್ಲ..?!! ಪತ್ರಿಕೆ ತನಿಖೆ ನಡೆಸುತ್ತಿದೆ… ಇದಕ್ಕೆ ಉತ್ತರವು ಸದ್ಯದಲ್ಲೇ ಪತ್ರಿಕೆ ನೀಡಲಿದೆ…

ವರದಿ ಬೆನ್ನಲ್ಲೇ ಗೃಹ ಸಚಿವರನ್ನು ಭೇಟಿ ಮಾಡಿದ ಕುರುವಳ್ಳಿ ಬಂಡೆ ವ್ಯಾಪಾರಿಗಳು..!!

ವರದಿ ಬೆನ್ನಲ್ಲೇ ಗೃಹ ಸಚಿವರನ್ನು ಕುರುವಳ್ಳಿ ಬಂಡೆ ವ್ಯಾಪಾರಿಗಳು ಭೇಟಿ ಮಾಡಿದ್ದು. ಮೇಲಿನ ಕುರುವಳಿ ಸರ್ವೆ ನಂಬರ್ 38 ರ 8ಎಕರೆ ಪ್ರದೇಶವನ್ನು ಹರಾಜಿಗೆ ನಿಗದಿಪಡಿಸಿದ್ದನ್ನು ವಜಾ ಪಡಿಸಿ ತಾಲ್ಲೂಕುವಾರು ಹರಾಜು ಹಾಕಲು ಮನವಿ ಮಾಡಿದ್ದಾರೆ.

ತೀರ್ಥಹಳ್ಳಿ ಕುರುವಳ್ಳಿ ಮತ್ತು ಮೇಲಿನ ಕುರುವಳ್ಳಿ ಬಂಡೆ ವ್ಯಾಪಾರಿಗಳು ಗೃಹಸಚಿವ ಆರಗ ಜ್ಞಾನೇಂದ್ರ ರವರನ್ನು ಭೇಟಿ ಮಾಡಿ ಮೇಲಿನ ಕುರುವಳ್ಳಿ ಗ್ರಾಮದ ಸರ್ವೆ ನಂಬರ್ 38 ರಲ್ಲಿರುವ 8ಎಕರೆ ಪ್ರದೇಶವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ಕಳೆದ 5ತಿಂಗಳ ಹಿಂದೆ ಹರಾಜು ಪ್ರಕ್ರಿಯೆ ಪ್ರಾರಂಭಿಸಿದ್ದು .ಈಗಾಗಲೇ ಟೆಂಡರ್ ನೀಡುವ ಅಂತಿಮ ಹಂತದಲ್ಲಿದೆ .ಇದನ್ನು ರದ್ದುಗೊಳಿಸಿ ತಾಲ್ಲೂಕು ವಾರ್ ಟೆಂಡರ್ ಕರೆಯಬೇಕೆಂದು ಒತ್ತಾಯಿಸಿ ನಿನ್ನೆಯ ದಿನ ಬೆಳಿಗ್ಗೆ ರಾಜ್ಯ ಗೃಹ ಸಚಿವರಾದ ಆರಗ ಜ್ಞಾನೇಂದ್ರ ರವರಿಗೆ ಬಂಡೆ ವ್ಯಾಪಾರಿಗಳು ಮತ್ತು ಲಾರಿ ಮಾಲೀಕರು ಮನವಿ ನೀಡಿರುತ್ತಾರೆ.

ಹತ್ತಾರು ವರ್ಷಗಳಿಂದ ಟೆಂಡರ್ ಇಲ್ಲದೆ ನಿರಂತರವಾಗಿ ಅಕ್ರಮ ಗಣೆಗಾರಿಕೆ ನಡೆಯುತ್ತಿರುವ ಬಂಡೆಗಳಿಂದ ಸರ್ಕಾರಕ್ಕೆ ಕೋಟ್ಯಾಂತರ ನಷ್ಟ :

ಸದರಿ ಬಂಡೆ ಪ್ರದೇಶವು ಹತ್ತು ಎಕರೆ ಸುಮಾರು 2004ರಿಂದ ಹರಾಜಾಗದೆ ಗುತ್ತಿಗೆಯನ್ನು ನೀಡದೆ ಬೇನಾಮಿಯಾಗಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು .ಈವರೆಗೆ ಸುಮಾರು ಮುನ್ನೂರು ಕೋಟಿ ರೂಪಾಯಿಗಳ ಕಲ್ಲು ಅಕ್ರಮವಾಗಿ ಸಾಗಾಟವಾಗಿದೆ ಎಂದು ಈಗಾಗಲೇ ಗಣಿ ಇಲಾಖೆಯು ಡ್ರೋಣ್ ಸರ್ವೆ ನಡೆಸಿದ ವಿವರದಲ್ಲಿ ಬಹಿರಂಗಗೊಂಡಿದೆ .ಸರ್ವೆ ನಂಬರ್ 38ರಲ್ಲಿ ತಲಾ ಇಪ್ಪತ್ತು ಗುಂಟೆ 4ಜನರಿಗೆ ಹಾಗೂ ಬುಕ್ಕಲಾಪುರ ಸರ್ವೇ ನಂಬರ್ 64 ತಲಾ ಇಪ್ಪತ್ತು ಗುಂಟೆ 5ಜನರಿಗೆ ಬಂಡೆ ಕೆಲಸ ಮಾಡಲು ಗಣಿ ಗುತ್ತಿಗೆ ನೀಡಲಾಗಿದೆ .ಆದರೆ ಇವರುಗಳು ಗುತ್ತಿಗೆ ಪ್ರದೇಶದ ಆಜುಬಾಜಿನಲ್ಲಿರುವ ಸರ್ವೆ ನಂಬರ್ 38 ರ ಪ್ರದೇಶವನ್ನು ಆಕ್ರಮಿಸಿಕೊಂಡು ಅಕ್ರಮವಾಗಿ ಕಲ್ಲು ತೆಗೆದು ಅದಕ್ಕೆ ರಾಯಲ್ಟಿ ಬಿಲ್ಲನ್ನು ಉಪಯೋಗಿಸಿಕೊಂಡು ಸರ್ಕಾರಕ್ಕೆ ಕೋಟ್ಯಂತರ₹ನಷ್ಟವಾಗಿರುತ್ತದೆ .

ಸಾರ್ವಜನಿಕರ ಆಕ್ಷೇಪ ಹಾಗೂ ಪತ್ರಿಕೆಗಳ ನಿರಂತರ ವರದಿಗಳ ಬೆನ್ನಲ್ಲೇ ಹರಾಜು ಪ್ರಕ್ರಿಯೆ ಶುರುವಾಯಿತು :

ಸಾರ್ವಜನಿಕರ ಒತ್ತಾಯದ ಮೇರೆಗೆ ಪತ್ರಿಕೆಗಳು ನಿರಂತರವಾಗಿ ವರದಿ ಪ್ರಕಟಿಸಿದ ಬೆನ್ನಲ್ಲೇ 8ಎಕರೆ ಬಂಡೆ ಪ್ರದೇಶವನ್ನು ಹರಾಜಿಗೆ ನಿಗದಿಪಡಿಸಲಾಗಿತ್ತು .ಈ ಅಕ್ರಮ ದಂಧೆಕೋರರು ಕಾರ್ಮಿಕರನ್ನು ಎತ್ತಿಕಟ್ಟಿ ಏನಾದರೊಂದು ವಿನಾಕಾರಣ ತಕರಾರನ್ನು ಎತ್ತಿಕೊಂಡೆ ಕಾರ್ಮಿಕರನ್ನು ಮುಂದಿಟ್ಟು ಹರಾಜಾಗದೆ ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ .ಹರಾಜಿಗಿಟ್ಟ ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು ಅದನ್ನು ರದ್ದುಗೊಳಿಸಲು ತಂತ್ರಗಾರಿಕೆ ಉಪಯೋಗಿಸಿ ನಿನ್ನೆಯ ದಿನ ಗೃಹ ಸಚಿವರನ್ನು ಭೇಟಿ ಮಾಡಿ ಮನವಿಯನ್ನು ನೀಡಿದ್ದಾರೆ .

ಈಗಾಗಲೇ ಸರ್ಕಾರಕ್ಕೆ ರೂ.300 ಕೋಟಿ ರೂ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ :

ಈಗಾಗಲೇ ಈ ಪ್ರದೇಶದಲ್ಲಿ ಮುನ್ನೂರು ಕೋಟಿ ರೂ ಅಕ್ರಮವಾಗಿ ಸಾಗಾಟವಾಗಿದೆ ಇದರ ಬಗ್ಗೆ ತನಿಖೆಯಾಗಬೇಕಾಗಿದೆ .ಈ ಪ್ರದೇಶದ ಹಿಂದಿನ ಗುತ್ತಿಗೆದಾರ ಭಾಸ್ಕರ್ ಎಂಬುವರ ಪತ್ನಿ ಗೀತಾ ಭಾಸ್ಕರ್ ಎಂಬುವರು 5ವರ್ಷಗಳ ಹಿಂದೆ ಜಿಲ್ಲಾಧಿಕಾರಿಗಳು ಗಣಿ ಅಧಿಕಾರಿಗಳಿಗೆ ಸರ್ಕಾರಕ್ಕೆ ಮನವಿ ನೀಡಿ ತಮಗೆ ನೀಡಿದ ಗಡಿಪ್ರದೇಶ ರದ್ದಾಗಿದ್ದು ಅದರಲ್ಲಿ ಅಕ್ರಮವಾಗಿ ನಿರಂತರವಾಗಿ ಕಲ್ಲು ಸಾಗಾಟವಾಗುತ್ತಿದೆ .ಈ 150ಕೋಟಿ ರೂಪಾಯಿಗಳ ಕಲ್ಲು ಅಕ್ರಮವಾಗಿ ಕಳ್ಳತನದಲ್ಲಿ ಹೋಗಿದೆ .ಇದನ್ನು ತಡೆಗಟ್ಟಿ ಎಂದು ಮನವಿ ನೀಡಿದ್ದರು . ಆದರೆ ಈವರೆಗೂ ಯಾವುದೇ ಕ್ರಮ ಜರುಗಿಸಿರುವುದಿಲ್ಲ .

ಒಟ್ಟಿನಲ್ಲಿ “”ಕುರುವಳ್ಳಿ ಬಂಡೆ ಹರಾಜಾಗಲು ಬಿಡುವುದಿಲ್ಲ ಅಕ್ರಮ ಸಾಗಾಟ ನಿಲ್ಲುವುದಿಲ್ಲ “”.ಆದುದರಿಂದ ಈ ಬಗ್ಗೆ ಜಿಲ್ಲಾಧಿಕಾರಿಗಳು ಜಿಲ್ಲಾ ರಕ್ಷಣಾಧಿಕಾರಿಗಳು ಶಿವಮೊಗ್ಗ ಜಿಲ್ಲಾ ಗಣಿ ಅಧಿಕಾರಿಗಳೊಂದಿಗೆ ಮತ್ತು ತಹಸೀಲ್ದಾರ್ .ಅರಣ್ಯಾಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ಮಾಡಿ ಕ್ರಮ ಜರುಗಿಸಲಿ … ಪತ್ರಿಕೆಯ ಬಳಿ ನ್ಯಾಯಾಲಯದ ಆದೇಶ, ಲೋಕಾಯುಕ್ತದ ಆದೇಶ ಒಂದಷ್ಟು ದಾಖಲೆಗಳು ಲಭ್ಯವಿದ್ದು ಕಾನೂನು ಹೋರಾಟ ನಡೆಸಲು ಚಿಂತನೆ ನಡೆಸುತ್ತಿದೆ…ಜಿಲ್ಲಾಧಿಕಾರಿಗಳೇ, ಜಿಲ್ಲಾ ರಕ್ಷಣಾಧಿಕಾರಿಗಳೇ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮ ತೆಗೆದುಕೊಳ್ಳಿ….

ರಘುರಾಜ್ ಹೆಚ್.ಕೆ…9449553305….

Related Posts

Leave a Comment

Latest news
Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga : ದೊಡ್ಡಪೇಟೆ ಪೊಲೀಸರ ಮಹತ್ವದ ಕಾರ್ಯಾಚರಣೆ ನೇಪಾಳಿ ಮಂಜ ಅಂದರ್..! Railway shivamogga: ರೈಲ್ವೆ ಹಳಿಗೆ ಬಿದ್ದ ಮಹಿಳೆ ಯಾರು..?! Health department: ಆರೋಗ್ಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದ ಹರ್ಷ ಗುಪ್ತಾ ವರ್ಗಾವಣೆ..! 26 ವರ್ಷ ಸೇವೆ 30 ಸಲ ಎತ... North East police:ಯಲಹಂಕ ನ್ಯೂಟೌನ್ ಪೊಲೀಸರ ಮಹತ್ವದ ಕಾರ್ಯಾಚರಣೆ..! ವಿದೇಶಿ ಪ್ರಜೆಯಿಂದ ₹2 ಕೋಟಿ ಮೌಲ್ಯದ 2 ಕೆ.ಜ... ತೀರ್ಥಹಳ್ಳಿ : ನಾಬಳ ಶಚಿಂದ್ರ ಹೆಗ್ಡೆ ಪತ್ನಿ ಶ್ರೀಮತಿ ಅಚಲಾ ಶಚಿಂದ್ರ ಹೆಗ್ಡೆ ಇನ್ನಿಲ್ಲ...! ಏನಾಗಿತ್ತು ಇವರಿಗೆ..?!... ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ..! Shivamogga police : ಅಡಿಶನಲ್ ಎಸ್ ಪಿ ರಮೇಶ್ ಕುಮಾರ್ ಜೊತೆ ಕ್ರೈಂ ವಿಭಾಗದ ಇಬ್ಬರಿಗೆ ಮುಖ್ಯಮಂತ್ರಿ ಪದಕ..! ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ..!