Home ರಾಜ್ಯಅರಣ್ಯ ಸಂರಕ್ಷಣೆಯ ಮಹತ್ವ ಪ್ರತಿಯೊಬ್ಬರೂ ಅರಿತುಕೊಳ್ಳಬೇಕು: ಜಿಲ್ಲಾಧಿಕಾರಿ ಆರ್.ಸೆಲ್ವಮಣಿ..!!

ಅರಣ್ಯ ಸಂರಕ್ಷಣೆಯ ಮಹತ್ವ ಪ್ರತಿಯೊಬ್ಬರೂ ಅರಿತುಕೊಳ್ಳಬೇಕು: ಜಿಲ್ಲಾಧಿಕಾರಿ ಆರ್.ಸೆಲ್ವಮಣಿ..!!

by EDITOR NEWS WARRIORS

ಶಿವಮೊಗ್ಗ, : ಅರಣ್ಯ ಸಂರಕ್ಷಣೆಯ ಮಹತ್ವವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕಾದ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಅವರು ತಿಳಿಸಿದರು.

ಅವರು ಇಂದು ಶ್ರೀಗಂಧ ಕೋಠಿ ಆವರಣದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮತರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಅರಣ್ಯ ಅಂದರೆ ಕೇವಲ ಮರಗಳು ಮಾತ್ರವಲ್ಲ. ಅಸಂಖ್ಯ ಜೀವ ಸಂಕುಲಗಳನ್ನು ಒಳಗೊಂಡ ಜೀವ ವೈವಿಧ್ಯ ವ್ಯವಸ್ಥೆಯಾಗಿದೆ. ಇದರ ಸಂರಕ್ಷಣೆಯ ಮಹತ್ವ ಪ್ರತಿಯೊಬ್ಬರೂ ಅರಿತುಕೊಳ್ಳಬೇಕಾದ ಅಗತ್ಯವಿದೆ. ಅಂತಹ ರಾಷ್ಟ್ರೀಯ ಸಂಪತ್ತಿನ ರಕ್ಷಣೆಯ ಕಾರ್ಯದಲ್ಲಿ ತಮ್ಮ ಜೀವವನ್ನು ತೆತ್ತವರನ್ನು ಸ್ಮರಿಸುವುದು ನಮ್ಮ ಕರ್ತವ್ಯವಾಗಿದೆ. ಪ್ರತಿಯೊಬ್ಬರೂ ಅರಣ್ಯ ಸಂರಕ್ಷಣೆಯ ಪ್ರತಿಜ್ಞೆ ಮಾಡುವುದೇ ಈ ಹುತಾತ್ಮರಿಗೆ ನೀಡಬಹುದಾದ ನಿಜವಾದ ಶ್ರದ್ಧಾಂಜಲಿ ಎಂದು ಹೇಳಿದರು.

ಹುತಾತ್ಮ ಸ್ಮಾರಕಕ್ಕೆ ಪುಷ್ಪಗುಚ್ಚ ಅರ್ಪಿಸಿ ಮಾತನಾಡಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಎಸ್.ಮಾನು, ಗಡಿಯಲ್ಲಿ ಯೋಧರು ದೇಶವನ್ನು ರಕ್ಷಿಸುವ ಕಾರ್ಯ ಮಾಡಿದರೆ, ದೇಶದ ಒಳಗೆ ಅರಣ್ಯ ಸಂಪತ್ತನ್ನು ಸಂರಕ್ಷಿಸುವ ಮಹತ್ವದ ಕಾರ್ಯವನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ನಡೆಸುತ್ತಿದ್ದಾರೆ. ಇಂದಿನ ದಿನಗಳಲ್ಲಿ ಪ್ರಾಣಿ ಮತ್ತು ಮಾನವನ ನಡುವಿನ ಸಂಘರ್ಷಗಳು ಹೆಚ್ಚುತ್ತಿದ್ದು, ಇಂತಹ ಸಂದರ್ಭಗಳಲ್ಲಿ ಅರಣ್ಯ ಇಲಾಖೆಯ ಜವಾಬ್ದಾರಿಯೂ ಹೆಚ್ಚುತ್ತಿದೆ.

ಅರಣ್ಯವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಅರಣ್ಯ ಸಂಪತ್ತು ದೇಶದ ಸಮೃದ್ಧಿಯ ಸಂಕೇತ. ಅರಣ್ಯವನ್ನು ಸಂರಕ್ಷಿಸುವುದರಿಂದ ಮಾತ್ರ ಮುಂದಿನ ಜನಾಂಗಕ್ಕೆ ಉತ್ತಮ ಭವಿಷ್ಯವನ್ನು ನೀಡಲು ನಮಗೆ ಸಾಧ್ಯವಿದೆ ಎಂದು ಹೇಳಿದರು.

ಅರಣ್ಯ ಸಂರಕ್ಷಣೆಗಾಗಿ ತಮ್ಮ ಪ್ರಾಣ ಬಲಿದಾನ ಮಾಡಿದ ಮಹನೀಯರ ಬಲಿದಾನ ವ್ಯರ್ಥವಾಗುವುದಿಲ್ಲ. ಅರಣ್ಯ ಸಂರಕ್ಷಣೆಯ ನಮ್ಮ ಬದ್ದತೆಯನ್ನು ಇದು ಇನ್ನಷ್ಟು ಹೆಚ್ಚಿಸುತ್ತದೆ. ಅಂತಹ ಹುತಾತ್ಮರ ಕುಟುಂಬದೊಂದಿಗೆ ಇಲಾಖೆ ಸದಾ ಇರುತ್ತದೆ. ಪ್ರತಿಯೊಬ್ಬರೂ ಅರಣ್ಯ ಸಂರಕ್ಷಣೆಗಾಗಿ ಸ್ವಯಂ ಯೋಧರಾಗಬೇಕು ಎಂದು ಶಿವಮೊಗ್ಗ ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಟಿ.ಹನುಮಂತಪ್ಪ ಅವರು ಹೇಳಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಈ.ಶಿವಶಂಕರ್ ಅವರು ಕರ್ತವ್ಯದ ಸಂದರ್ಭದಲ್ಲಿ ಪ್ರಾಣ ಅರ್ಪಿಸಿದ ಅಧಿಕಾರಿಗಳ ಪಟ್ಟಿಯನ್ನು ವಾಚಿಸಿದರು. ಅತಿಥಿಗಳು ಹುತಾತ್ಮ ಸ್ಮಾರಕಕ್ಕೆ ಪುಷ್ಪ ಗುಚ್ಚ ಅರ್ಪಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ಪೊಲೀಸ್ ತಂಡದಿಂದ ಕುಶಾಲು ತೋಪು ಹಾರಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಐ.ಎಂ.ನಾಗರಾಜ ಮತ್ತಿತರರು ಉಪಸ್ಥಿತರಿದ್ದರು.

ರಘುರಾಜ್ ಹೆಚ್.ಕೆ…9449553305….

Related Posts

1 comment

mitolyn reviews January 26, 2026 - 6:06 pm

**mitolyn reviews**

Mitolyn is a carefully developed, plant-based formula created to help support metabolic efficiency and encourage healthy, lasting weight management.

Reply

Leave a Comment

Latest news
Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga : ದೊಡ್ಡಪೇಟೆ ಪೊಲೀಸರ ಮಹತ್ವದ ಕಾರ್ಯಾಚರಣೆ ನೇಪಾಳಿ ಮಂಜ ಅಂದರ್..! Railway shivamogga: ರೈಲ್ವೆ ಹಳಿಗೆ ಬಿದ್ದ ಮಹಿಳೆ ಯಾರು..?! Health department: ಆರೋಗ್ಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದ ಹರ್ಷ ಗುಪ್ತಾ ವರ್ಗಾವಣೆ..! 26 ವರ್ಷ ಸೇವೆ 30 ಸಲ ಎತ... North East police:ಯಲಹಂಕ ನ್ಯೂಟೌನ್ ಪೊಲೀಸರ ಮಹತ್ವದ ಕಾರ್ಯಾಚರಣೆ..! ವಿದೇಶಿ ಪ್ರಜೆಯಿಂದ ₹2 ಕೋಟಿ ಮೌಲ್ಯದ 2 ಕೆ.ಜ... ತೀರ್ಥಹಳ್ಳಿ : ನಾಬಳ ಶಚಿಂದ್ರ ಹೆಗ್ಡೆ ಪತ್ನಿ ಶ್ರೀಮತಿ ಅಚಲಾ ಶಚಿಂದ್ರ ಹೆಗ್ಡೆ ಇನ್ನಿಲ್ಲ...! ಏನಾಗಿತ್ತು ಇವರಿಗೆ..?!... ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ..! Shivamogga police : ಅಡಿಶನಲ್ ಎಸ್ ಪಿ ರಮೇಶ್ ಕುಮಾರ್ ಜೊತೆ ಕ್ರೈಂ ವಿಭಾಗದ ಇಬ್ಬರಿಗೆ ಮುಖ್ಯಮಂತ್ರಿ ಪದಕ..! ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ..!