Home ರಾಜ್ಯTHIRTHALLI:: ಗೃಹ ಸಚಿವರ ಪ್ರಯತ್ನದ ಫಲವಾಗಿ ಕೋಣಂದೂರು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 25 ಹಾಸಿಗೆಗಳ ಮಾದರಿ ಸಮುದಾಯ ಆರೋಗ್ಯ ಕೇಂದ್ರವಾಗಿ ಉನ್ನತಿಗೆ ಸಚಿವ ಸಂಪುಟ ಅನುಮೋದನೆ..!!!

THIRTHALLI:: ಗೃಹ ಸಚಿವರ ಪ್ರಯತ್ನದ ಫಲವಾಗಿ ಕೋಣಂದೂರು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 25 ಹಾಸಿಗೆಗಳ ಮಾದರಿ ಸಮುದಾಯ ಆರೋಗ್ಯ ಕೇಂದ್ರವಾಗಿ ಉನ್ನತಿಗೆ ಸಚಿವ ಸಂಪುಟ ಅನುಮೋದನೆ..!!!

by EDITOR NEWS WARRIORS

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ
ರಾಜ್ಯ ಸಚಿವ ಸಂಪುಟದಲ್ಲಿ, ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು, 25 ಹಾಸಿಗೆಗಳ, ಸಮುದಾಯ ಆರೋಗ್ಯ ಕೇಂದ್ರ ವನ್ನಾಗಿ, ಉನ್ನತೀಕರಿಸಲು, ಅಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ.

ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಉಪಸ್ಥಿತರಿದ್ದ ಸಂಪುಟದ ಸಭೆ, ಈ ನಿರ್ಧಾರ ಕೈಗೊಂಡಿದ್ದು, ಬಹಳ ದಿನಗಳಿಂದ ಬೇಡಿಕೆಯಾಗಿಯೇ ಉಳಿದಿದ್ದ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದೆ.

2022-23 ನೇ ಸಾಲಿನ ಆಯವ್ಯಯ ಭಾಷಣದಲ್ಲಿ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು, ರಾಜ್ಯದಲ್ಲಿ, ಹೆಚ್ಚಿನ ಕಾರ್ಯ ಒತ್ತಡವಿರುವ ಒಟ್ಟು 1೦೦ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು 1೦೦೦ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಉನ್ನತೀಕರಿಸುವ ಯೋಜನೆಯನ್ನು, ಘೋಷಿಸಿದ್ದರು.

ಈ ಯೋಜನೆಯ ಲಾಭ ತಾಲೂಕಿನ ಜನತೆಗೆ ಪಡೆದುಕೊಳ್ಳಲು, ಗೃಹ ಸಚಿವ ಆರಗ ಜ್ಞಾನೇಂದ್ರ ರವರು ವಿಶೇಷ ಮುತುವರ್ಜಿ ವಹಿಸಿದ್ದರು.

ತಾಲೂಕಿನ ಜನತೆಯ ಬಹಳ ದಿನಗಳ ಬೇಡಿಕೆಯನ್ನು ಈಡೇರಿಸಿದ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ, ಗೃಹ ಸಚಿವ ಆರಗ ಜ್ಞಾನೇಂದ್ರ ರವರು ಕೃತಜ್ಞತೆ ಸಲ್ಲಿಸಿದ್ದಾರೆ….

ರಘುರಾಜ್ ಹೆಚ್.ಕೆ..9449553305…

Related Posts

Leave a Comment

Latest news
Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga : ದೊಡ್ಡಪೇಟೆ ಪೊಲೀಸರ ಮಹತ್ವದ ಕಾರ್ಯಾಚರಣೆ ನೇಪಾಳಿ ಮಂಜ ಅಂದರ್..! Railway shivamogga: ರೈಲ್ವೆ ಹಳಿಗೆ ಬಿದ್ದ ಮಹಿಳೆ ಯಾರು..?! Health department: ಆರೋಗ್ಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದ ಹರ್ಷ ಗುಪ್ತಾ ವರ್ಗಾವಣೆ..! 26 ವರ್ಷ ಸೇವೆ 30 ಸಲ ಎತ... North East police:ಯಲಹಂಕ ನ್ಯೂಟೌನ್ ಪೊಲೀಸರ ಮಹತ್ವದ ಕಾರ್ಯಾಚರಣೆ..! ವಿದೇಶಿ ಪ್ರಜೆಯಿಂದ ₹2 ಕೋಟಿ ಮೌಲ್ಯದ 2 ಕೆ.ಜ... ತೀರ್ಥಹಳ್ಳಿ : ನಾಬಳ ಶಚಿಂದ್ರ ಹೆಗ್ಡೆ ಪತ್ನಿ ಶ್ರೀಮತಿ ಅಚಲಾ ಶಚಿಂದ್ರ ಹೆಗ್ಡೆ ಇನ್ನಿಲ್ಲ...! ಏನಾಗಿತ್ತು ಇವರಿಗೆ..?!... ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ..! Shivamogga police : ಅಡಿಶನಲ್ ಎಸ್ ಪಿ ರಮೇಶ್ ಕುಮಾರ್ ಜೊತೆ ಕ್ರೈಂ ವಿಭಾಗದ ಇಬ್ಬರಿಗೆ ಮುಖ್ಯಮಂತ್ರಿ ಪದಕ..! ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ..!