Home ರಾಜ್ಯG P S ಮೂಲಕ ಉದ್ಯಮಿಯನ್ನು ಹಿಂಬಾಲಿಸಿ 50 ಲಕ್ಷ ದೋಚಿದ 9ಮಂದಿ ದರೋಡೆಕೋರರ ಬಂಧನ..!! ಶಿರಸಿ ಪೊಲೀಸರ ಕಾರ್ಯಾಚರಣೆಗೆ ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಾಪಕ ಪ್ರಶಂಸೆ…!!!

G P S ಮೂಲಕ ಉದ್ಯಮಿಯನ್ನು ಹಿಂಬಾಲಿಸಿ 50 ಲಕ್ಷ ದೋಚಿದ 9ಮಂದಿ ದರೋಡೆಕೋರರ ಬಂಧನ..!! ಶಿರಸಿ ಪೊಲೀಸರ ಕಾರ್ಯಾಚರಣೆಗೆ ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಾಪಕ ಪ್ರಶಂಸೆ…!!!

by EDITOR NEWS WARRIORS

ಶಿರಸಿ: ಕಳೆದ ಎಂಟು ದಿನಗಳ ಹಿಂದೆ ತಾಲೂಕಿನ ಬನವಾಸಿ ಸಮೀಪದ ಅಂಡಗಿ ಸಮೀಪ ನಡೆದ 50 ಲಕ್ಷ ರೂ.ದರೋಡೆಗೆ ಸಂಬಂಧಿಸಿ 9 ಮಂದಿ ಅಂತರ್ ಜಿಲ್ಲಾ ದರೋಡೆಕೋರರನ್ನು ಶಿರಸಿ ಉಪ ವಿಭಾಗದ ಪೊಲೀಸರು ಬಂಧಿಸಿ 13.82 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ.ನ.19 ರ ಸಂಜೆ ಹಸನ್ ಜಾವೇದ್‌ಖಾನ್ ಎಂಬುವವರು ತನ್ನ ಇಬ್ಬರು ಸಂಬಂಧಿಕರೊಂದಿಗೆ 50 ಲಕ್ಷ ರೂ.ತೆಗೆದುಕೊಂಡು ಬೆಳಗಾವಿಯಲ್ಲಿ ಸೈಟ್ ನೋಡಿಕೊಂಡು ಕಾರಿನಲ್ಲಿ ವಾಪಸ್ ಬರುತ್ತಿರುವಾಗ ಅಂಡಗಿ ಬಸ್ ನಿಲ್ದಾಣದ ಹತ್ತಿರ ಒಂದು ಕೆಂಪು ಬಣ್ಣದ ಕಾರಿನಲ್ಲಿ ಬಂದ ದರೋಡೆಕೋರರು ಅಡ್ಡ ಹಾಕಿದ್ದರು. ಹಿಂಬದಿ ಸೀಟಿನ ಮೇಲಿದ್ದ 50 ಲಕ್ಷ ರೂಪಾಯಿ ಹಣವಿದ್ದ ಪ್ಲಾಸ್ಟಿಕ್ ಚೀಲವನ್ನು ಕಸಿದುಕೊಂಡು ಪರಾರಿಯಾದ ಬಗ್ಗೆ ಬನವಾಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಬಗ್ಗೆ ಸಿಪಿಐ ರಾಮಚಂದ್ರ ನಾಯಕ ನೇತೃತ್ವದಲ್ಲಿ ತಂಡ ರಚನೆ ಮಾಡಿ ಕಾರ್ಯಾಚರಣೆ ನಡೆಸಿ ಪ್ರಕರಣ ಭೇಧಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಆಸೀಫ್ ಅಬ್ದುಲ್ ಸತ್ತಾರ್ ಸಾಗರ, ಅಬ್ದುಲ್ ಹಮೀದ್ ಅಬ್ದುಲ್ ಸತ್ತಾರ್ ಸಿದ್ಧಾಪುರ, ಅಜಿಮುಲ್ಲಾ ಅಕ್ಷರಸಾಬ್ ಸಿದ್ಧಾಪುರ, ಮನ್ಸೂರ್ ಜಾಫರ್ ಖಾನ್ ಸಾಗರ, ಅಬ್ದುಲ್ ರೆಹಮಾನ್ ಶಟ್ಟರ್ ವಟರಾಗ ಭಟ್ಕಳ, ರಿಯಾಜ್ ಫಯಾಜ್ ಕೊಪ್ಪ,ವಿಶ್ವನಾಥ ವಾಸು ಶೆಟ್ಟಿ ಕೊಪ್ಪ, ಮನೋಹರ ಆನಂದ ಶೆಟ್ಟಿ ಕೊಪ್ಪ, ಈಕ್ವಾಲ್ ಅಬ್ದುಲ್ ಕೆ. ತೀರ್ಥಹಳ್ಳಿ ಇವರುಗಳನ್ನು ಬಂಧಿಸಲಾಗಿದೆ.

ಬಂಧಿತರಿಂದ ಕೃತ್ಯಕ್ಕೆ ಉಪಯೋಗಿಸಿದ ಎರಡು ಕಾರು, 12 ಮೊಬೈಲ್ ಹಾಗೂ ಜಿಪಿಎಸ್ ಟ್ರ‍್ಯಾಕರ್ ವಶಪಡಿಸಿಕೊಳ್ಳಲಾಗಿದೆ. ಇನ್ನೂ ಕೆಲ ಆರೋಪಿಗಳ ಪತ್ತೆ ಹಾಗೂ ನಗದು ಜಪ್ತು ಬಾಕಿ ಇದ್ದು ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

“ಟ್ರ್ಯಾಕರ್ ಬಳಸಿ ಬೆನ್ನು ಬಿದ್ದಿದ್ದರು”

‘ಉದ್ಯಮಿ ಜಾವೇದ್ ಹಣಕಾಸು ವ್ಯವಹಾರ ಅರಿತಿದ್ದ ಆಸಿಫ್, ಆಗಾಗ ಉದ್ಯಮಿಯ ಮನೆಗೆ ಭೇಟಿ ನೀಡುತ್ತಿದ್ದ. ಭೂಮಿ ಖರೀದಿಗೆ ಬೆಳಗಾವಿಗೆ ತೆರಳುವುದನ್ನು ಅರಿತಿದ್ದರಿಂದ ವಾಹನಕ್ಕೆ ಜಿ.ಪಿ.ಎಸ್. ಟ್ರ್ಯಾಕರ್ ಅಳವಡಿಸಿದ್ದ. ನಿರಂತರವಾಗಿ ಟ್ರ್ಯಾಕರ್ ಮೂಲಕ ಚಲನವಲನ ಗಮನಿಸುತ್ತಿದ್ದ ಈತ ಸಹಚರರ ಜತೆ ಸೇರಿ ನಿರ್ಜನ ಪ್ರದೇಶದಲ್ಲಿ ಅಡ್ಡಗಟ್ಟಿ ಕೃತ್ಯ ಎಸಗಿದ್ದ’ ಎಂದು ತನಿಖೆಯ ನೇತೃತ್ವ ವಹಿಸಿದ್ದ ಡಿಎಸ್ಪಿ ರವಿ ನಾಯ್ಕ ವಿವರಿಸಿದರು.

ಈ ಪ್ರಕರಣದ ಪತ್ತೆಕಾರ್ಯದಲ್ಲಿ ಉಸ್ತುವಾರಿ ವಹಿಸಿದ ಡಿವೈಎಸ್‌ಪಿ ರವಿ ಡಿ. ನಾಯ್ಕ, ತನಿಖಾಧಿಕಾರಿಯಾದ ಸಿಪಿಐ ರಾಮಚಂದ್ರ ನಾಯಕ, ಪತ್ತೆ ತಂಡದ ಅಧಿಕಾರಿ ಪಿಎಸ್‌ಐಗಳಾದ ಹನುಮಂತ ಬಿರಾದಾರ, ಭೀಮಾ ಶಂಕರ ಸಿನೂರು, ಚಂದ್ರಕಲಾ ಪತ್ತಾರ, ಸಿಬಂದಿಗಳ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಎನ್ ಬಹುಮಾನ ಘೋಷಿಸಿದ್ದಾರೆ.

ಓಂಕಾರ ಎಸ್. ವಿ. ತಾಳಗುಪ್ಪ….

ರಘುರಾಜ್ ಹೆಚ್.ಕೆ..9449553305…

Related Posts

1 comment

mitolyn official January 26, 2026 - 8:48 am

**mitolyn official**

Mitolyn is a carefully developed, plant-based formula created to help support metabolic efficiency and encourage healthy, lasting weight management.

Reply

Leave a Comment

Latest news
Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga : ದೊಡ್ಡಪೇಟೆ ಪೊಲೀಸರ ಮಹತ್ವದ ಕಾರ್ಯಾಚರಣೆ ನೇಪಾಳಿ ಮಂಜ ಅಂದರ್..! Railway shivamogga: ರೈಲ್ವೆ ಹಳಿಗೆ ಬಿದ್ದ ಮಹಿಳೆ ಯಾರು..?! Health department: ಆರೋಗ್ಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದ ಹರ್ಷ ಗುಪ್ತಾ ವರ್ಗಾವಣೆ..! 26 ವರ್ಷ ಸೇವೆ 30 ಸಲ ಎತ... North East police:ಯಲಹಂಕ ನ್ಯೂಟೌನ್ ಪೊಲೀಸರ ಮಹತ್ವದ ಕಾರ್ಯಾಚರಣೆ..! ವಿದೇಶಿ ಪ್ರಜೆಯಿಂದ ₹2 ಕೋಟಿ ಮೌಲ್ಯದ 2 ಕೆ.ಜ... ತೀರ್ಥಹಳ್ಳಿ : ನಾಬಳ ಶಚಿಂದ್ರ ಹೆಗ್ಡೆ ಪತ್ನಿ ಶ್ರೀಮತಿ ಅಚಲಾ ಶಚಿಂದ್ರ ಹೆಗ್ಡೆ ಇನ್ನಿಲ್ಲ...! ಏನಾಗಿತ್ತು ಇವರಿಗೆ..?!... ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ..! Shivamogga police : ಅಡಿಶನಲ್ ಎಸ್ ಪಿ ರಮೇಶ್ ಕುಮಾರ್ ಜೊತೆ ಕ್ರೈಂ ವಿಭಾಗದ ಇಬ್ಬರಿಗೆ ಮುಖ್ಯಮಂತ್ರಿ ಪದಕ..! ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ..!