Home ರಾಜ್ಯತೀರ್ಥಹಳ್ಳಿ : ಆಗುಂಬೆ ಹೋಬಳಿಯ ಬಿದರಗೋಡು ಪೇಟೆಯ ಹತ್ತಿರ ಬಾಂಬೆ ಡಾಕಮ್ಮನ ತೋಟದ ಬಾವಿಯಲ್ಲಿ ಅಳಿಯನಿಂದಲೇ ಕೊಲೆಯಾದ ಮಹಿಳೆಯ ಶವ ಪತ್ತೆ..!! ಕೊಲೆಗೆ ಕಾರಣವೇನು..?!

ತೀರ್ಥಹಳ್ಳಿ : ಆಗುಂಬೆ ಹೋಬಳಿಯ ಬಿದರಗೋಡು ಪೇಟೆಯ ಹತ್ತಿರ ಬಾಂಬೆ ಡಾಕಮ್ಮನ ತೋಟದ ಬಾವಿಯಲ್ಲಿ ಅಳಿಯನಿಂದಲೇ ಕೊಲೆಯಾದ ಮಹಿಳೆಯ ಶವ ಪತ್ತೆ..!! ಕೊಲೆಗೆ ಕಾರಣವೇನು..?!

by EDITOR NEWS WARRIORS

ತೀರ್ಥಹಳ್ಳಿ : ತಾಲೂಕಿನ ಆಗುಂಬೆ ಹೋಬಳಿಯ ಬಿದರಗೋಡು ಪೇಟೆಯ ಹತ್ತಿರ ಬಾಂಬೆ ಡಾಕಮ್ಮನ ತೋಟದ ಬಾವಿಯಲ್ಲಿ ಶವವಾಗಿ ಪತ್ತೆಯಾದ ಮಹಿಳೆ…

ಕೂಲಿ ಕೆಲಸಕ್ಕೆ ಬಂದಿದ್ದ 45 ವರ್ಷದ ಮಹಿಳೆಯ ಕೊಲೆ:

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಸುಮಾರು 45 ವರ್ಷದ ಪಾರ್ವತಮ್ಮ ಎನ್ನುವ ಮಹಿಳೆಯನ್ನು ಆಕೆಯ ಜೊತೆಗೆ ಕೆಲಸಕ್ಕೆ ಬಂದಿದ್ದ ಆಕೆಯ ಆಳಿಯ ಕೊಲೆ ಮಾಡಿ ಬಾವಿಗೆ ಹಾಕಿದ್ದಾನೆ..

ಕೊಲೆಗೆ ಕಾರಣವೇನು..?!

ಪಾರ್ವತಮ್ಮನ ಅಳಿಯನೇ ಕೊಲೆ ಮಾಡಿದ ಯುವಕ ಎಲ್ಲರೂ ಸೇರಿ ಕೂಲಿ ಕೆಲಸಕ್ಕಾಗಿ ಸುರೇಶ್ ಎನ್ನುವ ಮೇಸ್ತ್ರಿ ಯ ಹತ್ತಿರ ಬಿದರಗೋಡಿಗೆ ಬಂದಿರುತ್ತಾರೆ. ಉಳಿದವರೆಲ್ಲ ಗೊಬ್ಬರ ತರಲು ಹೊರಗೆ ಹೋಗಿದ್ದಾಗ ಪಾರ್ವತಮ್ಮನ ಅಳಿಯ ಈ ಯುವಕ ಮತ್ತು ಪಾರ್ವತಮ್ಮನ ನಡುವೆ ಗಲಾಟೆ ನಡೆದಿದೆ.. ಅದು ಹಣ ಹಾಗೂ ಆಕೆಯ ಬಳಿಯಿದ್ದ ಬಂಗಾರದ ವಿಚಾರಕ್ಕೆ ಎನ್ನುವ ಅನುಮಾನ ಇದೆ.. ಗಲಾಟೆ ಹೆಚ್ಚಾದಾಗ ಪಾರ್ವತಮ್ಮನ ಅಳಿಯ ಯುವಕ ಗುದ್ದಲಿಯ ಹಿಂಭಾಗದಿಂದ ತಲೆಗೆ ಬಲವಾಗಿ ಹೊಡೆದಿದ್ದಾನೆ… ನಂತರ ಮೊಬೈಲ್ ಚಾರ್ಜರ್ ನಿಂದ ಅತ್ತೆಯನ್ನು ಕಟ್ಟಿ ಎಳೆದುಕೊಂಡು ಹೋಗಿ ತೋಟದ ಬಾವಿಯಲ್ಲಿ ಹಾಕಿದ್ದಾನೆ… ಈ ಘಟನೆ ಸುಮಾರು ಬೆಳಿಗ್ಗೆ 10 ರಿಂದ 10:30 ರ ಸುಮಾರಿಗೆ ನಡೆದಿದೆ… ನಂತರ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸುತ್ತಿದ್ದಾಗ ಪೊಲೀಸರು ಈತನನ್ನು ಹಿಡಿದಿದ್ದಾರೆ… ಸದ್ಯ ಪೊಲೀಸರ ವಶದಲ್ಲಿರುವ ಈತನ ವಿಚಾರಣೆಯಿಂದ ತನ್ನ ಅತ್ತೆಯ ಕೊಲೆಗೆ ಹಣ ಮತ್ತು ಬಂಗಾರ ಕಾರಣನಾ ..?!ಅಥವಾ ಇನ್ಯಾವುದಾದರೂ ಕಾರಣ ಇದೆಯಾ ಎನ್ನುವ ಅಂಶ ಬೆಳಕಿಗೆ ಬರಬೇಕು…

ರಘುರಾಜ್ ಹೆಚ್.ಕೆ…9449553305…

Related Posts

Leave a Comment

Latest news
Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga : ದೊಡ್ಡಪೇಟೆ ಪೊಲೀಸರ ಮಹತ್ವದ ಕಾರ್ಯಾಚರಣೆ ನೇಪಾಳಿ ಮಂಜ ಅಂದರ್..! Railway shivamogga: ರೈಲ್ವೆ ಹಳಿಗೆ ಬಿದ್ದ ಮಹಿಳೆ ಯಾರು..?! Health department: ಆರೋಗ್ಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದ ಹರ್ಷ ಗುಪ್ತಾ ವರ್ಗಾವಣೆ..! 26 ವರ್ಷ ಸೇವೆ 30 ಸಲ ಎತ... North East police:ಯಲಹಂಕ ನ್ಯೂಟೌನ್ ಪೊಲೀಸರ ಮಹತ್ವದ ಕಾರ್ಯಾಚರಣೆ..! ವಿದೇಶಿ ಪ್ರಜೆಯಿಂದ ₹2 ಕೋಟಿ ಮೌಲ್ಯದ 2 ಕೆ.ಜ... ತೀರ್ಥಹಳ್ಳಿ : ನಾಬಳ ಶಚಿಂದ್ರ ಹೆಗ್ಡೆ ಪತ್ನಿ ಶ್ರೀಮತಿ ಅಚಲಾ ಶಚಿಂದ್ರ ಹೆಗ್ಡೆ ಇನ್ನಿಲ್ಲ...! ಏನಾಗಿತ್ತು ಇವರಿಗೆ..?!... ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ..! Shivamogga police : ಅಡಿಶನಲ್ ಎಸ್ ಪಿ ರಮೇಶ್ ಕುಮಾರ್ ಜೊತೆ ಕ್ರೈಂ ವಿಭಾಗದ ಇಬ್ಬರಿಗೆ ಮುಖ್ಯಮಂತ್ರಿ ಪದಕ..! ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ..!