Home ರಾಜ್ಯBIG BREAKING: ತೀರ್ಥಹಳ್ಳಿ ನಕಲಿ ವೈದ್ಯ ಸಂಜೀವ್ ಶೆಟ್ಟಿಗೆ 12 ವರ್ಷ ಜೈಲು ಶಿಕ್ಷೆ ನ್ಯಾಯಾಲಯದ ಮಹತ್ವದ ಆದೇಶ..!!

BIG BREAKING: ತೀರ್ಥಹಳ್ಳಿ ನಕಲಿ ವೈದ್ಯ ಸಂಜೀವ್ ಶೆಟ್ಟಿಗೆ 12 ವರ್ಷ ಜೈಲು ಶಿಕ್ಷೆ ನ್ಯಾಯಾಲಯದ ಮಹತ್ವದ ಆದೇಶ..!!

by EDITOR NEWS WARRIORS

ತೀರ್ಥಹಳ್ಳಿ : ತಾಲೂಕಿನ ಕೋಣಂದೂರು ನಕಲಿ ವೈದ್ಯ ಸಂಜೀವ ಶೆಟ್ಟಿ ಎಂಬುವರಿಗೆ ಜೈಲು ಶಿಕ್ಷೆ ವಿಧಿಸಿ ತೀರ್ಥಹಳ್ಳಿ ಹಿರಿಯ ಸಿವಿಲ್ ನ್ಯಾಯಾಲಯ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯ ದ ಮಹತ್ವದ ಆದೇಶ ನೀಡಿದೆ. ಹಲವು ಸೆಕ್ಷನ್ ಗಳ ಪ್ರಕಾರ 12 ವರ್ಷಗಳ ಕಾಲ ಜೈಲು ಶಿಕ್ಷೆ ಮತ್ತು 50 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ.

ತೀರ್ಥಹಳ್ಳಿ ತಾಲೂಕಿನ ಕೋಣಂದೂರು. ಎಂ. ಕೆ .ರಸ್ತೆಯಲ್ಲಿ “ಅಶ್ವಿನಿ ಕ್ಲಿನಿಕ್” ಎಂಬ ಹೆಸರಿನಲ್ಲಿ ನಕಲಿ ವೈದ್ಯಕೀಯ ವೃತ್ತಿಯನ್ನು ನಡೆಸುತ್ತಿದ್ದ “ಸಂಜೀವ ಶೆಟ್ಟಿ” ಎಂಬುವನು ಸುಳ್ಳು ದಾಖಲೆಗಳನ್ನು ಇಟ್ಟುಕೊಂಡು ವೈದ್ಯಕೀಯ ವೃತ್ತಿಯನ್ನು ನಡೆಸುತ್ತಿದ್ದಾನೆಂದು ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಅವರಿಗೆ ಮಾಹಿತಿ ಬಂದಿದ್ದು, ಸದರಿಯವರ ಆದೇಶದ ಮೇರೆಗೆ ತೀರ್ಥಹಳ್ಳಿ ಕ್ಷೇತ್ರ ಆರೋಗ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ದಾಳಿ ನಡೆಸಿದಾಗ ಸಂಜೀವ ಶೆಟ್ಟಿ ಬಿನ್ ನಾರಾಯಣಶೆಟ್ಟಿ ಅಣ್ಣಾ ನಗರ 3ನೇ ಕ್ರಾಸ್ ಶಿವಮೊಗ್ಗ ಅವರು ಯಾವುದೇ ದಾಖಲೆಗಳಿಲ್ಲದೆ ವೈದ್ಯಕೀಯ ವಿದ್ಯಾರ್ಹತೆ ದಾಖಲೆಯಿಲ್ಲದೆ ಸುಳ್ಳು ಮತ್ತು ನಕಲಿ ದಾಖಲೆಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ನೈಜ ದಾಖಲೆಗಳೆಂದು ನಂಬಿಸಿ ತಾನು ವೈದ್ಯನೆಂದು ನಂಬಿಸಿ ಜನರಿಗೆ ಚಿಕಿತ್ಸೆ ಮತ್ತು ಔಷಧಿಗಳನ್ನು ನೀಡಿ, ಸಮಾಜಕ್ಕೆ ಮತ್ತು ಸರ್ಕಾರಕ್ಕೆ ನಂಬಿಕೆ ದ್ರೋಹ ಮತ್ತು ವಂಚನೆಯನ್ನು ಮಾಡುತ್ತಿದ್ದಾರೆಂದು ಕ್ಲಿನಿಕ್ ನಲ್ಲಿ ಮತ್ತು ಆತನಲ್ಲಿ ಇದ್ದ ದಾಖಲೆಗಳನ್ನು ಮತ್ತು ಔಷಧಿಗಳನ್ನು ಅಮಾನತ್ತು ಪಡಿಸಿಕೊಂಡು ನಕಲಿ ವೈದ್ಯ ಸಂಜೀವ ಶೆಟ್ಟಿಯ ಮೇಲೆ ತೀರ್ಥಹಳ್ಳಿ ಪೊಲೀಸ್ ಠಾಣೆಗೆ ದೂರು ದಾಖಲು ಮಾಡುತ್ತಾರೆ.

ಕ್ಷೇತ್ರ ಆರೋಗ್ಯ ವೈದ್ಯಾಧಿಕಾರಿಗಳು ನೀಡಿದ ದೂರನ್ನು ತೀರ್ಥಹಳ್ಳಿ ಠಾಣೆಯ ಅಂದಿನ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಕೆ.ಎನ್ .ಚಂದ್ರಶೇಖರ್ ರವರು ಪ್ರಕರಣವನ್ನು ದಾಖಲು ಮಾಡಿಕೊಂಡು ತೀರ್ಥಹಳ್ಳಿ ನ್ಯಾಯಾಲಯಕ್ಕೆ ಎಫ್ಐಆರ್ ದಾಖಲು ಮಾಡುತ್ತಾರೆ. ತನಿಖೆಯನ್ನು ನಡೆಸಿ ಸಾಕ್ಷಾಧಾರಗಳನ್ನು ಸಂಗ್ರಹ ಮಾಡಿ ಆರೋಪಿಯ ವಿರುದ್ಧ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ 2007( ಕೆ.ಪಿ. ಎಂ .ಇ .ಕಾಯಿದೆ) ಕಲಂ 19 (1). ಮತ್ತು ಐಪಿಸಿ 417 ,419, 420 ,465 ಗಳ ಅಡಿಯಲ್ಲಿ ಆರೋಪಿತ ಸಂಜೀವ ಶೆಟ್ಟಿ ವಿರುದ್ಧ ನ್ಯಾಯಾಲಯಕ್ಕೆ ದೋಷರೋಣಾ ಸಲ್ಲಿಸುತ್ತಾರೆ.

ತೀರ್ಥಹಳ್ಳಿ ಹಿರಿಯ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಸಿ ಸಿ ನಂಬರ್ 290/ 2016 ರಲ್ಲಿ ಪ್ರಕರಣದ ಸಾಕ್ಷಿದಾರರ ವಿಚಾರಣೆ ಪ್ರಾರಂಭವಾಗಿ ಆರೋಪಿ ವಿರುದ್ಧ ಸಾಕ್ಷಿ ವಿಚಾರಣೆ ನಡೆದು ಮತ್ತು ವಾದ ,ವಿವಾದ ಆಲಿಸಿದ ನಂತರ ತೀರ್ಥಹಳ್ಳಿ ಹಿರಿಯ ಸಿಜೆ ಮತ್ತು ಜೆಎಂಎಫ್ ಸಿ ನ್ಯಾಯಾಲಯದ ಗೌರವಾನ್ವಿತ ನ್ಯಾಯಾಧೀಶರಾದ ಮಾನ್ಯ .ಭರತ್ ,ಎಸ್. ಎಸ್. ಆರೋಪಿತ ಅಶ್ವಿನಿ ಕ್ಲಿನಿಕ್ ನ ಸಂಜೀವ ಶೆಟ್ಟಿ ಬಿನ್ ನಾರಾಯಣಶೆಟ್ಟಿ ಗೆ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ 2007 (ಕೆ ಪಿ ಎಂ ಇ ಕಾಯ್ದೆ) ಕಲಂ 19( 1) ಕೆ ಸಂಬಂಧಿಸಿದಂತೆ 3 ವರ್ಷ ಕಠಿಣ ಜೈಲು ಶಿಕ್ಷೆ 10 ಸಾವಿರ ರೂಪಾಯಿ ದಂಡ ಪಾವತಿಸಲು ವಿಫಲರಾದರೆ 6 ತಿಂಗಳು ಕಠಿಣ ಸಜೆ .ಐಪಿಸಿ 417ಕ್ಕೆ ಸಂಬಂಧಿಸಿದಂತೆ 1 ವರ್ಷ ಕಠಿಣ ಜೈಲು ಶಿಕ್ಷೆ 10 ಸಾವಿರ ರೂಪಾಯಿ ದಂಡ, ದಂಡ ಪಾವತಿಸಲು ವಿಫಲರಾದರೆ ಆರು ತಿಂಗಳು ಕಠಿಣ ಜೈಲು ಶಿಕ್ಷೆ ಮುಂದುವರೆದು,

ಐಪಿಸಿ 419 ಕ್ಕೆ ಸಂಬಂಧಿಸಿದಂತೆ 3 ವರ್ಷ ಕಠಿಣ ಶಿಕ್ಷೆ 10,000 ದಂಡ ಪಾವತಿಸಲು ವಿಫಲರಾದರೆ ಆರು ತಿಂಗಳು ಕಠಿಣ ಜೈಲು ಶಿಕ್ಷೆ. ಐಪಿಸಿ 420ಕ್ಕೆ ಸಂಬಂಧಿಸಿದಂತೆ 3 ವರ್ಷ ಕಠಿಣ ಜೈಲು ಶಿಕ್ಷೆ 10ಸಾವಿರ ರೂಪಾಯಿ ದಂಡ, ಪಾವತಿಸಲು ವಿಫಲರಾದರೆ 6 ತಿಂಗಳು ಕಠಿಣ ಜೈಲು ಶಿಕ್ಷೆ ಹಾಗೂ ಐಪಿಸಿ 465 ಕ್ಕೆ ಸಂಬಂಧಿಸಿದ 2 ವರ್ಷ ಕಠಿಣ ಜೈಲು ಶಿಕ್ಷೆ 10 ಸಾವಿರ ರೂಪಾಯಿಗಳು ದಂಡ. ದಂಡ ಪಾವತಿಸಲು ವಿಫಲರಾದರೆ 6 ತಿಂಗಳು ಕಠಿಣ ಸಜೆ ವಿಧಿಸಿ ಆದೇಶ ನೀಡಿರುತ್ತಾರೆ. ಈ ಪ್ರಕರಣದಲ್ಲಿ ಎಲ್ಲ ಕಲಂ ಗಳಲ್ಲಿ ನೀಡಿರುವ ಶಿಕ್ಷೆಗಳನ್ನು ಪ್ರತ್ಯೇಕ, ಪ್ರತ್ಯೇಕವಾಗಿ ಅನುಭವಿಸಬೇಕೆಂದು ಘನ ನ್ಯಾಯಾಲಯದ ನ್ಯಾಯಾಧೀಶರು ಆದೇಶಿಸಿ ದ್ದಾರೆ. ಸರ್ಕಾರದ ಪರವಾಗಿ ಸಹ ಸಹಾಯಕ ಸರ್ಕಾರಿ ಅಭಿಯೋಜಕರಾದ .ಡಿ. ಬಿನು ರವರು ಪ್ರಕರಣದಲ್ಲಿ ಸಾಕ್ಷಿಗಳ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು .

ಸಂಜೀವ್ ಶೆಟ್ಟಿ ಅಂತ ನಕಲಿ ವೈದ್ಯರುಗಳು ರಾಜ್ಯದಲ್ಲಿ ಇನ್ನೂ ಅನೇಕ ಜನ ಇದ್ದಾರೆ ಅಂಥವರಿಗೂ ಇದೇ ಶಿಕ್ಷೆ ಆಗಬೇಕು….

ವರದಿ: ಲಿಯೋ ಅರೋಜ….

Related Posts

2 comments

GeorgeZew July 21, 2025 - 1:08 am

Discover the best barbershop experience in the CBD: MenSpire blends contemporary flair with traditional craftsmanship. Friendly pros, clean ambiance—your style, redefined.

Reply
mitolyn January 26, 2026 - 1:49 am

**mitolyn**

Mitolyn is a carefully developed, plant-based formula created to help support metabolic efficiency and encourage healthy, lasting weight management.

Reply

Leave a Comment

Latest news
Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga : ದೊಡ್ಡಪೇಟೆ ಪೊಲೀಸರ ಮಹತ್ವದ ಕಾರ್ಯಾಚರಣೆ ನೇಪಾಳಿ ಮಂಜ ಅಂದರ್..! Railway shivamogga: ರೈಲ್ವೆ ಹಳಿಗೆ ಬಿದ್ದ ಮಹಿಳೆ ಯಾರು..?! Health department: ಆರೋಗ್ಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದ ಹರ್ಷ ಗುಪ್ತಾ ವರ್ಗಾವಣೆ..! 26 ವರ್ಷ ಸೇವೆ 30 ಸಲ ಎತ... North East police:ಯಲಹಂಕ ನ್ಯೂಟೌನ್ ಪೊಲೀಸರ ಮಹತ್ವದ ಕಾರ್ಯಾಚರಣೆ..! ವಿದೇಶಿ ಪ್ರಜೆಯಿಂದ ₹2 ಕೋಟಿ ಮೌಲ್ಯದ 2 ಕೆ.ಜ... ತೀರ್ಥಹಳ್ಳಿ : ನಾಬಳ ಶಚಿಂದ್ರ ಹೆಗ್ಡೆ ಪತ್ನಿ ಶ್ರೀಮತಿ ಅಚಲಾ ಶಚಿಂದ್ರ ಹೆಗ್ಡೆ ಇನ್ನಿಲ್ಲ...! ಏನಾಗಿತ್ತು ಇವರಿಗೆ..?!... ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ..! Shivamogga police : ಅಡಿಶನಲ್ ಎಸ್ ಪಿ ರಮೇಶ್ ಕುಮಾರ್ ಜೊತೆ ಕ್ರೈಂ ವಿಭಾಗದ ಇಬ್ಬರಿಗೆ ಮುಖ್ಯಮಂತ್ರಿ ಪದಕ..! ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ..!