Home ರಾಜ್ಯShivamogga breaking: ಅಸ್ವಸ್ಥ ಮಕ್ಕಳ ಸಂಖ್ಯೆ 86 ಕ್ಕೆ ಏರಿಕೆ ಇನ್ನು ಬರುತ್ತಿದ್ದಾರೆ ಮಕ್ಕಳು..!! ಬಿಸಿಎಂ ಹಾಸ್ಟೆಲ್ ಮಕ್ಕಳು ಕೂಡ ಅಸ್ವಸ್ಥ..?! ಮಕ್ಕಳ ಅಸ್ವಸ್ಥತೆಗೆ ಕಾರಣವೇನು..?! ಸದ್ಯದ ಮಕ್ಕಳ ಪರಿಸ್ಥಿತಿ ಹೇಗಿದೆ ‌‌..?!

Shivamogga breaking: ಅಸ್ವಸ್ಥ ಮಕ್ಕಳ ಸಂಖ್ಯೆ 86 ಕ್ಕೆ ಏರಿಕೆ ಇನ್ನು ಬರುತ್ತಿದ್ದಾರೆ ಮಕ್ಕಳು..!! ಬಿಸಿಎಂ ಹಾಸ್ಟೆಲ್ ಮಕ್ಕಳು ಕೂಡ ಅಸ್ವಸ್ಥ..?! ಮಕ್ಕಳ ಅಸ್ವಸ್ಥತೆಗೆ ಕಾರಣವೇನು..?! ಸದ್ಯದ ಮಕ್ಕಳ ಪರಿಸ್ಥಿತಿ ಹೇಗಿದೆ ‌‌..?!

by EDITOR NEWS WARRIORS

ಶಿವಮೊಗ್ಗ : ಮೇಲಿನ ಮತ್ತು ಕೆಳಗಿನ ಹನಸವಾಡಿಯ ಮುರಾರ್ಜಿ ಅಲ್ಪಸಂಖ್ಯಾತರ ವಸತಿ ನಿಲಯದ ವಿದ್ಯಾರ್ಥಿ/ವಿದ್ಯಾರ್ಥಿನಿಯರಲ್ಲಿ ವಾಂತಿ, ಹೊಟ್ಟೆನೋವು ಸೊಂಟನೋವಿನಂತಹ ಬೇನೆಗಳು ಕಾಣಿಸಿಕೊಂಡಿದ್ದು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು.


ಯೋಗಥಾನ್ ನಲ್ಲಿ ಭಾಗಿಯಾಗಿದ್ದ ವಸತಿ ನಿಲಯದ ಮಕ್ಕಳು ಅಶ್ವಸ್ಥರಾಗಿದ್ದಾರೆ..

ಇಲ್ಲಿಯವರೆಗೂ ಸುಮಾರು 86 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಮೆಗ್ಗಾನ್ ಗೆ ಬಂದು ದಾಖಲಾಗಿದ್ದಾರೆ. ತಕ್ಷಣಕ್ಕೆ ಒಆರ್ ಎಸ್ ಮತ್ತು ಇತರೆ ಗುಣಮುಖವಾಗುವ ಚಿಕಿತ್ಸೆ ನೀಡಲಾಗುತ್ತಿದೆ. ಹಾಸ್ಟೆಲ್ ನಲ್ಲಿ 540 ಮಕ್ಕಳಿದ್ದು ಅದರಲ್ಲಿ ಈಗಾಗಲೇ 77ಕ್ಕೂ ಹೆಚ್ಚು ಮಕ್ಕಳು ಮುರಾರ್ಜಿ ಮಕ್ಕಳಾಗಿದ್ದರೆ ಬಿಸಿಎಂ ಹಾಸ್ಟೆಲಿನ 9 ಜನ ಮಕ್ಕಳು ಬಂದು ದಾಖಲಾಗಿದ್ದರೆ. ಕೆಲ ಮಕ್ಕಳು ಮೆಗ್ಗಾನ್ ಗೆ ದೌಡಾಯಿಸುತ್ತಿದ್ದಾರೆ. ಎಲ್ಲ ಮಕ್ಕಳು ಅಸ್ವಸ್ಥರಾಗಿ ಕಂಡು ಬಂದಿದ್ದಾರೆ.

ಎಲ್ಲಾ ವಿದ್ಯಾರ್ಥಿ/ವಿದ್ಯಾರ್ಥಿನಿಯರಲ್ಲಿ ಕೆಲವರಿಗೆ ವಾಂತಿ, ಬೇದಿ ಬೆನ್ನು ನೋವು ಕಾಣಿಸಿಕೊಂಡಿದೆ. ಕುಂಸಿಯಲ್ಲಿಯ ಶಾಲೆಯ ಮಕ್ಕಳೂ ಸಹ ಮೆಗ್ಗಾನ್ ಗೆ ದಾಖಲಾಗಿ ಡಿಸ್ಚಾರ್ಜ್ ಆಗಿದ್ದಾರೆ. ಕೆಲ ಪೋಷಕರು ನಮ್ಮ ಅನುಮತಿ ಇಲ್ಲದೆ ಹಾಸ್ಟೆಲ್ ನವರು ಯೋಗಥಾನ್ ಗೆ ಕರೆದುಕೊಂಡು ಹೋಗಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ಅನುಮತಿ ಪಡೆದು ಯೋಗಥಾನ್ ನಲ್ಲಿ ಭಾಗಿಯಾಗಬೇಕಿತ್ತು ಎಂದು ಆಸ್ಪತ್ರೆಯಲ್ಲಿ ಗಲಾಟೆಯನ್ನೂ ನಡೆಸಿದ್ದಾರೆ.


ಈ ಕುರಿತು ಮಾತನಾಡಿದ ಡಿಹೆಚ್ಒ ಡಾ. ರಾಜೇಶ್ ಸುರಗೀಹಳ್ಳಿ ಸ್ಥಳಕ್ಕೆ ತಮ್ಮ ಸಿಬ್ಬಂದಿಗಳನ್ನು ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳನ್ನು ಕಳುಹಿಸಲಾಗಿದೆ. ಸರ್ವಲೆನ್ಸ್ ವಿಭಾಗದ ಮಲ್ಲಪ್ಪ ಅವರನ್ನು ಕಳುಹಿಸಲಾಗಿದೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಮಕ್ಕಳು ಅವಧಿ ಮುಗಿದಿರುವ ಮಜ್ಜಿಗೆಯನ್ನು ಕುಡಿದಿರುವುದೇ ಈ ಅಸ್ವಸ್ಥತೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.‌.

ಸಮಾಜ ಕಲ್ಯಾಣ ಇಲಾಖೆಯ ನಿರ್ಲಕ್ಷ ಮಕ್ಕಳ ಅಸ್ವಸ್ಥತೆಗೆ ಕಾರಣವಾಯಿತೇ..?!

ಯೋಗಥಾನಗೆ ಕರೆದುಕೊಂಡು ಬಂದು ದಾಖಲೆ ನಿರ್ಮಿಸಲು ಬಂದ ಮಕ್ಕಳು ಮೆಗ್ಗಾನ್ ನಲ್ಲಿ ಅಸ್ವಸ್ಥರಾಗಿ ಕಾಲ ಕಳೆಯುತ್ತಿದ್ದಾರೆ ‌..

ಇವರನ್ನು ಕರೆದುಕೊಂಡು ಬಂದವರು ಆರಾಮಾಗಿದ್ದಾರೆ…

ವೈದ್ಯರು ಸಿಬ್ಬಂದಿಗಳು ಯಾರು ಮಾಡಿದ ತಪ್ಪಿಗೆ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ನೋವು ಅನುಭವಿಸುತ್ತಿದ್ದಾರೆ….

ಈ ಪ್ರಕರಣವನ್ನು ಮಾನ್ಯ ಜಿಲ್ಲಾಧಿಕಾರಿಗಳು ಗಂಭೀರವಾಗಿ ತೆಗೆದುಕೊಂಡು ಸೂಕ್ತ ತನಿಖೆ ನಡೆಸಿ ಯಾರೇ ತಪ್ಪಿತಸ್ಥರಿದ್ದರು ಅವರಿಗೆ ಶಿಕ್ಷೆ ಆಗಬೇಕು ಇಂಥ ಪ್ರಕರಣಗಳು ಮತ್ತೆ ಮರುಕಳಿಸಬಾರದು….

ರಘುರಾಜ್ ಹೆಚ್.ಕೆ…9449553305…

Related Posts

Leave a Comment

Latest news
Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga : ದೊಡ್ಡಪೇಟೆ ಪೊಲೀಸರ ಮಹತ್ವದ ಕಾರ್ಯಾಚರಣೆ ನೇಪಾಳಿ ಮಂಜ ಅಂದರ್..! Railway shivamogga: ರೈಲ್ವೆ ಹಳಿಗೆ ಬಿದ್ದ ಮಹಿಳೆ ಯಾರು..?! Health department: ಆರೋಗ್ಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದ ಹರ್ಷ ಗುಪ್ತಾ ವರ್ಗಾವಣೆ..! 26 ವರ್ಷ ಸೇವೆ 30 ಸಲ ಎತ... North East police:ಯಲಹಂಕ ನ್ಯೂಟೌನ್ ಪೊಲೀಸರ ಮಹತ್ವದ ಕಾರ್ಯಾಚರಣೆ..! ವಿದೇಶಿ ಪ್ರಜೆಯಿಂದ ₹2 ಕೋಟಿ ಮೌಲ್ಯದ 2 ಕೆ.ಜ... ತೀರ್ಥಹಳ್ಳಿ : ನಾಬಳ ಶಚಿಂದ್ರ ಹೆಗ್ಡೆ ಪತ್ನಿ ಶ್ರೀಮತಿ ಅಚಲಾ ಶಚಿಂದ್ರ ಹೆಗ್ಡೆ ಇನ್ನಿಲ್ಲ...! ಏನಾಗಿತ್ತು ಇವರಿಗೆ..?!... ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ..! Shivamogga police : ಅಡಿಶನಲ್ ಎಸ್ ಪಿ ರಮೇಶ್ ಕುಮಾರ್ ಜೊತೆ ಕ್ರೈಂ ವಿಭಾಗದ ಇಬ್ಬರಿಗೆ ಮುಖ್ಯಮಂತ್ರಿ ಪದಕ..! ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ..!