Home ರಾಜ್ಯShivamogga: Don’t want NPS, want OPS : ಹಳೆ ಪಿಂಚಣಿ ಯೋಜನೆ ಮರುಜಾರಿಗೆ ಆಗ್ರಹಿಸಿ ಶಿವಮೊಗ್ಗದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ..!!ಸರ್ಕಾರ ಇವರ ಹೋರಾಟಕ್ಕೆ ಮಣಿಯುತ್ತಾ..?! ಅಥವಾ ಕಾದು ನೋಡುವ ತಂತ್ರ ಅನುಸರಿಸುತ್ತಾ..?!

Shivamogga: Don’t want NPS, want OPS : ಹಳೆ ಪಿಂಚಣಿ ಯೋಜನೆ ಮರುಜಾರಿಗೆ ಆಗ್ರಹಿಸಿ ಶಿವಮೊಗ್ಗದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ..!!ಸರ್ಕಾರ ಇವರ ಹೋರಾಟಕ್ಕೆ ಮಣಿಯುತ್ತಾ..?! ಅಥವಾ ಕಾದು ನೋಡುವ ತಂತ್ರ ಅನುಸರಿಸುತ್ತಾ..?!

by EDITOR NEWS WARRIORS

ಶಿವಮೊಗ್ಗ: ಬೆಂಗಳೂರಿನಲ್ಲಿ ಕಳೆದ ಮೂರು ತಿಂಗಳಿಂದ ನಡೆಯುತ್ತಿರುವ ಎನ್‌ಪಿಎಸ್ ನೌಕರರ ಹೋರಾಟದ ಬಿಸಿ ಶಿವಮೊಗ್ಗ ನಗರಕ್ಕೆ ತಲುಪಿದ್ದು ಹಳೆ ಪಿಂಚಣಿ ಯೋಜನೆಯನ್ನ ಮರುಜಾರಿಗೊಳಿಸುವಂತೆ ಆಗ್ರಹಿಸಿ ಇಂದು ಕರ್ನಾಟಕ ರಾಜ್ಯ ಸರ್ಕಾರಿ ಎನ್ ಪಿ ಎಸ್ ನೌಕರರ ಸಂಘದ ಅಧ್ಯಕ್ಷ ಶಾಂತರಾಮ ಅವರ ನೇತೃತ್ವದಲ್ಲಿ ಪ್ರತಿಭಟನೆ ಮೆರವಣಿಗೆ ನಡೆದಿದೆ.


ನಿಶ್ಚಿತ ಪಿಂಚಣಿ ನಮ್ಮ ಹಕ್ಕು ಎಂಬ ಬಾವುಟ ಹಿಡಿದು ಬೈಕ್ ಜಾಥಾ, ಕಾಲು ನಡುಗೆ ಮೂಲಕ ಹೋರಾಟ ಫ್ರೀಡಂ ಪಾರ್ಕ್ ಗೆ ಬಂದು ತಲುಪಿದ್ದು.

ಸರ್ಕಾರಿ ನೌಕರರು ಇಂದು ನಗರದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಿಂದ ಹಳೇ ಜೈಲಿನ ಫ್ರೀಡಂ ಪಾರ್ಕ್ ಮೈದಾನದ ವರೆಗೆ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಮತ್ತು ಹೊಸ ಪಿಂಚಣಿ ಯೋಜನೆ ರದ್ದು ಮಾಡಬೇಕು ಎಂದು ಪ್ರತಿಭಟನೆಯಲ್ಲಿ ಘೋಷಣೆ ಕೂಗಲಾಯಿತು.

2006 ರಲ್ಲಿ ಆರಂಭವಾದ ಎನ್ ಪಿಎಸ್ ಯೋಜನೆಗೆ ಪ್ರಾರಂಭದಲ್ಲಿ ಅಂತ ವಿರೋಧ ವ್ಯಕ್ತವಾಗಿಲ್ಲವಾದರೂ ನಂತರ ಇದರ ತೀವ್ರತೆ ಅರಿತ ಸರ್ಕಾರಿ ನೌಕರರು ಎನ್‌ಪಿಎಸ್ ಗಿಂತ ಓಪಿಎಸ್ ಒಳಿತು ಎನ್ನುವುದನ್ನು ಅರಿತು 2014 ರಲ್ಲಿ ರಕ್ತಕೊಟ್ಟೆವು ಒಪಿಎಸ್ ಬಿಡೆವು ಎಂಬ ಅಭಿಯಾನವನ್ನ ಸರ್ಕಾರಿ ನೌಕರರು ಮಾಡಿಕೊಂಡು ಬಂದರು. ಈಗ ಅದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದು ಸರ್ಕಾರ ಇದನ್ನು ಜಾರಿಗೊಳಿಸುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎನ್ನುವ ಛಲದೊಂದಿಗೆ ನಿರಂತರವಾಗಿ ಬೆಂಗಳೂರಿನಲ್ಲಿ ಹೋರಾಟ ಮಾಡುತ್ತಿದ್ದ ಎನ್ ಪಿ ಎಸ್ ನೌಕರರು ಇಂದು ಶಿವಮೊಗ್ಗ ನಗರದಲ್ಲಿಯೂ ಕೂಡ ಬೃಹತ್ ಪ್ರತಿಭಟನ ರ್ಯಾಲಿ ಮಾಡುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ…

ಸರ್ಕಾರ ಇವರ ಹೋರಾಟಕ್ಕೆ ಮಣಿಯುತ್ತಾ..?! ಅಥವಾ ಕಾದು ನೋಡುವ ತಂತ್ರ ಅನುಸರಿಸುತ್ತಾ..?!


ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಘವೇಂದ್ರ ಕೆ  ಅಧ್ಯಕ್ಷತೆ ವಹಿಸಿದ್ದರು, ಪ್ರಧಾನ.ಕಾರ್ಯದರ್ಶಿ, ನಾಗನಗೌಡ, ಸಿದ್ದಪ್ಪ ಸಂಗಣ್ಣ, ಉಪಾಧ್ಯಕ್ಷ ಚಂದ್ರಕಾಂತ್ ತಳವಾರ್, ಗುರುಸ್ವಾಮಿ, ಶಿಕ್ಷಕರ ಪರಿಷತ್ತಿನ ಸಹಕಾರ ಸಂಘದ ಮಹಬಲೇಶ್ ಹೆಗಡೆ, ರಾಧ, ರವಿ ಅಸೂಟಿ ಮೊದಲಾದವರು ಭಾಗಿಯಾಗಿದ್ದರು….

ರಘುರಾಜ್ ಹೆಚ್. ಕೆ..9449553305…



Related Posts

2 comments

GeorgeZew July 20, 2025 - 4:27 am

Elevate your look at MenSpire Singapore—the best barber crafting precision styles in a chic, modern space. Expect top-tier service and sharp results every time.

Reply
Cialis online September 17, 2025 - 11:08 pm

Receptfritt Cialis – Letar du efter receptfritt Cialis? Nu kan du få kraftfull potensstöd utan att behöva recept. Snabb och diskret leverans direkt till dörren, perfekt för dig som vill återfå självförtroendet.

Reply

Leave a Comment

Latest news
Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga : ದೊಡ್ಡಪೇಟೆ ಪೊಲೀಸರ ಮಹತ್ವದ ಕಾರ್ಯಾಚರಣೆ ನೇಪಾಳಿ ಮಂಜ ಅಂದರ್..! Railway shivamogga: ರೈಲ್ವೆ ಹಳಿಗೆ ಬಿದ್ದ ಮಹಿಳೆ ಯಾರು..?! Health department: ಆರೋಗ್ಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದ ಹರ್ಷ ಗುಪ್ತಾ ವರ್ಗಾವಣೆ..! 26 ವರ್ಷ ಸೇವೆ 30 ಸಲ ಎತ... North East police:ಯಲಹಂಕ ನ್ಯೂಟೌನ್ ಪೊಲೀಸರ ಮಹತ್ವದ ಕಾರ್ಯಾಚರಣೆ..! ವಿದೇಶಿ ಪ್ರಜೆಯಿಂದ ₹2 ಕೋಟಿ ಮೌಲ್ಯದ 2 ಕೆ.ಜ... ತೀರ್ಥಹಳ್ಳಿ : ನಾಬಳ ಶಚಿಂದ್ರ ಹೆಗ್ಡೆ ಪತ್ನಿ ಶ್ರೀಮತಿ ಅಚಲಾ ಶಚಿಂದ್ರ ಹೆಗ್ಡೆ ಇನ್ನಿಲ್ಲ...! ಏನಾಗಿತ್ತು ಇವರಿಗೆ..?!... ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ..! Shivamogga police : ಅಡಿಶನಲ್ ಎಸ್ ಪಿ ರಮೇಶ್ ಕುಮಾರ್ ಜೊತೆ ಕ್ರೈಂ ವಿಭಾಗದ ಇಬ್ಬರಿಗೆ ಮುಖ್ಯಮಂತ್ರಿ ಪದಕ..! ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ..!