Home ರಾಜ್ಯTHIRTHALLI Political calculation : ಒಗ್ಗಟ್ಟಿನ ಮಂತ್ರ ಜಪಿಸಿದ ಆರ್‌ಎಂ ಎಂ ಮತ್ತು ಕಿಮ್ಮನೆ ರತ್ನಾಕರ್ ದೇವರ ಸನ್ನಿಧಾನದಲ್ಲಿ ಒಂದಾದ ಮುಖಂಡರುಗಳು..!! ಈ ಒಗ್ಗಟ್ಟು ಎಷ್ಟು ದಿನ..?! ಕಿಮ್ಮನೆ ಹೊಂದಾಣಿಕೆಗೆ ಕಾರಣವೇನು ಗೊತ್ತಾ..?!

THIRTHALLI Political calculation : ಒಗ್ಗಟ್ಟಿನ ಮಂತ್ರ ಜಪಿಸಿದ ಆರ್‌ಎಂ ಎಂ ಮತ್ತು ಕಿಮ್ಮನೆ ರತ್ನಾಕರ್ ದೇವರ ಸನ್ನಿಧಾನದಲ್ಲಿ ಒಂದಾದ ಮುಖಂಡರುಗಳು..!! ಈ ಒಗ್ಗಟ್ಟು ಎಷ್ಟು ದಿನ..?! ಕಿಮ್ಮನೆ ಹೊಂದಾಣಿಕೆಗೆ ಕಾರಣವೇನು ಗೊತ್ತಾ..?!

by EDITOR NEWS WARRIORS

ತೀರ್ಥಹಳ್ಳಿ : ಗಾಡ್ರಗದ್ದೆಯ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಆರ್ ಎಂ ಮಂಜುನಾಥ್ ಗೌಡರು ಹಾಗೂ ಕಿಮ್ಮನೆ ರತ್ನಾಕರ್ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ…

ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿಗಳಾಗಿರುವ ಅಪೇಕ್ಸ್ ಬ್ಯಾಂಕಿನ ಮಾಜಿ ಅಧ್ಯಕ್ಷರು ಕೆಪಿಸಿಸಿಯ ಸದಸ್ಯರು ಆಗಿರುವ ಆರ್ ಎಂ ಮಂಜುನಾಥ್ ಗೌಡರು ಹಾಗೂ ಮಾಜಿ ಸಚಿವರು ಕೆಪಿಸಿಸಿಯ ವಕ್ತಾರರು ಆಗಿರುವ ಕಿಮ್ಮನೆ ರತ್ನಾಕರ್ ಅವರು ಇತ್ತೀಚಿನ ದಿನಗಳಲ್ಲಿ ಒಬ್ಬರಿಗೊಬ್ಬರು ಟೀಕಾಪ್ರಹಾರ ನಡೆಸುತ್ತಾ ಬಂದಿದ್ದರು. ಎಷ್ಟು ಸಮಯದಲ್ಲಿ ನಾವು ಒಂದಾಗಿದ್ದೇವೆ ಒಗ್ಗಟ್ಟಿನಿಂದ ಇರುತ್ತೇವೆ ಎಂದು ಒಗ್ಗಟ್ಟಿನ ಮಂತ್ರ ಕೂಡ ಜಪಿಸಿದ್ದರು. ಆದರೆ ಪುನಂ ಮತ್ತೆ ಬೇರಾಗುತ್ತಿದ್ದರು ಟೀಕಾ ಪ್ರಹಾರಗಳನ್ನು ನಡೆಸುತ್ತಿದ್ದರು. ಆದರೆ ಈಗ ತಾಜಾ ಬೆಳವಣಿಗೆ ಒಂದರಲ್ಲಿ ದೇವರ ಸನ್ನಿಧಾನದಲ್ಲಿ ಇಬ್ಬರು ಮುಖಂಡರುಗಳು ಒಂದಾಗಿ ಹಳೆ ವೈಶ್ಯಮ್ಯಗಳನ್ನು ಮರೆತು ಪಕ್ಷ ಗೋಸ್ಕರ ದುಡಿಯೋಣ ಯಾರಿಗೆ ಟಿಕೆಟ್ ಕೊಟ್ಟರು ಗೆಲುವು ಒಂದೇ ನಮ್ಮ ಗುರಿ ಎಂದು ಮತ್ತೆ ಚುನಾವಣೆ ಗೋಸ್ಕರ ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದಾರೆ.

ಈ ಬೆಳವಣಿಗೆ ತೀರ್ಥಹಳ್ಳಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಧೈರ್ಯ ತುಂಬಿದೆ ಎಂದರೆ ತಪ್ಪಾಗಲಾರದು ..

ಕಿಮ್ಮನೆ ಆರ್‌ಎಂ, ಎಂ ಜೊತೆಗೆ ಹೊಂದಿಕೊಳ್ಳಲು ಕಾರಣವೇನು..?!

ಇತ್ತೀಚಿನ ದಿನಗಳಲ್ಲಿ ಕಿಮ್ಮನೆ ರತ್ನಾಕರ್ ಜೊತೆಗೆ ಇರುತ್ತಿದ್ದ ಸಾಕಷ್ಟು ಜನ ಪ್ರಭಾವಿ ಮುಖಂಡರುಗಳು ಆರ್ ಎಂ ಮಂಜುನಾಥ್ ಗೌಡರ ಕಡೆ ವಾಲಿದ್ದಾರೆ ಹಾಗೂ ಇನ್ನೂ ಕೆಲವರು ಬಿಜೆಪಿ ಕಡೆ ಮುಖ ಮಾಡಿದ್ದಾರೆ. ಬಾಳೆಹಳ್ಳಿ ಸುಧಾಕರ್ ಅಂತ ಪ್ರಬಲ ಮುಖಂಡರು ಬಿಜೆಪಿ ಪಕ್ಷವನ್ನು ಸೇರಿದ್ದಾರೆ ಇನ್ನು ಕೆಲವರು ಸೇರುವ ಹಂತದಲ್ಲಿದ್ದಾರೆ ಇವೆಲ್ಲವನ್ನು ಅರಿತಿರುವ ಕಿಮ್ಮನೆ ರತ್ನಾಕರ್ ಎಲ್ಲೋ ಒಂದು ಕಡೆ ಇಲ್ಲಿ ಹಿನ್ನಡೆ ಆಗುತ್ತಿದೆ ಈ ಹಿನ್ನಡೆಯನ್ನು ತಪ್ಪಿಸಲು ಹೊಂದಾಣಿಕೆ ಅನಿವಾರ್ಯ ಎನ್ನುವುದನ್ನು ಅರಿತು ಈ ಹೊಂದಾಣಿಕೆಗೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ ‌.. ಹಾಗೂ ಈ ಸಲ ತೀರ್ಥಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಅನ್ನು ಶತಾಯಗತಾಯ ತೆಗೆದುಕೊಳ್ಳಬೇಕೆಂದು ಆರ್‌ಎಂ ಮಂಜುನಾಥ್ ಗೌಡರು ನಿರ್ಧರಿಸಿದ್ದು ಅದಕ್ಕೋಸ್ಕರ ಆರೋಗ್ಯ ಸರಿಯಿಲ್ಲದಿದ್ದರೂ ಪಕ್ಷ ನಿಷ್ಠೆಯಿಂದ ಕಾಶ್ಮೀರದವರೆಗೂ ಪಯಣ ಬೆಳೆಸಿದ್ದಾರೆ.. ಇದಕ್ಕೂ ಹೆಚ್ಚಾಗಿ ಅರ್ ಎಂ ಮಂಜುನಾಥ್ ಗೌಡರು ಮತ್ತು ಡಿಕೆ ಶಿವಕುಮಾರ್ ನಡುವೆ ಉತ್ತಮ ಬಾಂಧವ್ಯವಿದೆ… ಇದು ಒಂದು ಪ್ರಮುಖ ಕಾರಣ ಎನ್ನಲಾಗುತ್ತಿದೆ…

ಒಟ್ಟಿನಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದಂತೆ ಇನ್ನೂ ಕೆಲವೇ ದಿನಗಳಲ್ಲಿ ಯಾರಿಗೆ ಟಿಕೆಟ್ ಎನ್ನುವುದು ಘೋಷಣೆ ಆಗುವ ಹಂತದಲ್ಲಿರುವಾಗಲೇ ಈ ಜೋಡಿಗಳು ಒಂದಾಗಿರುವುದು ಈ ಇಬ್ಬರ ಪರಸ್ಪರ ವಿರೋಧದಿಂದ ಗೆಲುವಿಗೆ ಮುನ್ನುಡಿ ಬರೆದಿದ್ದ ಹಾಲಿ ಗೃಹ ಸಚಿವರಾಗಿರುವ ಆರಗ ಜ್ಞಾನೇಂದ್ರ ಅವರಿಗೆ ಸ್ವಲ್ಪ ನಿದ್ದೆ ಕೆಡಿಸಿದೆ ಎಂದರೆ ತಪ್ಪಾಗಲಾರದು…

ರಘುರಾಜ್ ಹೆಚ್.ಕೆ..9449553305…

Related Posts

Leave a Comment

Latest news
Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga : ದೊಡ್ಡಪೇಟೆ ಪೊಲೀಸರ ಮಹತ್ವದ ಕಾರ್ಯಾಚರಣೆ ನೇಪಾಳಿ ಮಂಜ ಅಂದರ್..! Railway shivamogga: ರೈಲ್ವೆ ಹಳಿಗೆ ಬಿದ್ದ ಮಹಿಳೆ ಯಾರು..?! Health department: ಆರೋಗ್ಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದ ಹರ್ಷ ಗುಪ್ತಾ ವರ್ಗಾವಣೆ..! 26 ವರ್ಷ ಸೇವೆ 30 ಸಲ ಎತ... North East police:ಯಲಹಂಕ ನ್ಯೂಟೌನ್ ಪೊಲೀಸರ ಮಹತ್ವದ ಕಾರ್ಯಾಚರಣೆ..! ವಿದೇಶಿ ಪ್ರಜೆಯಿಂದ ₹2 ಕೋಟಿ ಮೌಲ್ಯದ 2 ಕೆ.ಜ... ತೀರ್ಥಹಳ್ಳಿ : ನಾಬಳ ಶಚಿಂದ್ರ ಹೆಗ್ಡೆ ಪತ್ನಿ ಶ್ರೀಮತಿ ಅಚಲಾ ಶಚಿಂದ್ರ ಹೆಗ್ಡೆ ಇನ್ನಿಲ್ಲ...! ಏನಾಗಿತ್ತು ಇವರಿಗೆ..?!... ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ..! Shivamogga police : ಅಡಿಶನಲ್ ಎಸ್ ಪಿ ರಮೇಶ್ ಕುಮಾರ್ ಜೊತೆ ಕ್ರೈಂ ವಿಭಾಗದ ಇಬ್ಬರಿಗೆ ಮುಖ್ಯಮಂತ್ರಿ ಪದಕ..! ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ..!