Home ಶಿವಮೊಗ್ಗಹಣದ ಹಿಂದೆ ಹೋದರೆ ಹಣವನ್ನಷ್ಟೇ ಗಳಿಸಬಹುದು ಜನರನ್ನಲ್ಲ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಟಿ ವಿ ಸತೀಶ..!

ಹಣದ ಹಿಂದೆ ಹೋದರೆ ಹಣವನ್ನಷ್ಟೇ ಗಳಿಸಬಹುದು ಜನರನ್ನಲ್ಲ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಟಿ ವಿ ಸತೀಶ..!

by EDITOR NEWS WARRIORS


ಉಪಾದ್ಯಾಯ ಡಾಕ್ಟ್ರು ಕೇವಲ ಹಣದ ಹಿಂದೆ ಹೋಗಿದ್ದರೆ ಪ್ರಾಯಶಃ ನಾವ್ಯಾರೂ ಇಲ್ಲಿ ಅವರನ್ನು ಹುಡುಕಿಕೊಂಡು‌ ಬಂದು ಶುಭ ಹಾರೈಸುವ ಸಂದರ್ಭವೇ ಬರುತ್ತಿರಲಿಲ್ಲ. ಅವರು ಹಣದ ಹಿಂದೆ ಹೋಗದೆ ಮಾನವೀಯತೆ ಜನಪರ ಕಾಳಜಿಗಳಿಗೆ ಆಧ್ಯತೆ ನೀಡಿದ್ದರಿಂದ ನಿವೃತ್ತಿ ಹೊಂದಿ ಎರಡು ದಶಕಗಳಿಗೂ ಮಿಗಿಲಾಗಿದ್ದರೂ ಸಹೋದ್ಯೋಗಿಗಳು, ಜನರ ಮನದಲ್ಲಿ ಇಂದಿಗೂ ಗೌರವಾನ್ವಿತ ಸ್ಥಾನ ಪಡೆದಿದ್ದಾರೆ. ಹಣದ ಹಿಂದೆ ಹೋದವರು ಹಣವನ್ನಷ್ಟೇ ಗಳಿಸಬಹುದು ಜನರನ್ನಲ್ಲ ಎಂದು ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಟಿ ವಿ ಸತೀಶ ನುಡಿದರು. ಅವರು ತಾಲ್ಲೂಕಿನ ಪ್ರಥಮ ತಾಲ್ಲೂಕು ವೈದ್ಯಾಧಿಕಾರಿಗಳಾಗಿ, ಜೆ ಸಿ ಆಸ್ಪತ್ರೆಯ ಕೀಲು ಮತ್ತು ಮೂಳೆ ತಜ್ಞ ವೈದ್ಯಾಧಿಕಾರಿಗಳಾಗಿ ಸೇವೆ ಸಲ್ಲಿಸಿ ಅಪಾರ ಜನ ಮನ್ನಣೆ ಗಳಿಸಿ, ವಯೋ ನಿವೃತ್ತಿಯ ನಂತರವೂ ಅಗತ್ಯ ಉಳ್ಳವರಿಗೆ ವೈದ್ಯಕೀಯ ಸೇವೆ ಒದಗಿಸುತ್ತಿರುವ ತಾಲ್ಲೂಕಿನ ಹಿರಿಯ ಜನಪ್ರಿಯ ವೈದ್ಯರಾದ ಡಾ.ಪಿ ಎಸ್ ಉಪಾಧ್ಯಾಯರ 79 ನೇ ಜನ್ಮ ದಿನದಂದು ಡಾ.ಉಪಾಧ್ಯಾಯ ದಂಪತಿಗಳನ್ನು ಅವರ ಸ್ವಗೃಹದಲ್ಲಿ ಗೌರವಿಸಿ ಮಾತನಾಡಿದರು.

ತಮ್ಮ ವೃತ್ತಿ ಬದುಕಿನ ವಿವಿಧ ನೆನಪುಗಳನ್ನು ಮೆಲುಕು ಹಾಕಿದ ಡಾ.ಉಪಾಧ್ಯಾಯರು ಎಲ್ಲರ ಆತ್ಮೀಯತೆ, ಪ್ರೀತಿ ವಿಶ್ವಾಸ,ಶುಭ ಹಾರೈಕೆಗಳು ಬದುಕಿನ ಖುಷಿ ಹೆಚ್ಚಿಸಿವೆ. ಬದುಕಿನ ಗಳಿಕೆ ಎಂದರೆ ಇದೇ ಎಂಬ ಭಾವ ತುಂಬಿದೆ. ನನ್ನ ಬಗ್ಗೆ ವಿಶೇಷ ಅಭಿಮಾನ ಪ್ರೀತಿ ತೋರಿದ ತಮ್ಮೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುವುದಾಗಿ ತಿಳಿಸಿದರು.

ತಾಲ್ಲೂಕು ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ರಾಮು, ತಾಲ್ಲೂಕು ಆರೋಗ್ಯ ಇಲಾಖಾ ನೌಕರರ ಸಂಘದ ಖಜಾಂಚಿ ರಾಘವೇಂದ್ರ, ಪದಾಧಿಕಾರಿಗಳಾದ ಪ್ರಮೀಳ,ತನುಜಾ,‌ ಶೈಲಜಾ ಶೆಟ್ಟಿ, ರಾಜಪ್ಪ, ರಾಜೇಶ್,ಗಿರಿ ಡಿ ಟಿ, ಜೆ ಸಿ ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ರಾಮಕೃಷ್ಣ, ನಿವೃತ್ತ ನೌಕರರಾದ ಡಿ ಸಿ ಶಿವಶಂಕರ್, ಕಾಡಪ್ಪ ಗೌಡ,ವಿದ್ಯಾರ್ಥಿ ಅಂಶುಮತ್ ಶೆಟ್ಟಿ ಮತ್ತಿತರಿದ್ದರು.

Related Posts

Latest news
Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga : ದೊಡ್ಡಪೇಟೆ ಪೊಲೀಸರ ಮಹತ್ವದ ಕಾರ್ಯಾಚರಣೆ ನೇಪಾಳಿ ಮಂಜ ಅಂದರ್..! Railway shivamogga: ರೈಲ್ವೆ ಹಳಿಗೆ ಬಿದ್ದ ಮಹಿಳೆ ಯಾರು..?! Health department: ಆರೋಗ್ಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದ ಹರ್ಷ ಗುಪ್ತಾ ವರ್ಗಾವಣೆ..! 26 ವರ್ಷ ಸೇವೆ 30 ಸಲ ಎತ... North East police:ಯಲಹಂಕ ನ್ಯೂಟೌನ್ ಪೊಲೀಸರ ಮಹತ್ವದ ಕಾರ್ಯಾಚರಣೆ..! ವಿದೇಶಿ ಪ್ರಜೆಯಿಂದ ₹2 ಕೋಟಿ ಮೌಲ್ಯದ 2 ಕೆ.ಜ... ತೀರ್ಥಹಳ್ಳಿ : ನಾಬಳ ಶಚಿಂದ್ರ ಹೆಗ್ಡೆ ಪತ್ನಿ ಶ್ರೀಮತಿ ಅಚಲಾ ಶಚಿಂದ್ರ ಹೆಗ್ಡೆ ಇನ್ನಿಲ್ಲ...! ಏನಾಗಿತ್ತು ಇವರಿಗೆ..?!... ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ..! Shivamogga police : ಅಡಿಶನಲ್ ಎಸ್ ಪಿ ರಮೇಶ್ ಕುಮಾರ್ ಜೊತೆ ಕ್ರೈಂ ವಿಭಾಗದ ಇಬ್ಬರಿಗೆ ಮುಖ್ಯಮಂತ್ರಿ ಪದಕ..! ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ..!