Home ಶಿವಮೊಗ್ಗರಸ್ತೆ ಜಾಗವನ್ನೇ ಬಂದ್ ಮಾಡಿ ಕಟ್ಟಡ ನಿರ್ಮಾಣ ಮಹಾನಗರ ಪಾಲಿಕೆ ಅಧಿಕಾರಿಗಳೇ ತೆರವುಗೊಳಿಸಿ…!

ರಸ್ತೆ ಜಾಗವನ್ನೇ ಬಂದ್ ಮಾಡಿ ಕಟ್ಟಡ ನಿರ್ಮಾಣ ಮಹಾನಗರ ಪಾಲಿಕೆ ಅಧಿಕಾರಿಗಳೇ ತೆರವುಗೊಳಿಸಿ…!

by EDITOR NEWS WARRIORS

ಶಿವಮೊಗ್ಗ: ನಗರದ ಆಲುಕೊಳ ಸರ್ವೆ ನಂಬರ್ 27, ದುರ್ಗಾ ಲೇಔಟ್, ಗಾಡಿಕೊಪ್ಪ ,‌ಬಿ.ಎಚ್. ರಸ್ತೆ ಗಾಡಿಕೊಪ್ಪ ಸರ್ಕಲ್ ನಿಂದ ಎಡಭಾಗ ತಾಂಡ ರಸ್ತೆ ಬಲಭಾಗ ಎರಡನೇ ಕ್ರಾಸ್, ದುರ್ಗಮ್ಮ ದೇವಸ್ಥಾನದಿಂದ ಮುಂದೆ ಪೋಲೀಸ್ ಲೇಔಟ್ ಹಾಗು ದುರ್ಗಾ ಲೇಔಟ್ ನ ಕನೆಕ್ಟಿವಿಟಿ ರಸ್ತೆಗಾಗಿ 30 ಅಡಿ ಜಾಗ ಬಿಡಲಾಗಿದೆ.

ಈ ಬಡಾವಣೆಯಲ್ಲಿ 70×30 ಅಳತೆಯ ನಿವೇಶನ ಮಾಡಿ ೧೯೮೫-೮೬ ರಲ್ಲಿ ಹಂಚಿಕೆ ಮಾಡಲಾಗಿದೆ.ಇದಕ್ಕೂ ಮೊದಲು‌ ೧೯೬೩ ರಲ್ಲಿಯೇ ಜಿಲ್ಲಾಧಿಕಾರಿಯವರು ಒಂದು‌ ಎಕರೆಯನ್ನು ಕೃಷಿಯೇತರ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಿರುತ್ತಾರೆ‌.

No.R.Did.A5ALN.39/62-63.ಸದರಿ ಬಡಾವಣೆಗೆ ಅನುಕೂಲವಾಗುವಂತೆ ೩೦ ಅಡಿ ಸಂಪರ್ಕ ರಸ್ತೆ ಬಿಡಲಾಗಿದ್ದರೂ ಕೂಡ ರೆವಿನ್ಯೂ ಸ್ವರೂಪದ ಬಡಾವಣೆ ಎಂಬ ಕಾರಣಕ್ಕೆ ರಸ್ತೆ ಜಾಗವನ್ನೇ ಬಂದು ಮಾಡಿ‌ ಕಟ್ಟಡ ನಿರ್ಮಿಸಲಾಗುತ್ತಿದೆ.

ಇದೀಗ ಸಂಖ್ಯೆ 63 ರಲ್ಲಿ ಇಡೀ ರಸ್ತೆಜಾಗಕ್ಕೆ ಕಟ್ಟಡ ನಿರ್ಮಿಸಲಾಗುತ್ತಿದೆ. ಸದರಿ‌ ನಿವೇಶನ ಉತ್ತರಕ್ಕೆ 43 ಅಡಿ ಅಗಲ, ದಕ್ಷಿಣಕ್ಕೆ 13 ಅಡಿ ಅಗಲವಿದೆ. ಇದು ಕೋಚ ಇರುವ ನಿವೇಶನವಾಗಿದೆ.‌ ಸದರಿ ನಿವೇಶನ‌ ಅಲಿನೇಶನ್ ಆಗಿಲ್ಲ. ಮಹಾನಗರ ಪಾಲಿಕೆಯಿಂದ ಕಟ್ಟಡ ಪರವಾನಿಗೆ ಪಡೆದಿಲ್ಲ.‌ಸೂಡ ಅಪ್ರೂಲ್ ಇಲ್ಲ. ರೆವಿನ್ಯೂ ಸ್ವರೂಪ ಈ ನಿವೇಶನದಲ್ಲಿ ಕಟ್ಟಡ ನಿರ್ಮಾಣದ ಯಾವುದೇ ನಿಯಮಗಳನ್ನು ಪಾಲಿಸದೆ ಕಟ್ಟಲಾಗುತ್ತಿದೆ.

೩೦ ಅಡಿ ಸಂಪರ್ಕ‌ ರಸ್ತೆಯಲ್ಲಿ‌ ಸರಿಸುಮಾರು೧೫ ಅಡಿಗೂ ಹೆಚ್ಚು ಜಾಗ ಒತ್ತುವರಿ ಮಾಡಿ ಪಿಲ್ಲರ್ ನಿರ್ಮಿಸಲಾಗಿದೆ. ಇದರಿಂದಾಗಿ ಪೊಲೀಸ್ ಲೇ ಔಟ್ ನ ಕೊಳಚೆ ನೀರು ಸರಿಯಾಗಿ ಹೋಗಲು ಸಾಧ್ಯವಿಲ್ಲ. ಸಂಪರ್ಕ ರಸ್ತೆಗೂ ಜಾಗ ಕಿರಿದಾಗಿದೆ. ನಕಾಶೆಯಲ್ಲಿ ತೋರಿಸಿರುವ 43×13 ಅಡಿ ಅಳದಲ್ಲಿ ಕಟ್ಟಡ ನಿರ್ಮಾಣ ಮಾಡಿದರೆ ಯಾವುದೇ ಸಮಸ್ಯೆ ಇಲ್ಲ. ಆದರೆ ನಿಯಮ ಉಲ್ಲಂಘನೆ ಮಾಡಿರುವುದರಿಂದ ಎರಡೂ ಬಡಾವಣೆ ನಿವಾಸಿಗಳಿಗೆ ಸಮಸ್ಯೆಯಾಗಲಿದೆ.

ದುರ್ಗಾ ಲೇಔಟ್ ಎರಡನೇ ಕ್ರಾಸ್ ನಲ್ಲಿ ಈಗಾಗಲೇ ದೇವಸ್ಥಾನ ನಿರ್ಮಾಣ ಮಾಡಿರುವುದರಿಂದ ಎರಡೂ ಬದಿಯಲ್ಲಿ‌ ರಸ್ತೆ ಬಂದ್ ಆಗಿದೆ. ಇದು ಕೂಡ ಬಂದ್ ಆದರೆ ಸಂಪರ್ಕ ರಸ್ತೆಯೇ ಇಲ್ಲದಂತಾಗಲಿದೆ.

ಪಾಲಿಕೆ ಅಧಿಕಾರಿಗಳೇ ಈಗಲಾದರೂ ಎಚ್ಚೆತ್ತುಕೊಳ್ಳಿ ಅಕ್ರಮ ಕಟ್ಟಡವನ್ನು ತೆರವುಗೊಳಿಸಿ ರಸ್ತೆ ಸಂಚಾರ ಸುಗಮವಾಗುವಂತೆ ನೋಡಿಕೊಂಡು ಸ್ಥಳೀಯರ ಸಮಸ್ಯೆಗೆ ಸ್ಪಂದಿಸಿ…

Related Posts

Latest news
Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga : ದೊಡ್ಡಪೇಟೆ ಪೊಲೀಸರ ಮಹತ್ವದ ಕಾರ್ಯಾಚರಣೆ ನೇಪಾಳಿ ಮಂಜ ಅಂದರ್..! Railway shivamogga: ರೈಲ್ವೆ ಹಳಿಗೆ ಬಿದ್ದ ಮಹಿಳೆ ಯಾರು..?! Health department: ಆರೋಗ್ಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದ ಹರ್ಷ ಗುಪ್ತಾ ವರ್ಗಾವಣೆ..! 26 ವರ್ಷ ಸೇವೆ 30 ಸಲ ಎತ... North East police:ಯಲಹಂಕ ನ್ಯೂಟೌನ್ ಪೊಲೀಸರ ಮಹತ್ವದ ಕಾರ್ಯಾಚರಣೆ..! ವಿದೇಶಿ ಪ್ರಜೆಯಿಂದ ₹2 ಕೋಟಿ ಮೌಲ್ಯದ 2 ಕೆ.ಜ... ತೀರ್ಥಹಳ್ಳಿ : ನಾಬಳ ಶಚಿಂದ್ರ ಹೆಗ್ಡೆ ಪತ್ನಿ ಶ್ರೀಮತಿ ಅಚಲಾ ಶಚಿಂದ್ರ ಹೆಗ್ಡೆ ಇನ್ನಿಲ್ಲ...! ಏನಾಗಿತ್ತು ಇವರಿಗೆ..?!... ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ..! Shivamogga police : ಅಡಿಶನಲ್ ಎಸ್ ಪಿ ರಮೇಶ್ ಕುಮಾರ್ ಜೊತೆ ಕ್ರೈಂ ವಿಭಾಗದ ಇಬ್ಬರಿಗೆ ಮುಖ್ಯಮಂತ್ರಿ ಪದಕ..! ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ..!