Home ರಾಜ್ಯಶಿವಮೊಗ್ಗ ರೈಲ್ವೆ ಸ್ಟೇಷನ್ ಒಳಗೆ ಆಟೋ ನೋ ಎಂಟ್ರಿ ..! ಆಟೋ ಮಾಫಿಯಾಕ್ಕೆ ಬ್ರೇಕ್ ಹಾಕಲು ಮುಂದಾದ ಟ್ರಾಫಿಕ್ ಇನ್ಸ್ಪೆಕ್ಟರ್ ದೇವರಾಜ್..! ಬಹುದಿನಗಳ ಬೇಡಿಕೆ  ಪ್ರಿಪೇಯ್ಡ್  ಆಟೋಗೆ ಸದ್ಯದಲ್ಲಿಯೇ ಚಾಲನೆ ಸಾಧ್ಯತೆ..!

ಶಿವಮೊಗ್ಗ ರೈಲ್ವೆ ಸ್ಟೇಷನ್ ಒಳಗೆ ಆಟೋ ನೋ ಎಂಟ್ರಿ ..! ಆಟೋ ಮಾಫಿಯಾಕ್ಕೆ ಬ್ರೇಕ್ ಹಾಕಲು ಮುಂದಾದ ಟ್ರಾಫಿಕ್ ಇನ್ಸ್ಪೆಕ್ಟರ್ ದೇವರಾಜ್..! ಬಹುದಿನಗಳ ಬೇಡಿಕೆ  ಪ್ರಿಪೇಯ್ಡ್  ಆಟೋಗೆ ಸದ್ಯದಲ್ಲಿಯೇ ಚಾಲನೆ ಸಾಧ್ಯತೆ..!

by EDITOR NEWS WARRIORS

 

ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗಕ್ಕೆ ಹೊರ ರಾಜ್ಯಗಳಿಂದ ಜಿಲ್ಲೆಗಳಿಂದ ದಿನನಿತ್ಯ ಸಾವಿರಾರು ಜನರು ಬರುತ್ತಾರೆ ಪ್ರವಾಸಿಗರ ನೆಚ್ಚಿನ ತಾಣಕ್ಕೆ ಪ್ರವಾಸಿಗರು ಬಂದರೆ, ಕೆಲವರು ತಮ್ಮ ಕಾರ್ಯನಿಮಿತ್ತ ಬರುತ್ತಾರೆ, ಇನ್ನು ಕೆಲವರು ಉದ್ಯೋಗಗಳನ್ನು ಹುಡುಕಿಕೊಂಡು ಬರುತ್ತಾರೆ, ಕೆಲವರು ತಮ್ಮ ಬಂದು ಬಾಂಧವರನ್ನು ಮಾತನಾಡಿಸಲು ಬರುತ್ತಾರೆ, ಹೀಗೆ ದಿನನಿತ್ಯ ಬರುವ ಜನರಿಗೆ ಶಿವಮೊಗ್ಗ ರೈಲು ಇಳಿದ ನಂತರ ಕಾಡುವ ಸಮಸ್ಯೆ ಏನೆಂದರೆ ಕೆಲವು ಆಟೋದವರು ಪ್ರಯಾಣಿಕರಿಗೆ ಕೊಡುವ ತೊಂದರೆ ಆಟೋದಿಂದ ಇಳಿದ ತಕ್ಷಣ ಓಡಿಬಂದು ಪ್ರಯಾಣಿಕರ ಬ್ಯಾಗನ್ನೆ ಕಸಿದುಕೊಳ್ಳುವ ಕೆಲವು ಆಟೋದವರು ತಾವು ಹೇಳಿದ ರೇಟಿಗೆ ಪ್ರಯಾಣಿಕರು ಬರಬೇಕು ಪೊಲೀಸರು ಮೀಟರ್ ಕಡ್ಡಾಯ ಮಾಡಿದ್ದರೂ ಕೂಡ ಇವರು ಹಾಕುವುದಿಲ್ಲ ಸಾರ್ವಜನಿಕರು ತಮ್ಮ ವಾಹನಗಳಲ್ಲಿ ತಮ್ಮವರನ್ನು ಕರೆದುಕೊಂಡು ಹೋಗಲು ಬಂದರೂ ಕೂಡ ರೈಲ್ವೆ ನಿಲ್ದಾಣದ ಮುಂಭಾಗವನ್ನು ಇವರು ಅತಿಕ್ರಮಿಸಿ ಕೊಂಡಿರುವುದರಿಂದ ಸಾರ್ವಜನಿಕರಿಗೂ ಇದರಿಂದ ತೊಂದರೆ ಇದು ಈಗಿನ ಸಮಸ್ಯೆಯಲ್ಲ ಬಹಳ ವರ್ಷಗಳ ಸಮಸ್ಯೆ ಇದಕ್ಕೊಂದು ಶಾಶ್ವತ ಅಂತ್ಯ ಹಾಕುವ ನಿಟ್ಟಿನಲ್ಲಿ ಶಿವಮೊಗ್ಗ ಟ್ರಾಫಿಕ್ ಪೊಲೀಸ್ ನವರು ದಿಟ್ಟ ನಿರ್ಧಾರ ತೆಗೆದುಕೊಂಡಿದ್ದು ಆಟೋದವರ ಜೊತೆ ಹಾಗೂ ರೈಲ್ವೆ ಸಿಬ್ಬಂದಿಗಳ ಜೊತೆ ಟ್ರಾಫಿಕ್ ಇನ್ಸ್ಪೆಕ್ಟರ್ ದೇವರಾಜ್ ಮಾತುಕತೆ ನಡೆಸಿದ್ದಾರೆ.

ಆಟೋದವರಿಗೆ ಖಡಕ್ ವಾರ್ನಿಂಗ್ ನೀಡಿದ ಇನ್ಸ್ಪೆಕ್ಟರ್ ದೇವರಾಜ್..!

100 ಮೀಟರ್ ಒಳಗೆ ಆಟೋ ಬರುವುದನ್ನು ನಿಷೇಧಿಸಿದ್ದು ನೂರರಿಂದ 200 ಮೀಟರ್ ದೂರದಲ್ಲಿ ಆಟೋವನ್ನು ಹಾಕಬೇಕು ಅಲ್ಲಿಯೇ ಪ್ರಯಾಣಿಕರ  ಲಗೇಜ್ ಹಾಕಿಕೊಂಡು ಆಟೋಗಳಲ್ಲಿ ಕಡ್ಡಾಯವಾಗಿ ಮೀಟರ್ ಹಾಕಿಕೊಂಡು ಹೋಗಬೇಕು ಹಾಗೆ ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಮೂರು ಕಡೆ ಡಿವೈಡ್ ಮಾಡಿದ್ದು ಒಂದು ಕಡೆ ಸಾರ್ವಜನಿಕರಿಗೆ ವ್ಯವಸ್ಥೆ ಮಾಡಿದ್ದು ಆಟೋದವರು ಇದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದಿದ್ದಾರೆ.

ಬಹುದಿನಗಳ ಬೇಡಿಕೆ  ಪ್ರಿಪೇಯ್ಡ್  ಆಟೋಗೆ ಸದ್ಯದಲ್ಲಿಯೇ ಚಾಲನೆ ಸಾಧ್ಯತೆ..!

ಹಾಗೆ ಮುಂದಿನ ದಿನಗಳಲ್ಲಿ ಬಹು ದಿನಗಳ ಬೇಡಿಕೆ ಪ್ರಿಪೇಯ್ಡ್ ಆಟೋ ವ್ಯವಸ್ಥೆ ಮಾಡಿದರೆ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗುತ್ತದೆ.

ಈ ನಿಟ್ಟಿನಲ್ಲಿ ಇನ್ಸ್ಪೆಕ್ಟರ್ ದೇವರಾಜ್ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಹಾಗೂ ಆರ್ ಟಿ ಓ, ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿ ಸಾರ್ವಜನಿಕರ ಬಹುದಿನಗಳ ಬೇಡಿಕೆಗೆ ಶಾಶ್ವತ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ತಮ್ಮ ಪ್ರಯತ್ನ ಮುಂದುವರಿಸಿದ್ದಾರೆ.

ರಘುರಾಜ್ ಹೆಚ್‌ ಕೆ..9449553305…

Related Posts

Latest news
Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga : ದೊಡ್ಡಪೇಟೆ ಪೊಲೀಸರ ಮಹತ್ವದ ಕಾರ್ಯಾಚರಣೆ ನೇಪಾಳಿ ಮಂಜ ಅಂದರ್..! Railway shivamogga: ರೈಲ್ವೆ ಹಳಿಗೆ ಬಿದ್ದ ಮಹಿಳೆ ಯಾರು..?! Health department: ಆರೋಗ್ಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದ ಹರ್ಷ ಗುಪ್ತಾ ವರ್ಗಾವಣೆ..! 26 ವರ್ಷ ಸೇವೆ 30 ಸಲ ಎತ... North East police:ಯಲಹಂಕ ನ್ಯೂಟೌನ್ ಪೊಲೀಸರ ಮಹತ್ವದ ಕಾರ್ಯಾಚರಣೆ..! ವಿದೇಶಿ ಪ್ರಜೆಯಿಂದ ₹2 ಕೋಟಿ ಮೌಲ್ಯದ 2 ಕೆ.ಜ... ತೀರ್ಥಹಳ್ಳಿ : ನಾಬಳ ಶಚಿಂದ್ರ ಹೆಗ್ಡೆ ಪತ್ನಿ ಶ್ರೀಮತಿ ಅಚಲಾ ಶಚಿಂದ್ರ ಹೆಗ್ಡೆ ಇನ್ನಿಲ್ಲ...! ಏನಾಗಿತ್ತು ಇವರಿಗೆ..?!... ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ..! Shivamogga police : ಅಡಿಶನಲ್ ಎಸ್ ಪಿ ರಮೇಶ್ ಕುಮಾರ್ ಜೊತೆ ಕ್ರೈಂ ವಿಭಾಗದ ಇಬ್ಬರಿಗೆ ಮುಖ್ಯಮಂತ್ರಿ ಪದಕ..! ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ..!