
ಹೊಸನಗರ ತಾಲೂಕಿನ ಕೇಶವಪುರ ಮಾರುತಿಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಜ್ವಾನ ಗ್ರಾಮದ ಹೂವಿನಕೋಣೆ ಈಗ ಸುದ್ದಿಯಲ್ಲಿದೆ.ಎರಡು ಕುಟುಂಬಗಳು ಇರುವ ಊರಿನಲ್ಲಿ ಬಹುತೇಕ ಗಂಗಾಮತಸ್ಥರೇ ಇದ್ದಾರೆ ಊರಿನಲ್ಲಿ ಸುಮಾರು 45 ಮನೆಗಳಿವೆ ಮಟ್ಟಿ ಮನೆ ಹಾಗೂ ಒಡ್ಡಿಮನೆ ಎರಡು ಕುಟುಂಬಗಳು ಇರುವ ಊರಿನಲ್ಲಿ ಒಂದರಿಂದ ಐದನೇ ತರಗತಿಯ ಸರ್ಕಾರಿ ಶಾಲೆ ಇದೆ ಸುಮಾರು 18 ಜನ ಮಕ್ಕಳು ಇಲ್ಲಿ ಓದುತ್ತಿದ್ದಾರೆ.
ಶಾಲೆಯ ನೀರಿನ ಟ್ಯಾಂಕಿಗೆ ವಿಷ :

ಹೂವಿನ ಕೋಣೆ ಸರ್ಕಾರಿ ಶಾಲೆಗೆ ತನ್ನದೇ ಆದ ಹೆಸರಿತ್ತು ಹಿಂದೆ ಅಲ್ತಾಫ್ ಹಾಗೂ ತೀರ್ಥ್ ಕುಮಾರ್ ಎನ್ನುವ ಶಿಕ್ಷಕರು ಇದ್ದಾಗ ಈ ಶಾಲೆ ಉತ್ತುಂಗ ಸ್ಥಿತಿಯಲ್ಲಿತ್ತು ಆಗ ಸುಮಾರು 35 ಜನ ಮಕ್ಕಳಿದ್ದರು ಈಗ ಅದು 18 ಜನಕ್ಕೆ ಇಳಿದಿದೆ ಈಗ ಅಲ್ತಾಫ್ ಹಾಗೂ ತೀರ್ಥ್ ಕುಮಾರ್ ಇಬ್ಬರ ಟೀಚರ್ ಗಳು ಇಲ್ಲ ಈಗ ಅತಿಥಿ ಟೀಚರ್ ಗಳು ಇದ್ದಾರೆ ಒಬ್ಬರು ಶಿವಮೊಗ್ಗದಿಂದ ಬಂದರೆ ಇನ್ನೊಬ್ಬರು ಸ್ಥಳೀಯ ವಿಜಯಪುರದಿಂದ ಬರುತ್ತಾರೆ ಸ್ಥಳೀಯವಾಗಿ ಬರುವ ಅತಿಥಿ ಟೀಚರ್ ಮಹಿಳೆ ಆಗಿದ್ದಾರೆ. ಇವರ ಜೊತೆಗೆ ಅಡುಗೆ ಮಾಡುವ ಸಿಬ್ಬಂದಿ ಒಬ್ಬರು ಇದ್ದಾರೆ ಒಟ್ಟಾರೆ ನಾಲ್ಕು ಜನ ಇದ್ದಾರೆ ಈ ಶಾಲೆ ಈಗ ಸುದ್ದಿಯಲ್ಲಿದೆ ಏಕೆಂದರೆ ಈ ಶಾಲೆಯ ನೀರಿನ ಟ್ಯಾಂಕಿಗೆ ವಿಷ ಹಾಕಲಾಗಿದೆ ಇದು ದೊಡ್ಡ ಮಟ್ಟದ ಸುದ್ದಿಯಾಗಿದ್ದು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕರಣ ತನಿಖೆ ನಡೆಸುವಂತೆ ಎಸ್ ಪಿ ಅವರಿಗೆ ಸೂಚಿಸಿದ್ದಾರೆ. ಎಸ್ ಪಿ ಅವರು ಕೂಡ ಸ್ಥಳಕ್ಕೆ ಭೇಟಿ ನೀಡಿ ಸುಮಾರು 2 ಗಂಟೆಗಳ ಕಾಲ ವಿಚಾರಣೆ ನಡೆಸಿ ನಾಲ್ಕು ತಂಡಗಳನ್ನು ರಚನೆ ಮಾಡಿ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಆದೇಶಿಸಿದ್ದಾರೆ. ಇವರ ಆದೇಶದ ಮೇರೆಗೆ ವಿವಿಧ ಹಂತಗಳಲ್ಲಿ ತನಿಖೆ ನಡೆಯುತ್ತಿದೆ ಆಡಳಿತ ಮಂಡಳಿ, ಶಾಲೆಯ ಶಿಕ್ಷಕರು, ಸಿಬ್ಬಂದಿಗಳು, ಪೋಷಕರು, ಊರಿನ ಜನರು, ಇವೆಲ್ಲದರ ಜೊತೆಗೆ ಶಾಲೆಯ ಮಕ್ಕಳನ್ನು ಪೊಲೀಸ್ ಇಲಾಖೆ ವಿಚಾರಣೆಗೆ ಒಳಪಡಿಸುತ್ತಿದೆ.
ಪತ್ರಿಕೆಗೆ ಒಂದಷ್ಟು ಅನುಮಾನಗಳು ಕಾಡುತ್ತಿದೆ..!
1)ಪ್ರಮುಖವಾಗಿ ಈ ಪ್ರಕರಣದಲ್ಲಿ ಸ್ಥಳೀಯವಾಗಿ ಆಡಳಿತ ಪಕ್ಷದ ಮುಖಂಡನೊಬ್ಬನ ಕೈವಾಡ ಇರುವ ಶಂಕೆ ವ್ಯಕ್ತವಾಗುತ್ತಿದೆ. ಬಿಜೆಪಿ ಕಾಂಗ್ರೆಸ್ ಪಕ್ಷಗಳ ರಾಜಕೀಯ ಸಂಘರ್ಷ , ವೈಯಕ್ತಿಕ ಸಂಘರ್ಷಗಳು, ತಮ್ಮ ಹಿಡಿತದಲ್ಲಿ ಶಾಲೆ ಹಾಗೂ ಊರು ಇರಬೇಕು ಎನ್ನುವ ಹಿಡನ್ ಅಜೆಂಡಾ ಹಾಗೂ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿಗಳು ತಮ್ಮ ಹಿಡಿತದಲ್ಲಿ ಇರಬೇಕು ಎನ್ನುವ ಬಯಕೆ ಇಲ್ಲಿ ಈ ಕೃತ್ಯಕ್ಕೆ ಕಾರಣವಾಗಿರಬಹುದು.
2) ಈ ವಿಷಪ್ರಸನ ಪ್ರಕರಣದಲ್ಲಿ ಮಕ್ಕಳ ಬಗ್ಗೆಯೂ ಅನುಮಾನ ವ್ಯಕ್ತವಾಗುತ್ತಿದೆ ಏಕೆಂದರೆ ಈ ಶಾಲೆಗೆ ಬರುವ ಬಹುತೇಕ ಮಕ್ಕಳು ಇದೆ ಊರಿನ ಜನರ ಮಕ್ಕಳು ಹಾಗಾಗಿ ದೊಡ್ಡವರು ವಿಷ ಹಾಕಲು ಹಿಂಜರಿಯುತ್ತಾರೆ ಏಕೆಂದರೆ ತಮ್ಮ ಮಕ್ಕಳಿಗೆ ತೊಂದರೆ ಆಗಬಹುದು ಎನ್ನುವ ಉದ್ದೇಶದಿಂದ ಹಾಗಾಗಿ ಮಕ್ಕಳು ಗೊತ್ತಿಲ್ಲದೆಯೋ ತಮಾಷೆಗೂ ಅಥವಾ ತಮ್ಮ ಮನೆಗಳಲ್ಲಿ ತೋಟ ಗದ್ದೆಗಳಿಗೆ ಔಷಧಿಗಳನ್ನು ಹೊಡೆಯಲು ಕಲಬೆರಿಕೆ ಮಾಡುವಾಗ ನೋಡಿದ್ದನ್ನು ಇಲ್ಲಿ ಮಾಡಿರಬಹುದು ಎನ್ನುವ ಶಂಕೆ ವ್ಯಕ್ತವಾಗುತ್ತಿದೆ.
3) ಮಕ್ಕಳೇ ಮಾಡಿದ್ದರೆ ಗೊತ್ತಿಲ್ಲದೆ ಮಾಡಿದ್ದರೆ ಸರಿ ಇಲ್ಲವೇ ಮಕ್ಕಳ ಕೈಯಲ್ಲಿ ದೊಡ್ಡವರು ಮಾಡಿಸಿದ್ದರೆ ಅದರ ಹಿಂದಿನ ಉದ್ದೇಶವೇನು..? ತಮ್ಮ ಬೇಳೆ ಬೇಯಿಸಿಕೊಳ್ಳಲು ಮಕ್ಕಳನ್ನು ಬಳಸಿಕೊಂಡರಾ..? ಸಿಕ್ಕಿ ಬಿದ್ದರೆ ತಮಗೆ ಗೊತ್ತಿಲ್ಲದೆ ಮಾಡಿದ್ದೇವೆ ಎಂದು ತಪ್ಪು ಒಪ್ಪಿಕೊಳ್ಳಿ ಎಂದು ಹೇಳಿಬಿಟ್ಟಿದ್ದರಾ..? ತನಿಖೆಯಿಂದ ಹೊರಬರಬೇಕಾಗಿದೆ.
4) ಹಾಗೆ ಮಕ್ಕಳೇ ಮಾಡಿರಬಹುದು ಎನ್ನುವುದಕ್ಕೆ ಇನ್ನೊಂದು ಪ್ರಬಲವಾದ ಸಾಕ್ಷಿ ಎಂದರೆ ಅದು ಪೇರಲೆ ಮರ ಶಾಲೆಯ ಹತ್ತಿರ ಒಂದು ಪೇರಲೆಯ ಮರ ಇದೆ ಆ ಮರದ ಮೇಲೆ ನೀರಿನ ಟ್ಯಾಂಕಿಗೆ ಹೋಗುವುದಕ್ಕೆ ಹೊಂದಿಕೆ ಆಗುವಂತೆ ಹಲಗೆಗಳನ್ನು ಹಾಕಲಾಗಿದೆ ವಿಶೇಷವೆಂದರೆ ಪೇರಲೆ ಮರವನ್ನು ಹತ್ತಿ ಆ ಹಲಗೆಗಳ ಮೇಲೆ ಹೋಗಿ ನೀರಿನ ಟ್ಯಾಂಕನ್ನು ನೋಡುವುದು ಮಕ್ಕಳೇ… ದೊಡ್ಡವರು ಇಲ್ಲಿ ಹೋಗಲಿಕ್ಕೆ ಆಗುವುದಿಲ್ಲ ಆದ್ದರಿಂದ ಮಕ್ಕಳು ಮಾಡಿರುವ ಸಾಧ್ಯತೆ ಬಹುತೇಕ ಅಧಿಕವಾಗಿದೆ ಆದರೆ ದೊಡ್ಡವರು ಇದಕ್ಕೆ ಸಹಕಾರ ನೀಡಿದರಾ..? ಏಕೆಂದರೆ ನೀರಿನ ಬಾಟಲಿನಲ್ಲಿ ವಿಷವನ್ನು ತೆಗೆದುಕೊಂಡು ಹೋಗಲಾಗಿದೆ ಅಷ್ಟು ದೊಡ್ಡ ಬಾಟಲಿಯನ್ನು ಇಟ್ಟುಕೊಂಡು ಮಕ್ಕಳು ಹೋಗಲು ಹೇಗೆ ಸಾಧ್ಯ..? ಒಂದೇ ಇಬ್ಬರು ಮಕ್ಕಳು ಸೇರಿ ಈ ಕೃತ್ಯ ಮಾಡಿರಬೇಕು..? ಇಲ್ಲವೇ ದೊಡ್ಡವರು ಯಾರಾದರೂ ಇವರಿಗೆ ಸಹಾಯ ಮಾಡಿರಬೇಕು..? ದೊಡ್ಡವರು ಮಾಡಿದ್ದರೆ ಅದರ ಹಿಂದಿನ ಉದ್ದೇಶವೇನು ಎನ್ನುವುದು ಗೊತ್ತಾಗಬೇಕು…
ಅನೈತಿಕ ಸಂಬಂಧ ವಿಷ ಹಾಕಲು ಪ್ರೇರಣೆ ಆಯ್ತಾ..?!
ಇದೆಲ್ಲದರ ಮಧ್ಯೆ ಒಂದಷ್ಟು ಅನೈತಿಕ ಸಂಬಂಧಗಳ ಬಗ್ಗೆ ಇಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ ಬಿಜೆಪಿ ಮುಖಂಡರೊಬ್ಬರ ಮಗ ಈ ಅನೈತಿಕ ಸಂಬಂಧದ ಪಾಲುದಾರ ಎನ್ನಲಾಗುತ್ತಿದೆ… ಹಾಗಾಗಿ ಸ್ಥಳೀಯ ಕಾಂಗ್ರೆಸ್ ಮುಖಂಡ ಸಿಟ್ಟಿಗೆದ್ದು ಇ ತರದ ಕೃತ್ಯ ಮಾಡಿಸಿರಬಹುದು ಎನ್ನುವ ಶಂಕೆ ವ್ಯಕ್ತವಾಗುತ್ತಿದೆ.
ಮುಂದೇನು..?!
- ಪೊಲೀಸರ ಸಮಗ್ರ ತನಿಖೆಯಿಂದ ಎಲ್ಲಾ ಕಹಿ ಸತ್ಯಗಳು ಹೊರ ಬರುತ್ತಾ..? ಸ್ಥಳೀಯ ಪ್ರಭಾವಿ ಮುಖಂಡನೊಬ್ಬನ ಕರೀ ನೆರಳು ಸಾಬೀತಾದರೆ ಆತನಿಗೆ ಶಿಕ್ಷೆ ಆಗುತ್ತಾ ಎನ್ನುವುದು ಯಕ್ಷಪ್ರಶ್ನೆ..
ಅತಿಥಿ ಟೀಚರ್ ಹಾಗೂ ಅಡುಗೆ ಸಿಬ್ಬಂದಿಯನ್ನು ಎತ್ತಂಗಡಿ ಮಾಡಿಸಲು ನಡೆಸಿದ ಪಿತೂರಿನಾ..? ಈ ದಿಕ್ಕಿನಲ್ಲೂ ತನಿಖೆ ಸಾಗಬೇಕು . ಬಿಜೆಪಿ ಕಾಂಗ್ರೆಸ್ ನ ಒಳಜಗಳಗಳು ಕೃತ್ಯಕ್ಕೆ ಕಾರಣವಾಯಿತೇ… ಪೊಲೀಸರ ಸಮಗ್ರ ತನಿಖೆಯಿಂದ ಎಲ್ಲವೂ ಹೊರಬರಬೇಕಾಗಿದೆ..
ಒಟ್ಟಾರೆ ಕುತೂಹಲಕಾರಿ ಆಗಿರುವ ಈ ಪ್ರಕರಣದಲ್ಲಿ ಹಲವು ಅನೈತಿಕ ಸಂಬಂಧಗಳು ಬಹಿರಂಗವಾಗಿರುವುದು ಕಟು ಸತ್ಯ ಪತ್ರಿಕೆ ಸೂಕ್ಷ್ಮವಾಗಿ ಗಮನಿಸಿದಾಗ ಮೇಲ್ನೋಟಕ್ಕೆ ಮಕ್ಕಳೇ ಈ ಕೃತ್ಯ ಮಾಡಿರಬಹುದು ಎನ್ನುವುದು ಕಂಡುಬರುತ್ತಿದೆ ಆದರೆ ಅದರ ಹಿಂದಿನ ಉದ್ದೇಶ ಸ್ಪಷ್ಟವಾಗಬೇಕು ಯಾರಿದ್ದಾರೆ ಇಲ್ಲ ಎನ್ನುವುದು ಗೊತ್ತಾಗಬೇಕು ಮಲೆನಾಡಿನಲ್ಲಿ ಈ ತರಹದ ಇನ್ನೊಂದು ಕೃತ್ಯ ನಡೆಯಬಾರದು …
ರಘುರಾಜ್ ಹೆಚ್ ಕೆ…9449553305…