Home ರಾಜ್ಯರಾಜ್ಯ ಸರ್ಕಾರಿ ನೌಕರರ ಸಂಘ ತೀರ್ಥಹಳ್ಳಿ ಶಾಖೆ ಇವರಿಂದ 75ನೇ ಸ್ವಾತಂತ್ರೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು!!

ರಾಜ್ಯ ಸರ್ಕಾರಿ ನೌಕರರ ಸಂಘ ತೀರ್ಥಹಳ್ಳಿ ಶಾಖೆ ಇವರಿಂದ 75ನೇ ಸ್ವಾತಂತ್ರೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು!!

by EDITOR NEWS WARRIORS

ಕೋವಿಡ್ ನಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿ, ತಮ್ಮ ಬಿಡುವಿಲ್ಲದ ಕಾರ್ಯಚಟುವಟಿಕೆ ನಡುವೆಯೂ ನಮ್ಮ ಕರೆಗೆ ಓಗೊಟ್ಟು ಸ್ವಯಂ ಪ್ರೇರಣೆಯಿಂದ ಇಂದು ರಕ್ತದಾನ ಮಾಡುವ ಮೂಲಕ ಎಪ್ಪತ್ತೈದನೆಯ ಸ್ವಾತಂತ್ರೋತ್ಸವನ್ನು ಸಮಾಜಮುಖಿಯಾಗಿ ಸಂಭ್ರಮಿಸಿದ ಎಲ್ಲಾ ಸಹೃದಯಿ ಬಂಧುಗಳಿಗೆ,

ಆಗಮಿಸಿದರೂ ತಾಂತ್ರಿಕ ಕಾರಣಗಳಿಂದ ರಕ್ತದಾನ ಮಾಡಲು ಸಾಧ್ಯವಾಗದ ಎಲ್ಲಾ ಸಹೃದಯಿ ಬಂಧುಗಳಿಗೆ,

ಮತ್ತು ..,

ರಕ್ತದಾನ ಮಾಡಲು ಪ್ರೇರೇಪಿಸಲು ಶ್ರಮವಹಿಸಿದ ಎಲ್ಲಾ ಸಹೃದಯಿ ಬಂಧುಗಳಿಗೆ,

ತಮ್ಮ ಸಮಾಜಮುಖಿ ಕಾಳಜಿ,ಬದ್ದತೆಗಳಿಗಾಗಿ ಕರ್ನಾಟಕ ರಾಜ್ಯ ಸಂಘ, ತೀರ್ಥಹಳ್ಳಿ ತಾಲ್ಲೂಕು ಶಾಖೆಯು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತದೆ.

ಕಾರ್ಯಕ್ರಮದ ಯಶಸ್ಸಿಗೆ ವಿಶೇಷ ಶ್ರಮವಹಿಸಿದ ನಮ್ಮ ಸಂಘದ ನಿಕಟಪೂರ್ವ ಗೌರವಾಧ್ಯಕ್ಷ ಶ್ರೀ ಆರ್ ಎಂ ಧರ್ಮಕುಮಾರ್, ತಾಲ್ಲೂಕು ಕಂದಾಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಶ್ರೀ ಮಂಜಣ್ಣ, ನಮ್ಮ ಸಂಘದ ಕ್ರೀಡಾ ಕಾರ್ಯದರ್ಶಿ ಶ್ರೀ ಜಯಪ್ರಕಾಶ್, ಜಂಟಿ ಕಾರ್ಯದರ್ಶಿ ಶ್ರೀ ಕೌಶಿಕ್, ಉಪಾಧ್ಯಕ್ಷರುಗಳಾದ ಶ್ರೀ ರಾಘವೇಂದ್ರ ಎಸ್, ಶ್ರೀಮತಿ ಸುಷ್ಮಾ ಎಸ್ ಪಿ, ಜಂಟಿ ಕಾರ್ಯದರ್ಶಿ ಶ್ರೀ ಎಲ್ಲಪ್ಪ ವಡ್ಡರ್, ಕೃಷಿ ಅಧಿಕಾರಿ ಶ್ರೀ ಅಜಿತ್, ಪೋಲಿಸ್ ಅಧಿಕಾರಿಗಳಾದ ಶ್ರೀ ಎಲ್ಲಪ್ಪನವರ್,ಶ್ರೀ ಶಿವಾನಂದ ಕೋಲಿ, ಸಹೃದಯಿ ನಾಗರೀಕ ಬಂಧುಗಳಾದ ಮಾರಿಕಾಂಬ ಡ್ರೈವಿಂಗ್ ಸ್ಕೂಲ್ ನ ಶ್ರೀ ಕವಿರಾಜ್, ಶ್ರೀ ಸುಭಾಷ್,ಕೃಷಿಕ ಶ್ರೀ ಮಹೇಶ್ವರ,ರಜತ್ ಮೋಟರ್ಸ್ ನ ಟಿ ವಿ ಸುರೇಶ್ ಶೆಟ್ಟಿ, ಸಂಘದ ಮ್ಯಾನೇಜರ್ ಶ್ರೀ ಕಾಡಪ್ಪ ಗೌಡ ಸೇರಿದಂತೆ ಎಲ್ಲಾ ಸಹೃದಯಿ ಬಂಧುಗಳಿಗೂ ತುಂಬು ಹೃದಯದ ಧನ್ಯವಾದಗಳು.

ಇಲಾಖಾವಾರು ರಕ್ತದಾನಿಗಳ ವಿವರ ಈ ಕೆಳಕಂಡಂತಿದೆ.

ಕಂದಾಯ. : 10
ಆರ್ ಡಿ ಪಿ ಆರ್ : 6
ಕೃಷಿ : 5
ಸಾರ್ವಜನಿಕ ಬಂಧುಗಳು: 5
ಆರೋಗ್ಯ. : 4
ಭೂಮಾಪನಾ : 2
ಪೋಲಿಸ್ : 2
——————————-
ಒಟ್ಟು : 34
——————————
ಇದೇ ದಿನ ಪ್ರಥಮ ಬಾರಿ ರಕ್ತದಾನ ಮಾಡಿದ ದಾನಿಗಳ ಸಂಖ್ಯೆ : 7

ರಕ್ತದಾನ ಮಾಡಿದ, ಸಹಕರಿಸಿದ ಎಲ್ಲಾ ಸಹೃದಯಿ ಬಂಧುಗಳಿಗೂ ಮತ್ತೊಮ್ಮೆ ಹೃತ್ಪೂರ್ವಕ ಧನ್ಯವಾದಗಳು.
????????????????????????????????
ಅಧ್ಯಕ್ಷರು ಮತ್ತು ಸದಸ್ಯರು ರಾಜ್ಯ ಸರ್ಕಾರಿ ನೌಕರರ ಸಂಘ
ತಾಲ್ಲೂಕು ಶಾಖೆ, ತೀರ್ಥಹಳ್ಳಿ…

ವರದಿ.. ರಘುರಾಜ್ ಹೆಚ್. ಕೆ…

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ….9449553305/7892830899…

Related Posts

Leave a Comment

Latest news
Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga : ದೊಡ್ಡಪೇಟೆ ಪೊಲೀಸರ ಮಹತ್ವದ ಕಾರ್ಯಾಚರಣೆ ನೇಪಾಳಿ ಮಂಜ ಅಂದರ್..! Railway shivamogga: ರೈಲ್ವೆ ಹಳಿಗೆ ಬಿದ್ದ ಮಹಿಳೆ ಯಾರು..?! Health department: ಆರೋಗ್ಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದ ಹರ್ಷ ಗುಪ್ತಾ ವರ್ಗಾವಣೆ..! 26 ವರ್ಷ ಸೇವೆ 30 ಸಲ ಎತ... North East police:ಯಲಹಂಕ ನ್ಯೂಟೌನ್ ಪೊಲೀಸರ ಮಹತ್ವದ ಕಾರ್ಯಾಚರಣೆ..! ವಿದೇಶಿ ಪ್ರಜೆಯಿಂದ ₹2 ಕೋಟಿ ಮೌಲ್ಯದ 2 ಕೆ.ಜ... ತೀರ್ಥಹಳ್ಳಿ : ನಾಬಳ ಶಚಿಂದ್ರ ಹೆಗ್ಡೆ ಪತ್ನಿ ಶ್ರೀಮತಿ ಅಚಲಾ ಶಚಿಂದ್ರ ಹೆಗ್ಡೆ ಇನ್ನಿಲ್ಲ...! ಏನಾಗಿತ್ತು ಇವರಿಗೆ..?!... ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ..! Shivamogga police : ಅಡಿಶನಲ್ ಎಸ್ ಪಿ ರಮೇಶ್ ಕುಮಾರ್ ಜೊತೆ ಕ್ರೈಂ ವಿಭಾಗದ ಇಬ್ಬರಿಗೆ ಮುಖ್ಯಮಂತ್ರಿ ಪದಕ..! ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ..!