Home ರಾಜ್ಯಸಿ,ಟಿ ರವಿ ವಿವಾದಾತ್ಮಕ ಹೇಳಿಕೆ ನೆಹರುಗೆ ಹುಕ್ಕಾ ಬೇಕಿತ್ತು ಹೇಳಿಕೆ ಬೆನ್ನಲ್ಲೇ,ವಾಜಪೇಯಿಗೆ ಎರಡು ಪೆಗ್ ಸಾಕಾಗಿತ್ತು,‌ಕಾಂಗ್ರೆಸ್ ಶಾಸಕ ವಿವಾದಾತ್ಮಕ ಹೇಳಿಕೆ….. (ಅಪರೂಪದ ಫೋಟೋಗಳ ಸಮೇತ)….

ಸಿ,ಟಿ ರವಿ ವಿವಾದಾತ್ಮಕ ಹೇಳಿಕೆ ನೆಹರುಗೆ ಹುಕ್ಕಾ ಬೇಕಿತ್ತು ಹೇಳಿಕೆ ಬೆನ್ನಲ್ಲೇ,ವಾಜಪೇಯಿಗೆ ಎರಡು ಪೆಗ್ ಸಾಕಾಗಿತ್ತು,‌ಕಾಂಗ್ರೆಸ್ ಶಾಸಕ ವಿವಾದಾತ್ಮಕ ಹೇಳಿಕೆ….. (ಅಪರೂಪದ ಫೋಟೋಗಳ ಸಮೇತ)….

by EDITOR NEWS WARRIORS
ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ,ಟಿ ರವಿ ಸದಾ ಒಂದಿಲ್ಲೊಂದು ಹೇಳಿಕೆ ನೀಡುತ್ತಾ ಸುದ್ದಿಯಲ್ಲಿರುತ್ತಾರೆ.

ಈಗವರು ಸುದ್ದಿಯಲ್ಲಿರುವುದು ಕಾಂಗ್ರೆಸ್ ನ ಹಿರಿಯ ನಾಯಕರ ವಿರುದ್ಧ ನೀಡುತ್ತಿರುವ ಹೇಳಿಕೆಗಳು.ಹಲವು ಟೀಕೆ-ಟಿಪ್ಪಣಿಗಳಿಗೆ ಗುರಿಯಾಗುತ್ತಿದೆ. ನೆಹರು ಹುಕ್ಕಾ ಸೇದುತ್ತಿದ್ದರು ಡ್ರಿಂಕ್ಸ್ ಮಾಡುತ್ತಿದ್ದರು. ಆದ್ದರಿಂದ ಹಲವು ಯೋಜನೆಗಳಿಗೆ ನೆಹರು, ಇಂದಿರಾ ಹೆಸರಿಡುವ ಕಾಂಗ್ರೆಸ್ನನವರು ಬಾರ್ ಗಳಿಗೆ , ಹುಕ್ಕಾ ಸೆಂಟರ್ ಗಳಿಗೆ ನೆಹರು ,ಇಂದಿರಾ, ಹೆಸರಿಡಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಹೇಳಿಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್ ನಾಯಕರುಗಳು ಸಿ,ಟಿ ರವಿ ಇನ್ನೂ ಬಚ್ಚಾ ಎಂದು ಕೆಲವರು ಹೇಳಿದರೆ, ಸ್ವಾತಂತ್ರ್ಯ ಬಂದಾಗ ಸಿಟಿ ರವಿ ಇನ್ನೂ ಹುಟ್ಟಿರಲಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ.
ಆದರೆ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ ಖರ್ಗೆ ಒಂದು ಹೆಜ್ಜೆ ಮುಂದೆ ಹೋಗಿ ಅಜಾತಶತ್ರು ಎಂದು ಕರೆಸಿಕೊಳ್ಳುತ್ತಿದ್ದ. ಬಿಜೆಪಿಯ ಪ್ರಶ್ನಾತೀತ ನಾಯಕರಾಗಿದ್ದ ದಿವಂಗತ ಮಾಜಿ ಪ್ರಧಾನಿ ವಾಜಪೇಯಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಪ್ರಿಯಾಂಕ ಖರ್ಗೆ ವಾಜಪೇಯಿ ಡ್ರಿಂಕ್ ರ್ ಆಗಿದ್ದರು. ಅವರಿಗೆ ಡೈಲಿ ಎರಡು ಪೆಗ್ ವಿಸ್ಕಿ ಬೇಕಾಗಿತ್ತು.
ಈಗ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ ವಾಜಪೇಯಿ ಹೆಸರನ್ನು ಬಾರ್ ಗಳಿಗೆ ಇಡಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹಾಗೇ ಮುಂದುವರೆದು ವೀರ ಸಾವರ್ಕರ್ ಯಾರು? ಅವರ ಕೊಡುಗೆ ಭಾರತಕ್ಕೆ ಏನು? ಎಂದು ಪ್ರಶ್ನೆ ಮಾಡಿದ್ದಾರೆ.

ಒಟ್ಟಿನಲ್ಲಿ ಮಾಜಿ ಪ್ರಧಾನ ಮಂತ್ರಿಗಳ ಹೆಸರು ಗಳನ್ನು ತೆಗೆದುಕೊಂಡು ಈಗಿನ ಕಾಂಗ್ರೆಸ್, ಬಿಜೆಪಿ ನಾಯಕರುಗಳು ವಿವಾದದ ಹೇಳಿಕೆಗಳನ್ನು ನೀಡುವುದು ಎಷ್ಟು ಸರಿ ಆ ಮೂಲಕ ಸಮಾಜದಲ್ಲಿ ಸಾಮರಸ್ಯವನ್ನು ಹಾಳು ಮಾಡುವುದು ಇವರ ಉದ್ದೇಶನಾ? ಹೆಸರು ಮಾಡುವುದು ಇವರ ಉದ್ದೇಶನಾ? ಕೋವಿ ಡ್ ಸಾಂಕ್ರಮಿಕ ಕಾಯಿಲೆ, ವ್ಯಾಪಕ ಮಳೆ, ಜನರ ಆರ್ಥಿಕ ಸಂಕಷ್ಟ ಕೇಳುವ ಬದಲು ಈ ತರದ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಾ ಕಾಲಹರಣ ಮಾಡುವುದು ಎಷ್ಟು ಸರಿ? ಎನ್ನುವುದು ಸಾಮಾನ್ಯ ಜನರ ಪ್ರಶ್ನೆ ಇನ್ನುಮುಂದಾದರೂ ಇದಕ್ಕೆ ಬ್ರೇಕ್ ಹಾಕುತ್ತಾರ? ಜನರ ಸಂಕಷ್ಟಗಳಿಗೆ ಧ್ವನಿ ಯಾಗುತ್ತಾರ? ಕಾದು ನೋಡೋಣ….

ವರದಿ …ರಘುರಾಜ್ ಹೆಚ್. ಕೆ…

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ…9449553305/7892830899…

Related Posts

Leave a Comment

Latest news
Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga : ದೊಡ್ಡಪೇಟೆ ಪೊಲೀಸರ ಮಹತ್ವದ ಕಾರ್ಯಾಚರಣೆ ನೇಪಾಳಿ ಮಂಜ ಅಂದರ್..! Railway shivamogga: ರೈಲ್ವೆ ಹಳಿಗೆ ಬಿದ್ದ ಮಹಿಳೆ ಯಾರು..?! Health department: ಆರೋಗ್ಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದ ಹರ್ಷ ಗುಪ್ತಾ ವರ್ಗಾವಣೆ..! 26 ವರ್ಷ ಸೇವೆ 30 ಸಲ ಎತ... North East police:ಯಲಹಂಕ ನ್ಯೂಟೌನ್ ಪೊಲೀಸರ ಮಹತ್ವದ ಕಾರ್ಯಾಚರಣೆ..! ವಿದೇಶಿ ಪ್ರಜೆಯಿಂದ ₹2 ಕೋಟಿ ಮೌಲ್ಯದ 2 ಕೆ.ಜ... ತೀರ್ಥಹಳ್ಳಿ : ನಾಬಳ ಶಚಿಂದ್ರ ಹೆಗ್ಡೆ ಪತ್ನಿ ಶ್ರೀಮತಿ ಅಚಲಾ ಶಚಿಂದ್ರ ಹೆಗ್ಡೆ ಇನ್ನಿಲ್ಲ...! ಏನಾಗಿತ್ತು ಇವರಿಗೆ..?!... ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ..! Shivamogga police : ಅಡಿಶನಲ್ ಎಸ್ ಪಿ ರಮೇಶ್ ಕುಮಾರ್ ಜೊತೆ ಕ್ರೈಂ ವಿಭಾಗದ ಇಬ್ಬರಿಗೆ ಮುಖ್ಯಮಂತ್ರಿ ಪದಕ..! ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ..!