Home ಶಿವಮೊಗ್ಗರಾಷ್ಟ್ರಮಟ್ಟದಲ್ಲಿ ವಿಜೇತರಾಗಿ ರಾಜ್ಯಕ್ಕೆ ಹಾಗೂ ಶಿವಮೊಗ್ಗ ಜಿಲ್ಲೆಗೆ ಕೀರ್ತಿತಂದ ಗೋಪಾಳದ ಪೊದಾರ್ ಶಾಲೆಯ ವಿದ್ಯಾರ್ಥಿಗಳು..!

ರಾಷ್ಟ್ರಮಟ್ಟದಲ್ಲಿ ವಿಜೇತರಾಗಿ ರಾಜ್ಯಕ್ಕೆ ಹಾಗೂ ಶಿವಮೊಗ್ಗ ಜಿಲ್ಲೆಗೆ ಕೀರ್ತಿತಂದ ಗೋಪಾಳದ ಪೊದಾರ್ ಶಾಲೆಯ ವಿದ್ಯಾರ್ಥಿಗಳು..!

by EDITOR NEWS WARRIORS

ರಾಷ್ಟ್ರಮಟ್ಟದಲ್ಲಿವಿಜೇತರಾಗಿ ರಾಜ್ಯಕ್ಕೆಹಾಗೂ ಶಿವಮೊಗ್ಗ ಜಿಲ್ಲೆಗೆ ಕೀರ್ತಿತಂದ ಗೋಪಾಳದ ಪೊದಾರ್ ಶಾಲೆಯ ವಿದ್ಯಾರ್ಥಿಗಳು CBSE ಶಾಲೆಗಳ ರಾಷ್ಟ್ರ ಮಟ್ಟದ ವಿಜ್ಞಾನ ವಸ್ತುಪ್ರದರ್ಶನ 2024-25ನೇ ಸಾಲಿನ ಅಂತಿಮ ಹಂತದ ಸ್ಪರ್ಧೆಯು ಅಮೈಟಿ ಇಂಟರ್ನ್ಯಾಷನಲ್ ಸ್ಕೂಲ್,ಗುರುಗ್ರಾವ್, ಹರಿಯಾಣದಲ್ಲಿಆಯೋಜಿಸಲಾಗಿತ್ತು.

ಜನವರಿ 30 ರಿಂದ ಫೆಬ್ರವರಿ 01 ರವರೆಗೆ ಆಯೋಜಿಸಲಾಗಿದ್ದ ಈ ರಾಷ್ಟ್ರ ಮಟ್ಟದ ವಿಜ್ಞಾನ ವಸ್ತುಪ್ರದರ್ಶನದಲ್ಲಿ ರಾಷ್ಟ್ರದಾದ್ಯಂತ ಒಟ್ಟು429 ಶಾಲೆಗಳು ವಿವಿಧ ಮಾದರಿಗಳ ಮೂಲಕ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಹಾಗೆಯೇ ಗೋಪಾಳದ ಪೊದಾರ್ ಇಂಟರ್ನ್ಯಾಷನಲ್ ಸ್ಕೂಲ್ ವತಿಯಿಂದ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಅದ್ವಿತೀಯ ಬ್ಲಾಕ್ ಸೋಲ್ಜರ್ ಫ್ಲೈ ಎನ್ನುವ ಶೀರ್ಷಿಕೆ ಅಡಿಯಲ್ಲಿ ಜೂನಿಯರ್ ವಿಭಾಗದಲ್ಲಿಸಿದ್ಧಾಂತ ಬಿ ಪೃಥ್ವಿ ಮತ್ತು ಡಿ.ಆರ್ ಪ್ರಣಿತ್ ರೆಡ್ಡಿ ಸ್ಪರ್ಧೆಯಲ್ಲಿ ಭಾಗವಹಿಸಿ ರಾಷ್ಟ್ರಮಟ್ಟದಲ್ಲಿ ವಿಜೇತರಾಗಿದ್ದಾರೆ. ಇಂತಹ ಅಮೋಘ ಸಾಧನೆಯ ಬೆನ್ನೆಲುಬಾಗಿ ನಿಂತು ಮಕ್ಕಳಿಗೆ ಮಾರ್ಗದರ್ಶನ ಮಾಡಿದ ಶ್ರೀಮತಿ ಶ್ವೇತಾ ಎಂ.ಎಸ್ ರವರಿಗೆ ಶಾಲೆಯ ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿಯವರು ಶುಭಕೋರಿದ್ದಾರೆ.

ವಿದ್ಯಾರ್ಥಿಯಾದ ಸಿದ್ಧಾಂತ.ಬಿ.ಪೃಥ್ವಿ ಮೆಟ್ರೋಯುನೈಟೆಡ್ ಹಾಸ್ಪಿಟಲ್ ಮೆಡಿಕಲ್ ಡೈರೆಕ್ಟರ್ ಆಗಿರುವ ಶ್ರೀಯುತ. ಡಾ .ಪೃಥ್ವಿಬಿ.ಸಿ ಹಾಗೂ ಅಸೋಸಿಯೇಟ್ ಪ್ರೊಫೆಸರ್ SIMS ನಲ್ಲಿಕಾರ್ಯನಿರ್ವಹಿಸುತ್ತಿರುವ ಶ್ರೀಮತಿ ಡಾ. ರೂಪಶ್ರೀ.ಎಸ್ ದಂಪತಿಗಳ ಪುತ್ರನಾಗಿದ್ದಾನೆ. ವಿದ್ಯಾರ್ಥಿಡಿ .ಆರ್. ಪ್ರಣಿತ್ ರೆಡ್ಡಿಶ್ರೀಮತಿ ಅನುಷಾ ಕೆ ಬಿ ಹಾಗೂ ಶ್ರೀಯುತ ರಮೇಶ್ ಡಿ.ಎಸ್ ದಂಪತಿಗಳ ಪುತ್ರನಾಗಿದ್ದಾನೆ.

ರಾಷ್ಟ್ರಮಟ್ಟದಲ್ಲಿಶಿವಮೊಗ್ಗ ನಗರವನ್ನುಪ್ರತಿನಿಧಿಸಿ ಶಾಲೆಗೆ, ಜಿಲ್ಲೆಗೆ ಹಾಗೂ ರಾಜ್ಯಕ್ಕೆಕೀರ್ತಿತಂದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಪರಿಶ್ರಮಕ್ಕೆಶಾಲೆಯ ಪ್ರಾಂಶುಪಾಲರಾದ ಡಾ.ಸರೋಜಾ ಬಿ ಶಿಳ್ಳಿನ್, ಆಡಳಿತ ಮಂಡಳಿಯವರಾದ ಶ್ರೀಯುತ ಸುರೇಶ್ ಕುಮಾರ್, ಕೋಆರ್ಡಿನೇಟರ್ರ್ಸ್, ಬೋಧಕ ಮತ್ತುಬೋಧಕೇತರ ವೃಂದದವರು ಹಾರೈಸಿ ಶುಭಕೋರಿದ್ದಾರೆ.

Related Posts

Latest news
Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga : ದೊಡ್ಡಪೇಟೆ ಪೊಲೀಸರ ಮಹತ್ವದ ಕಾರ್ಯಾಚರಣೆ ನೇಪಾಳಿ ಮಂಜ ಅಂದರ್..! Railway shivamogga: ರೈಲ್ವೆ ಹಳಿಗೆ ಬಿದ್ದ ಮಹಿಳೆ ಯಾರು..?! Health department: ಆರೋಗ್ಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದ ಹರ್ಷ ಗುಪ್ತಾ ವರ್ಗಾವಣೆ..! 26 ವರ್ಷ ಸೇವೆ 30 ಸಲ ಎತ... North East police:ಯಲಹಂಕ ನ್ಯೂಟೌನ್ ಪೊಲೀಸರ ಮಹತ್ವದ ಕಾರ್ಯಾಚರಣೆ..! ವಿದೇಶಿ ಪ್ರಜೆಯಿಂದ ₹2 ಕೋಟಿ ಮೌಲ್ಯದ 2 ಕೆ.ಜ... ತೀರ್ಥಹಳ್ಳಿ : ನಾಬಳ ಶಚಿಂದ್ರ ಹೆಗ್ಡೆ ಪತ್ನಿ ಶ್ರೀಮತಿ ಅಚಲಾ ಶಚಿಂದ್ರ ಹೆಗ್ಡೆ ಇನ್ನಿಲ್ಲ...! ಏನಾಗಿತ್ತು ಇವರಿಗೆ..?!... ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ..! Shivamogga police : ಅಡಿಶನಲ್ ಎಸ್ ಪಿ ರಮೇಶ್ ಕುಮಾರ್ ಜೊತೆ ಕ್ರೈಂ ವಿಭಾಗದ ಇಬ್ಬರಿಗೆ ಮುಖ್ಯಮಂತ್ರಿ ಪದಕ..! ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ..!