Home ಶಿವಮೊಗ್ಗಹಾಡೋನಹಳ್ಳಿ ಅಕ್ರಮ ಮರಳು ದಂಧೆ ಮೇಲೆ ಮುಗಿಬಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ದಾಖಲಾಗುತ್ತಾ ಎಫ್ ಐ ಆರ್..? ಜಿಲ್ಲೆಯಲ್ಲಿ ಎಷ್ಟು ಕಡೆ ನಡೆಯುತ್ತಿದೆ ಅಕ್ರಮ ಮರಳು ದಂಧೆ ಯಾರಿದ್ದಾರೆ ಈ ದಂಧೆಯ ಹಿಂದೆ..?! ಫುಲ್ ಡಿಟೇಲ್ಸ್…!

ಹಾಡೋನಹಳ್ಳಿ ಅಕ್ರಮ ಮರಳು ದಂಧೆ ಮೇಲೆ ಮುಗಿಬಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ದಾಖಲಾಗುತ್ತಾ ಎಫ್ ಐ ಆರ್..? ಜಿಲ್ಲೆಯಲ್ಲಿ ಎಷ್ಟು ಕಡೆ ನಡೆಯುತ್ತಿದೆ ಅಕ್ರಮ ಮರಳು ದಂಧೆ ಯಾರಿದ್ದಾರೆ ಈ ದಂಧೆಯ ಹಿಂದೆ..?! ಫುಲ್ ಡಿಟೇಲ್ಸ್…!

by EDITOR NEWS WARRIORS

ಜಿಲ್ಲೆಯಲ್ಲಿ ವ್ಯಾಪಕವಾಗಿ ಅಕ್ರಮ ಮರಳುದಂದೆ ನಡೆಯುತ್ತಿದ್ದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪೋಲಿಸ್ ಇಲಾಖೆ ತಹಶೀಲ್ದಾರ್ ಒಳಗೊಂಡ ತಂಡ ನಿರಂತರವಾಗಿ ದಾಳಿ ನಡೆಸುತ್ತಿದ್ದರು ಈ ದಂಧೆ ನಿಂತಿಲ್ಲ ಇದಕ್ಕೆ ಹಲವು ಕಾಣದ ಕೈಗಳು ಕೈಜೋಡಿಸಿರುವುದು ಈ ದಂಧೆ ಈ ಮಟ್ಟದಲ್ಲಿ ನಡೆಯಲು ಕಾರಣ ಎಂದರೆ ತಪ್ಪಾಗಲಾರದು. ಅದರಲ್ಲೂ ಕೆಲವು ಜನ ಪ್ರತಿನಿಧಿಗಳು ತಮ್ಮ ಕಾರ್ಯಕರ್ತರನ್ನು ತಮ್ಮ ಬೆಂಬಲಿಗರನ್ನು ಬೆಂಬಲಿಸುವ ಭರದಲ್ಲಿ ಅಕ್ರಮ ಮರಳು ದಂಧೆಗೂ ಕೂಡ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ. ಇದರಿಂದ ದಂಧೆ ಮಾಡುವವರು ಹಗಲು ರಾತ್ರಿ ಎನ್ನದೇ ರಾಜ ರೋಷವಾಗಿ ಲಾರಿ, ಟಿಪ್ಪರ್ ಟ್ರ್ಯಾಕ್ಟರ್ ಗಳನ್ನು ಬಳಸಿ ಮರಳನ್ನು ಸಾಗಿಸುತ್ತಿದ್ದಾರೆ.

ಗಣಿ ಮತ್ತು ಭೂವಿಜ್ಞಾನ ಇಲಾಖೆಯ ದಾಳಿ :

ನಿನ್ನೆ ತಡರಾತ್ರಿ ಸುಮಾರು 12:30 ವೇಳೆಗೆ ಹಾಡೋನಹಳ್ಳಿ ಮರಳು ಕೋರೆಯ ಮೇಲೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು ಈ ದಾಳಿಯ ವೇಳೆ ನಾಲ್ಕು ಟ್ರ್ಯಾಕ್ಟರ್ ಗಳು ಸಿಕ್ಕರೂ ಕೂಡ ಗಣಿ ಇಲಾಖೆಯ ಸಿಬ್ಬಂದಿಗಳು ತಡೆದರೆ ನಿಲ್ಲಿಸದೆ ಪರಾರಿಯಾಗಿದ್ದಾರೆ. ನಂತರ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಇಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿರುವುದರ ಕುರುಹುಗಳನ್ನು ಪತ್ತೆ ಹಚ್ಚಿ ಇದ್ದ ಆರು ಜೆಸಿಬಿ ಗಳಲ್ಲಿ ಒಂದು ಜೆಸಿಬಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದು ಉಳಿದ ಐದು ಜೆಸಿಬಿ ಗಳು ಪರಾರಿಯಾಗಿದ್ದು ಒಂದು ಜೆಸಿಬಿಯನ್ನು ಗ್ರಾಮಾಂತರ ಠಾಣೆಯ ವಶಕ್ಕೆ ನೀಡಿದ್ದಾರೆ ಜೊತೆಗೆ ಅಬ್ಬಲಗೆರೆ ಹತ್ತಿರ ಮರಳು ಸಾಗಿಸುತ್ತಿದ್ದ ಟಿಪ್ಪರ್ ಒಂದನ್ನು ವಶಪಡಿಸಿಕೊಂಡಿದ್ದು ಅದನ್ನು ಕೂಡ ಗ್ರಾಮಾಂತರ ಠಾಣೆಯ ವಶಕ್ಕೆ ನೀಡಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವಿಜ್ಞಾನಿ ಪ್ರಿಯಾ ದೊಡ್ಡ ಗೌಡರ್ ಅವರನ್ನು ಒಳಗೊಂಡ ತಂಡ ಕಾರ್ಯಚರಣೆ ನಡೆಸಿದ್ದು ಈಗ ಈ ಜೆಸಿಬಿಯ ಮಾಲೀಕರ ಹಾಗೂ ಪಾಲುದಾರರ ಮೇಲೆ ಠಾಣೆಯಲ್ಲಿ ಯಾರ ಮುಲಾಜಿಗೂ ಒತ್ತಡಕ್ಕೂ ಮಣಿಯದೆ ಪೊಲೀಸ್ ಇಲಾಖೆ ಹಾಗೂ ಗಣಿ ಇಲಾಖೆ ಎಫ್ಐಆರ್ ದಾಖಲಿಸುತ್ತಾರ..?! ಅಥವಾ ಪಿಸಿಆರ್ ಮಾಡುತ್ತಾರಾ..?! ಕಾದು ನೋಡಬೇಕು….

ಜಿಲ್ಲೆಯಲ್ಲಿ ಎಷ್ಟು ಕಡೆ ನಡೆಯುತ್ತಿದೆ ಅಕ್ರಮ ಮರಳು ದಂಧೆ..?!

ಶಿವಮೊಗ್ಗ ಜಿಲ್ಲೆಯಲ್ಲಿ ತೀರ್ಥಹಳ್ಳಿ ತಾಲೂಕಿನ ಬುಕ್ಕಲಾಪುರದಲ್ಲಿ ಎರಡು, ದಬ್ಬಣಗದ್ದೆ, ಮುಂಡೂಳ್ಳಿ, ಗಬಡಿ ಅಧಿಕೃತ ಕೋರೆಗಳಾಗಿದ್ದು ಇದರಲ್ಲಿ ಎರಡು ಖಾಸಗಿ ಕೋರೆಗಳು , ಮೂರು ಸರ್ಕಾರಿ ಕೋರೆಗಳಿದ್ದು ಅದರಲ್ಲಿ ಮುಂಡೂಳ್ಳಿ ಕೋರೆ ಹೊರತುಪಡಿಸಿ ಉಳಿದ ಮರಳು ಕೋರೆಗಳು ಇನ್ನೂ ಪ್ರಾರಂಭವಾಗಿಲ್ಲ ಆದರೆ ಉಳಿದ ಕಡೆ ಅಕ್ರಮ ಮರಳು ದಂಧೆ ವ್ಯಾಪಕವಾಗಿ ನಡೆಯುತ್ತಿದೆ ಹಾಗಾದರೆ ಎಲ್ಲೆಲ್ಲಿ ನಡೆಯುತ್ತಿದೆ ಈ ದಂಧೆ…. ಕೂಡ್ಲಿ, ಒಡೆಂಪುರ, ಹಾಡೋನಹಳ್ಳಿ, ಸೂಗೂರು, ಹೊಳೆಹಟ್ಟಿ, ಹೊಳೆಹನಸನವಾಡಿ, ಬೇಡರ ಹೊಸಹಳ್ಳಿ, ಲಿಂಬೆಗುಂದಿ, ಪಿಲ್ಲಂಗೆರೆ, ಹೊಯ್ಸನಹಳ್ಳಿ, ಸಿದ್ಲಿಪುರ, ಕುಸ್ಕೂರ್, ಮತ್ತೂರು ಭಾಗದಲ್ಲಿ ವ್ಯಾಪಕವಾಗಿ ಈ ದಂಧೆ ನಡೆಯುತ್ತಿದೆ. ಇದಲ್ಲದೆ ತುಂಗಾ ನಗರ ಠಾಣೆಯ ವ್ಯಾಪ್ತಿಗೆ ಒಳಪಡುವ ಮಂಡ್ಲಿ ಭಾಗದಲ್ಲಿ ಅಕ್ರಮ ಮರಳನ್ನು ಸಾಕಷ್ಟು ಕಡೆ ಶೇಖರಿಸಿ ಇಟ್ಟಿದ್ದು ಇಲ್ಲಿಂದಲೇ ಎಲ್ಲ ಕಡೆ ಲಾರಿಗಳಲ್ಲಿ ಮರಳು ರವಾನೆ ಆಗುತ್ತದೆ ಇದರ ಮೇಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪೊಲೀಸ್ ಇಲಾಖೆ ಅಧಿಕಾರಿಗಳು ದಾಳಿ ನಡೆಸಬೇಕು. ಇದರ ಮಾಲೀಕರ ವಿರುದ್ಧ ಹಾಗೂ ಈ ಜಾಗದ ಮಾಲೀಕರ ವಿರುದ್ಧ ಪ್ರಕರಣಗಳು ದಾಖಲಾಗಬೇಕು.

ಜಿಲ್ಲಾಧಿಕಾರಿಗಳ ಖಡಕ್ ಆದೇಶ ಪಾಲನೆಯಾಗಬೇಕು..!

ಜಿಲ್ಲಾಧಿಕಾರಿಗಳು ಇತ್ತೀಚೆಗೆ ಅಕ್ರಮ ಮರಳು ದಂಧೆ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಖಡಕ್ ಆದೇಶ ನೀಡಿದ್ದರು ಇದರ ಬೆನ್ನಲ್ಲೇ ನಿರಂತರ ದಾಳಿಗಳು ನಡೆಯುತ್ತಿದ್ದು ಜಿಲ್ಲಾಧಿಕಾರಿಗಳ ಆದೇಶ ಪಾಲನೆ ಆಗಬೇಕು ಜೊತೆಗೆ ಜಿಲ್ಲಾಧಿಕಾರಿಗಳು ಅಧಿಕೃತ ಮರಳುಗಾರಿಕೆಗು ಕೂಡ ಇರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಇಲ್ಲವಾದರೆ ಅವರ ವಿರುದ್ಧವೂ ಕೂಡ ಮಾಕದ್ದಮೆಗಳನ್ನು ದಾಖಲಿಸಿ ಎಂದು ಎಚ್ಚರಿಕೆ ನೀಡಿದ್ದಾರೆ.

ನಿಮಗಿದು ಗೊತ್ತಿರಲಿ…..

ಪತ್ರಿಕೆ ಹೆಸರು ಹೇಳಿಕೊಂಡು ಹಣ ವಸೂಲಿ ಮಾಡುತ್ತಿದ್ದಾರೆ ಎನ್ನುವ ಮಾಹಿತಿಗಳು ಕೇಳಿ ಬರುತ್ತಿವೆ ಆದರೆ ನಮಗೂ ಇದಕ್ಕೂ ಸಂಬಂಧವಿಲ್ಲ ಯಾರಾದರೂ ಹಣ ಕೇಳಿದರೆ… ನೇರವಾಗಿ ಪತ್ರಿಕೆ ಕಚೇರಿಗೆ ಕರೆ ಮಾಡಿ….

  • ರಘುರಾಜ್ ಹೆಚ್.ಕೆ…9449553305…7892830899....

Related Posts

Latest news
Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga : ದೊಡ್ಡಪೇಟೆ ಪೊಲೀಸರ ಮಹತ್ವದ ಕಾರ್ಯಾಚರಣೆ ನೇಪಾಳಿ ಮಂಜ ಅಂದರ್..! Railway shivamogga: ರೈಲ್ವೆ ಹಳಿಗೆ ಬಿದ್ದ ಮಹಿಳೆ ಯಾರು..?! Health department: ಆರೋಗ್ಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದ ಹರ್ಷ ಗುಪ್ತಾ ವರ್ಗಾವಣೆ..! 26 ವರ್ಷ ಸೇವೆ 30 ಸಲ ಎತ... North East police:ಯಲಹಂಕ ನ್ಯೂಟೌನ್ ಪೊಲೀಸರ ಮಹತ್ವದ ಕಾರ್ಯಾಚರಣೆ..! ವಿದೇಶಿ ಪ್ರಜೆಯಿಂದ ₹2 ಕೋಟಿ ಮೌಲ್ಯದ 2 ಕೆ.ಜ... ತೀರ್ಥಹಳ್ಳಿ : ನಾಬಳ ಶಚಿಂದ್ರ ಹೆಗ್ಡೆ ಪತ್ನಿ ಶ್ರೀಮತಿ ಅಚಲಾ ಶಚಿಂದ್ರ ಹೆಗ್ಡೆ ಇನ್ನಿಲ್ಲ...! ಏನಾಗಿತ್ತು ಇವರಿಗೆ..?!... ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ..! Shivamogga police : ಅಡಿಶನಲ್ ಎಸ್ ಪಿ ರಮೇಶ್ ಕುಮಾರ್ ಜೊತೆ ಕ್ರೈಂ ವಿಭಾಗದ ಇಬ್ಬರಿಗೆ ಮುಖ್ಯಮಂತ್ರಿ ಪದಕ..! ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ..!